ರಾಜ್ಯಪಾಲರನ್ನು ವಜಾ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ : ಮಂಜುಳಾ ನಾರಾಯಣನ್

ಶ್ರೀಮತಿ ಮಂಜುಳಾ ನಾರಾಯಣನ್
ರಾಜ್ಯ ಮಹಿಳಾ ಅಧ್ಯಕ್ಷರು ಯುವ ಕುರುಬರ ಸಂಘ ಬೆಂಗಳೂರು

*************

ಶಹಾಪೂರ : ದೇಶದಲ್ಲಿಯೇ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೆಸರು ಮಾಡಿ ಶೋಷಿತರ ಪರ ನಿಂತ ಒಳ್ಳೆಯ ಆಡಳಿತ ನೀಡಿದ ಸಿದ್ದರಾಮಯ್ಯನವರು. ಅವರ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನವರು ಸಲ್ಲದ ಆರೋಪಗಳನ್ನು ಹೊರೆಸಿ ಕೇಂದ್ರ ಸರಕಾರದಿಂದ ಒತ್ತಡ ತಂದು ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿಸಿದ್ದಾರೆ. ಕೂಡಲೇ ರಾಜ್ಯಪಾಲರನ್ನು ವಜಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ಯುವ ಕುರುಬರ ಸಂಘದ ಮಹಿಳಾ ಅಧ್ಯಕ್ಷರಾದ ಮಂಜುಳಾ ನಾರಾಯಣನ್ ಕಿಡಿ ಕಾರಿದ್ದಾರೆ. ಇಂದು ಬೆಂಗಳೂರು ನಗರದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು,ಅಲ್ಪಸಂಖ್ಯಾತರ ದಲಿತರ ಶೋಷಿತರ ಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದವರು ಸಿದ್ದರಾಮಯ್ಯನವರು. ಕೆಳವರ್ಗದ ಜನರಿಗೂ ಮೀಸಲಾತಿ ನೀಡಿ ಅಧಿಕಾರ ಕೊಟ್ಟವರು ಸಿದ್ದರಾಮಯ್ಯನವರು. ಇದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ನವರು ಯಾವುದೇ ದಾಖಲೆಯಿಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿಯ ಹೆಸರಿಗೆ ನೀಡಿದ ನಿವೇಶನಗಳನ್ನು ಆಧಾರವಾಗಿಟ್ಟುಕೊಂಡು ಮೂಡಾ ಹಗರಣವನ್ನು ರಾಜ್ಯಪಾಲರ ಮೂಲಕ ಒತ್ತಾಯ ಮಾಡಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿಸಿದ್ದಾರೆ. ರಾಜ್ಯಪಾಲರು ಒಂದು ಸಂವಿಧಾನ ಹುದ್ದೆಯಲ್ಲಿದ್ದುಕೊಂಡು ವಿಚಾರ ಮಾಡಬೇಕಿತ್ತು.

ಐದು ವರ್ಷಗಳ ಕಾಲ ಒಳ್ಳೆಯ ಆಡಳಿತ ನೀಡಿ ಮತ್ತೊಂದು ಬಾರಿ ಒಬ್ಬ ಅಹಿಂಧವರ್ಗದ ನಾಯಕ ಮುಖ್ಯಮಂತ್ರಿ ಆಗಿರುವುದು ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಸಹಿಸಲಾಗುತ್ತಿಲ್ಲ.ಯಾವುದೇ ಆರೋಪಗಳಿಲ್ಲದೆ ಇರುವ ಸಿದ್ದರಾಮಯ್ಯನವರನ್ನು ಇಳಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಇನ್ನಿಲ್ಲದ ಕುತಂತ್ರಗಳನ್ನು ಎಣೆಯುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ನಮ್ಮ ಯುವ ಘಟಕದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.ಶಂಕರ, ವಿಶ್ವನಾಥ, ಶಂಕರ ಮೌರ್ಯ, ನಾಗರಾಜ ಮಾಲಗತ್ತಿ,ಶ್ರೀಧರ್, ರಮೇಶ ಸೇರಿದಂತೆ ಇತರರು ಇದ್ದರು.

About The Author