ಸಿದ್ದು ರಾಜೀನಾಮೆ ಕೊಟ್ಟರೇ ಮಹಾಗಂಡಾಂತರ….!

ಶಹಾಪೂರ:ವಜ್ರದಂಥ ವ್ಯಕ್ತಿತ್ವ-ಪ್ರೊ.ನಂಜುಂಡಸ್ವಾಮಿ ಶಿಷ್ಯ ಇದು ಸಿಎಂ ಸಿದ್ದರಾಮಯ್ಯ ಕುರಿತ ಫ್ರೀಡಂ ಟಿವಿಯ ಎಕ್ಸ್‌ ಕ್ಲೂಸಿವ್‌ ಸ್ಟೋರಿ ವಜ್ರದಂಥ ವ್ಯಕ್ತಿತ್ವದ ಕರುನಾಡಿನ ರಾಜಕಾರಣಿ ಸಿದ್ದು ಕುರಿತ ವಿಶಿಷ್ಟ ಸ್ಟೋರಿ ಮುಡಾ ಸಂಕಷ್ಟದ ವೇಳೆ ಸಿದ್ದು ಪರ ಕೈ ಹೈಕಮಾಂಡ್‌ ಬಂಡೆಯಂತೆ ನಿಂತಿದ್ದೇಕೆಂಬ ಸ್ಟೋರಿ ಮೈಸೂರಿನ ಸಿದ್ಧರಾಮನ ಹುಂಡಿ ಸಿದ್ಧರಾಮಯ್ಯ ಬೆಳೆದು ಬಂದ ಬಗೆಯೇ ಅಂಥದ್ದು ಸಮಾಜವಾದಿ ಹಿನ್ನೆಲೆಯ ಸಿದ್ದು ಪ್ರೊ,ನಂಜುಂಡಸ್ವಾಮಿಯವರ ರೈತ ಚಳವಳಿಯಿಂದ ಬಂದವರು ರಾಜಕೀಯದ ಆರಂಭದಿಂದಲೂ ಕಾಂಗ್ರೆಸ್ ವಿರೋಧಿ ರಾಜಕಾರಣಿಯಾಗಿದ್ದ ಸಿದ್ಧರಾಮಯ್ಯ ರಾಜಕೀಯದ ಆರಂಭದಿಂದಲೂ ಕಾಂಗ್ರೆಸ್ ವಿರೋಧಿ ರಾಜಕಾರಣಿಯಾಗಿದ್ದ ಸಿದ್ಧರಾಮಯ್ಯ ರಾಜಕೀಯದ ಆರಂಭದಿಂದಲೂ ಕಾಂಗ್ರೆಸ್ ವಿರೋಧಿ ರಾಜಕಾರಣಿಯಾಗಿದ್ದ ಸಿದ್ಧರಾಮಯ್ಯ ಆದರೆ, ತಮ್ಮ ರಾಜಕೀಯ ಜೀವನದ ಉಚ್ಛ್ರಾಯ ಸ್ಥಿತಿ ತಲುಪಿದ್ದು ಕಾಂಗ್ರೆಸ್ ನಿಂದಲೇ ದೇವೆಗೌಡರ ಕುಟುಂಬ. ರಾಜಕಾರಣ,ಮತ್ತು ಧೃತರಾಷ್ಟ್ರ ಪ್ರೇಮದ ಬದ್ಧವಿರೋಧಿಯಾಗಿದ್ದ ಸಿದ್ದು ತಮ್ಮ ಈ ನಡೆಯಿಂದ 2006 ರಲ್ಲಿ ಕಾಂಗ್ರೆಸ್ ಪಕ್ಷದ ಅಂಗಳಕ್ಕೆ ಬಂದ ಸಿದ್ಧರಾಮಯ್ಯ ರಾಜಕೀಯ ಬದುಕಿನ ಸಂಧಿಗ್ಧ ಸಮಯದಲ್ಲಿ ಕಾಂಗ್ರೆಸ್ ಗೆ ಬಂದಿದ್ದ ಸಿದ್ಧರಾಮಯ್ಯ

ಅಂದು ಕಾಂಗ್ರೆಸ್ ನೆಲೆಯಿಂದ ಚದುರಿ ಹೋಗಿತ್ತು ರಾಜ್ಯದ ಬಹುಸಂಖ್ಯಾತ ಮುಡಾ ಸಂಕಷ್ಟದ ವೇಳೆ ಸಿದ್ದು ಪರ ಕೈ ಹೈಕಮಾಂಡ್‌ ಬಂಡೆಯಂತೆ ನಿಂತಿದ್ದೇಕೆ ಎನ್ನುವ ಸ್ಟೋರಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌ ಗೆ ಹತ್ತಿರವಾಗಿದ್ದೇ ಒಂದು ಇಂಟರೆಸ್ಟಿಂಗ್‌ ಸ್ಟೋರಿ ತಮ್ಮ ಸಂಘಟನಾ ಶಕ್ತಿ, ನೇರ ನಡೆ ನುಡಿಯಿಂದ ಹೈಕಮಾಂಡ್ ಗೆ ತುಂಬಾ ಹತ್ತಿರವಾಗಿದ್ರು ಸಿದ್ದು ತನ್ನ ಶಕ್ತಿಯನ್ನು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಮನದಟ್ಟು ಮಾಡಿದ್ದ ಸಿದ್ದು ವಿರೋಧಿಗಳ ಭಾರೀ ಷಡ್ಯಂತ್ರದ ನಡುವೆ ಬಲಾಢ್ಯ ಜಾತಿಗಳ ಪ್ರಬಲ ವಿರೋಧದ ನಡುವೆ ಪಾಲಿಟಿಕ್ಸ್‌ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಅಹಿಂದ ಎಂಬ ಅಭೇಧ್ಯ ಕೋಟೆಯನ್ನು ನಿರ್ಮಿಸಿಕೊಟ್ಟವರು ಸಿದ್ದು‌ ಹೀಗೆ ಕಾಂಗ್ರೆಸ್‌ ಹೈಕಮಾಂಡ್‌ ಗೆ ತೀರಾ ನಂಬಿಕೆಯ ವ್ಯಕ್ತಯಾಗಿ ಹೊಮ್ಮಿದ್ದ ಸಿದ್ದು. ರಾಹುಲ್‌-ಸಿದ್ದು ಚಾಕೋಲೆಟ್‌ ಪ್ರಸಂಗ ಇದು ಸಿಎಂ ಸಿದ್ದರಾಮಯ್ಯ ಕುರಿತ ಫ್ರೀಡಂ ಟಿವಿಯ ಎಕ್ಸ್‌ ಕ್ಲೂಸಿವ್‌ ಸ್ಟೋರಿ ವಜ್ರದಂಥ ವ್ಯಕ್ತಿತ್ವದ ಕರುನಾಡಿನ ರಾಜಕಾರಾಣಿ ಸಿದ್ದು ಕುರಿತ ವಿಶಿಷ್ಟ ಸ್ಟೋರಿ ಮುಡಾ ಸಂಕಷ್ಟದ ವೇಳೆ ಸಿದ್ದು ಪರ ಕೈ ಹೈಕಮಾಂಡ್‌ ಬಂಡೆಯಂತೆ ನಿಂತಿದ್ದೇಕೆ ಎನ್ನುವ ಸ್ಟೋರಿ ಈಗ ಹೇಳ್ತಿವಿ ಸಿದ್ದು, ಪರಮೇಶ್ವರ್‌ ಮತ್ತು ರಾಹುಲ್‌ ಗಾಂಧಿ ಚಾಕೋಲೆಟ್‌ ಪ್ರಸಂಗ ಇದು ರಾಹುಲ್ ಗಾಂಧಿ ಗೆ ಸಿದ್ದು ಹತ್ತಿರವಾಗಿದ್ದೇಗೆ ಅನ್ನೋ ಇಂಟರೆಸ್ಟಿಂಗ್‌ ಎಕ್ಸಾಂಪಲ್‌
ಅದು ಸಿದ್ಧರಾಮಯ್ಯ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಕಾಲ ಡಾ.ಜಿ ಪರಮೇಶ್ವರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಸಿದ್ಧರಾಮಯ್ಯ ಮತ್ತು ಪರಮೇಶ್ವರ್ ಮತ್ತಿತರರು ವಿಶೇಷ ವಿಮಾನದಲ್ಲಿ ಹೊರಟಿದ್ರು ರಾಹುಲ್ ಗಾಂಧಿಗೆ ಪ್ರಯಾಣ ಮಧ್ಯೆ ಚಾಕೊಲೇಟ್,ಚ್ಯೂಯಿಂಗ್ ಗಮ್ ತಿನ್ನುವ ಚಟ ಅವರ ಪಕ್ಕದಲ್ಲಿದ್ದ ಪರಮೇಶ್ವರ್ ಗೆ ರಾಹುಲ್‌ ಚ್ಯೂಯಿಂಗ್ ಗಮ್ ಕೊಡ್ತಾರೆ ಪರಮೇಶ್ವರ್ ಅದನ್ನು ತಕ್ಷಣ ತಗೊಂಡು ಬಾಯಿಗೆ ಹಾಕಿಕೊಳ್ತಾರೆ ಇದೇ ಹೊತ್ತಲ್ಲಿ ಸಿದ್ಧರಾಮಯ್ಯ ನವರಿಗೂ ರಾಹುಲ್ ಚ್ಯೂಯಿಂಗ್ ಕೊಡಲು ಹೋದ್ರ ಆಗ ಸಿದ್ಧರಾಮಯ್ಯ ಬೇಡ ಅಂತ ನಯವಾಗೇ ತಿರಸ್ಕರಿಸುತ್ತಾರೆ ರಾಹುಲ್ ಏಕೆ ಅಂದಾಗ ಸಿದ್ದು, ನಾನು ಷುಗರ್ ಪೇಷೆಂಟ್ ಅದಕ್ಕೇ ಬೇಡ ಅಂತಾರೆ ಹೌದಾ? ಎಂದು ಹುಬ್ಬೇರಿಸಿದ ರಾಹುಲ್,ಪರಮೇಶ್ವರ್ ಕಡೆ ತಿರುಗಿ ನಿಮಗೆ ಶುಗರ್‌ ಇಲ್ವಾ ಎಂದು ಕೇಳ್ತಾರೆ ಆಗ ಪರಮೇಶ್ವರ್ ಮುಜುಗರದಿಂದ ನನಗೂ ಇದೆ ಎಂದರಂತೆ ಮತ್ತೆ ಚ್ಯೂಯಿಂಗ್ ಕೊಟ್ಟಿದ್ದನ್ನ ತಿಂದಿರಲ್ಲಾ ಎಂದಾಗ ನೀವು ದೊಡ್ಡವರು.ಕೊಟ್ಟಿದ್ದನ್ನು ಬೇಡ ಅನ್ನ ಬಾರದು ಎಂದು ನಕ್ಕರಂತೆ
ಆಗ ರಾಹುಲ್ ಸಿದ್ಧರಾಮಯ್ಯನವರ ಕಡೆ ತಿರುಗಿ I like it ಎಂದರಂತೆ ಹೀಗೆ ಎಲ್ಲಿಯೂ ಚಮಚಾಗಿರಿ ಮಾಡದ ವ್ಯಕ್ತಿತ್ವ ಸಿದ್ದರಾಮಯ್ಯ ಅವ್ರದ್ದು ಹೈಕಮಾಂಡ್ ಮುಂದೆಯೂ ಜೀ ಹುಜೂರ್ ಎನ್ನದೆ ಎದೆಯುಬ್ಬಿಸಿ ನಡೆಯುವವರು ಸಿದ್ದು
ಹಾಗಾಗಿಯೇ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಅಹಿಂದ ಸಮುದಾಯಕ್ಕೆ ಸಿದ್ದು ಮೇಲೆ ಪ್ರೀತಿಇದು ಸೋನಿಯಾ ಮೇಡಂ ಮತ್ತವರ ಆಪ್ತರಿಗೆ ಚನ್ನಾಗಿ ಗೊತ್ತಿದೆ. 40 ಪರ್ಸೆಂಟ್‌ ವರ್ಸಸ್‌ ಪಾಯಿಂಟ್‌ 5 ಪರ್ಸೆಂಟ್‌ ಇದು ಸಿದ್ದು ಎಚ್ಚರಿಕೆಯ ಆಡಳಿತಕ್ಕೆ ಕನ್ನಡಿ ಹಿಡಿಯುವ ಸುದ್ದಿ ಇದು ಸಿದ್ದು ಮೊದಲ ಬಾರಿಗೆ ಸಿಎಂ ಆಗಿದ್ದಾಗ ನಡೆದ ಘಟನೆ ಎಲ್ಲ ಆಡಳಿತದಲ್ಲೂ ಪರ್ಸೆಂಟೇಜ್‌ ಮಾಮೂಲಿಯಾಗಿತ್ತು ಪರ್ಸೆಂಟೇಜ್‌ ಇಲ್ಲದೆ ಸರ್ಕಾರ, ಪಕ್ಷ ನಡೆಸೋದು ಹೇಗೆ..? ಹೀಗೆ ಆಪ್ತರು ಬಂದು ಎಷ್ಟು ಪರ್ಸೆಂಟ್‌ ಫಿಕ್ಸ್‌ ಮಾಡೋದು ಅಂತಾ ಚರ್ಚೆ ನಡೆಸಿದ್ರು ಆದರೆ ಅದರಲ್ಲೂ ಸಿದ್ದು ಮಾದರಿ ನಡೆ ಅನುಸರಿಸಿದ್ದರು ಪಾಯಿಂಟ್‌ 5 ಪರ್ಸೆಂಟ್‌ ದಾಟಬಾರದು ಎಂದು ಆಪ್ತರಿಗೆ ಕಟ್ಟಾಜ್ಞೆ ಹಾಗಾಗಿಯೇ ಸಿದ್ದು ಮೊದಲ ಅವಧಿಯಲ್ಲಿ ಕರಪ್ಷನ್‌ ರೇಟ್‌ ತೀರಾ ಕಮ್ಮಿಅದರಂತೆಯೇ ಕರಪ್ಷನ್‌ ತಡೆಗೆ ಸಿದ್ದು ಪ್ರಾಮಾಣಿಕ ಯತ್ನ ಮಾಡಿದ್ರು ನಾನು ಶೇ.100 ರಷ್ಟು ಪ್ರಾಮಾಣಿಕ ಅಲ್ಲ ಅಂತಾರೆ ಸಿದ್ದು ಹೀಗೆ ಇದ್ದುದರಲ್ಲಿ ಸುಧಾರಣೆಗೆ ಯತ್ನಿಸುವ ಸಿದ್ದು ಇದು 40 ಪರ್ಸೆಂಟ್‌ , 50 ಪರ್ಸೆಂಟ್‌ ಕಾಲ ಇಂದಿಗೂ ಸಿದ್ದು ಮಾತನ್ನು ನೆನಪಿಸಿಕೊಳ್ಳುವ ಅಧಿಕಾರಿಗಳು ಇದ್ದಾರೆ ಹಕ್ಕಿಪಿಕ್ಕಿ ಜನರಿಗೂ ಪವರ್‌-ಸಾಮಾಜಿಕ ನ್ಯಾಯ ಮೊದಲಬಾರಿ ಸಿಎಂ ಆಗಿದ್ದಾಗ ನಿಕೃಷ್ಠರಿಗೆ ಅಧಿಕಾರ ಕೊಟ್ಟಿದ್ದ ಸಿದ್ದು ಒಳ್ಳೆಯ ಪೋಸ್ಟಿಂಗ್‌ ಪಡೆಯಲು ಆಗದವರಿಗೆ ಹುಡುಕಿ ಹುಡುಕಿ ಪೋಸ್ಟಿಂಗ್‌ ಬುಡಬುಡಿಕೆ, ಹಕ್ಕಿಪಿಕ್ಕಿ ಪಿಂಜಾರ, ಎಸ್‌ಸಿ, ಎಸ್ಟಿ, ಮೈನಾರಿಟಿ ಅಧಿಕಾರಿಗಳಿಗೆ ಸ್ಥಾನಮಾನ ಹುಡುಕಿ ಹುಡುಕಿ ನಿರ್ಲಕ್ಷಿತ ಸಮುದಾಯದ ಅಧಿಕಾರಿಗಳಿಗೆ ಹುದ್ದೆ ನೀಡಿದ್ದ ಸಿದ್ದು ಎಸಿ ಎಸ್ಟಿ ಗುತ್ತಿಗೆದಾರರಿಗೆ ಐತಿಹಾಸಿಕ ನ್ಯಾಯ ಕೊಡಿಸಿದ್ದ ಸಿದ್ದು ಎಎಸ್ಸಿ ಎಸ್ಟಿ ಉದ್ಯಮಿಗಳ ಪಾಲಿಗೆ ಗಾಡ್‌ ಫಾದರ್‌ ಆಗಿದ್ದ ಸಿದ್ದು ಎಸ್ಸಿಪಿ ಟಿಎಸ್‌ಪಿ ಕಾಯ್ದೆ ತಂದು ದಲಿತರ ಹಣ ಬೇರೆಯವರು ನುಂಗೋದನ್ನ ತಡೆದಿದ್ದ ಸಿದ್ದು ಒಬಿಸಿ ಸಮುದಾಯದಗಳ ರಾಜಕೀಯ ಏಳ್ಗೆಗೆ ಶ್ರಮಿಸಿದ್ದ ಸಿದ್ದು
ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಅಪ್ಪಟ ಬಸವಾಭಿಮಾನ ಮೆರೆದಿದ್ದ ಸಿದ್ದು ಸಿದ್ದು ರಾಜೀನಾಮೆ ಕೊಟ್ಟಾಗ ಖುದ್ದು ಯಡಿಯೂರಪ್ಪ ಅವ್ರೇ ನೊಂದಿದ್ದರು ನಿಮ್ಮನ್ನು ಮಾಜಿ ಸಿಎಂ ಎನ್ನಲು ಮನಸ್ಸಾಗ್ತಿಲ್ಲ ಎಂದು ಸದನದಲ್ಲೇ ಹೇಳಿದ್ದರು ಲಿಂಗಾಯತ ಮತ್ತು ಒಕ್ಕಲಿಗ ಘಟಾನುಘಟಿಗಳನ್ನೇ ತಮ್ಮ ಅಭಿಮಾನಿಗಳಾನ್ನಾಗಿಸಿಕೊಂಡಿರುವ ಸಿದ್ದು ಬಹಿರಂಗವಾಗಿ ವಿರೋಧಿಗಳೂ ಕೂಡಾ ಸಿದ್ದು ಜಾತಿವಾದಿ ಅನ್ನೋದನ್ನ ಒಪ್ಪಲ್ಲ ಇಂಥ ಮೇರು ವ್ಯಕ್ತಿತ್ವದ ಕಾರಣಕ್ಕೇ ಹೈಕಮಾಂಡ್‌ ಸಿದ್ದರಾಮಯ್ಯ ಪರ ನಿಂತಿದೆ

ಬೆನ್ನಿಗಿರಿದ ಆಪ್ತ-ಎಲೆಕ್ಷನ್‌ ಸೋಲು-ನೋವು ನುಂಗಿದ ಸಿದ್ದು

ಮೊದಲ ಬಾರಿ ಯಶಸ್ವಿ ಆಡಳಿತ ನೀಡಿ ಎಲೆಕ್ಷನ್‌ ಗೆ ಹೋಗಿದ್ದ ಸಿದ್ದು ಖುದ್ದು ವಿಪಕ್ಷಗಳೇ ಸಿದ್ದರಾಮಯ್ಯ ಮತ್ತೆ ಗೆಲ್ತಾರೆ ಅಂದುಕೊಂಡಿದ್ರು ಮತ್ತೆ ಕಾಂಗ್ರೆಸ್‌ ಗೆದ್ದೇ ಗೆಲ್ಲುತ್ತೆ ಅಂತಾ ಇಡೀ ರಾಜ್ಯ ಮಾತಾಡಿಕೊಳ್ತಿತ್ತು ಆದರೆ ನಂಬಿದ್ದ ಬಹುಕಾಲದ ಗೆಳೆಯನೇ ತನ್ನ ಹೀನ ಬುದ್ದಿ ತೋರಿಸಿದ್ದ ಒಟ್ಟು 20 ಜಿಲ್ಲೆಗಳಿಗೆ ಪೂರೈಸಬೇಕಾಗಿದ್ದ ಆರ್ಥಿಕ ನೆರವನ್ನು ನುಂಗಿಹಾಕಿದ್ದ ಕಡೆ ಕ್ಷಣದಲ್ಲಿ ಅಪಾರ ಚುನಾವಣಾ ಸಂಪತ್ತನ್ನು ಕೊಳ್ಳೆ ಹೊಡೆದಿದ್ದ ನಂಬಿಕಸ್ತ ಜತೆಗೆ ದೇವೇಗೌಡರ ಜತೆ ಸೇರಿ ಡಿಸಿಎಂ ಕನಸು ಕಂಡಿದ್ದ ಕೊಳ್ಳೆವೀರ ಗೆಳೆಯಇದೆಲ್ಲದರ ಪರಿಣಾಮವಾಗಿ ಸಿಎಂ ಸಿದ್ದರಾಮಯ್ಯ ಜತೆ ಕಾಂಗ್ರೆಸ್‌ ಸೋತಿತು ಇದರಿಂದ ಕಡೇ ಕ್ಷಣದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಹಿನ್ನಡೆಯಾಯಿತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾವೇ ಸೋತು ಹೋದ ಸಿದ್ದು ಹೀಗೆ ಅಹಿಂದ ನೇತಾರನೊಬ್ಬನ ಕನಸಿಗೆ ಕೊಳ್ಳಿ ಇಟ್ಟ ಅದೇ ಸಮುದಾಯದ ಗೆಳೆಯ ಮಿತ್ರದ್ರೋಹದಿಂದ ಅಪಾರವಾಗಿ ನೊಂದು ಕನಲಿ ಹೋಗಿದ್ದ ಸಿದ್ದರಾಮಯ್ಯ

ದೊಡ್ಡಗೌಡರ ವಿರುದ್ಧ ಮಹಾಯುದ್ದ

ತನ್ನ ವ್ಯಕ್ತಿತ್ವದಿಂದಲೇ ಬೆಳೆದ ಸಿದ್ದು ದೊಡ್ಡಗೌಡರ ಎದುರೂ ಮಂಡಿಯೂರಲಿಲ್ಲ ತನ್ನ ಸಮಾಜವಾದಿ ವ್ಯಕ್ತಿತ್ವದ ಅವ್ರನ್ನು ಎಲ್ಲಿಯೂ ಬಗ್ಗಲು ಬಿಡಲಿಲ್ಲ ದೊಡ್ಡ ಗೌಡರ ಕೆಳಗೆ ಆರ್ಥಿಕ ಮಂತ್ರಿ ಆಗಿದ್ದಾಗ ಮುರಾರ್ಜಿ ದೇಸಾಯಿ ಶಾಲೆಗಳ ಆರಂಭ
ಈ ಮೂಲಕ ಅಹಿಂದ ವರ್ಗಗಳ ಶೈಕ್ಷಣಿಕ ಪ್ರಗತಿಗೆ ಬುನಾಧಿ ಹಾಕಿದ್ದ ಸಿದ್ದು ಅಹಿಂದ ವರ್ಗಗಳ ಪರ ಅಚಲ ನಿಲುವಿಂದ ಗೌಡದ ಕೆಂಗಣ್ಣಿಗೆ ಗುರಿ ರಾಜಕೀಯ ಭವಿಷ್ಯ ಪಣಕ್ಕಿಟ್ಟು ಗೌಡರಿಂದ ದೂರಾವಾಗಿದ್ದ ಸಿದ್ದು ಕೇವಲ ತನ್ನ ವ್ಯಕ್ತಿತ್ವ ಒಂದನ್ನೇ ಬಂಡವಾಳವಾಗಿಸಿಕೊಂಡಿರುವ ಜನನಾಯಕ ಸಿದ್ದು ಅಹಿಂದ ವರ್ಗದ ನೇತಾರ ಸಿದ್ದು ತನ್ನ ಸಮುದಾಯದ ಪರ ಎಲ್ಲೂ ಹೆಚ್ಚು ವಾಲಲಿಲ್ಲ ಹಾಗಾಗಿ ಮೊದಲ ಅವಧಿಯಲ್ಲಿ ಅವರ ಸುತ್ತ ತನ್ನ ಜಾತಿಯವರನ್ನು ಬಿಟ್ಟುಕೊಳ್ಳಲಿಲ್ಲ
ತನ್ನ ಜಾತಿಯವರನ್ನು ಮಂತ್ರಿ ಕೂಡಾ ಮಾಡದೆ ಜಾತ್ಯಾತೀತತೆ ಮೆರೆದರು ಕಡೆಗೆ ಮನೆಗೆ ಮಾರಿ ಊರಿಗೆ ಉಪಕಾರಿ ಎಂದು ಕುರುಬರಿಂದ ಬೈಸಿಕೊಂಡರು ದೊಡ್ಡ ಗೌಡರ ವಿರುದ್ಧ ಈಜಿ ತನ್ನದೇ ಶ್ರಮದಿಂದ ದಡ ಸೇರಿದ ಮೊದಲ ನಾಯಕ ಸಿದ್ದು

ಮೋದಿಗೆ ನೈತಿಕ ಬ್ರಹ್ಮಾಸ್ತ್ರ ಸಿದ್ದು

ಮುಡಾ ಸಂಕಷ್ಟದ ವೇಳೆ ಸಿದ್ದು ಪರ ಕೈ ಹೈಕಮಾಂಡ್‌ ಬಂಡೆಯಂತೆ ನಿಂತಿದ್ದೇಕೆ ಎನ್ನುವ ಸ್ಟೋರಿ ದೇಶದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಗೆ ಸೆಡ್ಡು ಹೊಡೆಯುವ ಏಕೈಕ ನಾಯಕ ಹಾಗಾಗಿಯೇ ವಿರೋಧಿಗಳು ಸಿದ್ದು ವಿರುದ್ಧ ಪಿತೂರಿ ಮಾಡ್ತಿದ್ದಾರೆ ವಿರೋಧಿಗಳ ಷಡ್ಯಂತ್ರದ ಸಮಯದಲ್ಲಿ ಅವರನ್ನು ಕೆಳಗಿಳಿಸಿದರೇ ಕಷ್ಟ ದಕ್ಷಿಣ ಭಾರತ ಇರಲಿ ,ಇಡೀ ದೇಶದಲ್ಲೇ ಕಾಂಗ್ರೆಸ್ ಗೆ ಅಪಾಯ ಕಾದಿದೆ ಎಂಬ ಸುಳಿವು ಈ ಅಂಶವನ್ನು ಗಮನದಲ್ಲಿಟ್ಟು ಕೊಂಡೇ ಎರಡನೇ ಬಾರಿ ಸಿದ್ದು ಗೆ ಸಿಎಂ ಪಟ್ಟ ಹೀಗಾಗಿ ಹೈಕಮಾಂಡ್ ನಿಷ್ಠ,ಅಹಿಂದ ನಿಷ್ಠ ಸಿದ್ಧರಾಮಯ್ಯ ಪರ ನಿಂತಿರುವ ಹೈಕಮಾಂಡ್ ಸದ್ಯ ರಾಜ್ಯ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎಂಬಂತಿದೆ ಈ ಹೊತ್ತಿನಲ್ಲಿ ಕೆಳಗಿಳಿಸುವ ಬದಲು ಮೂಡ ಕೇಸು ಏನಾದರಾಗಲಿ ಅವರನ್ನು ಮುಂದುವರೆಸೋಣ ಎಂದು ಗಟ್ಟಿಯಾಗಿ ಅವರ ಬೆನ್ನಿಗೆ ನಿಂತಿದೆ ಕರ್ನಾಟಕದ ಒಕ್ಕಲಿಗರು, ಲಿಂಗಾಯತರು ಬಿಜೆಪಿ ಬೆನ್ನಿಗೆ ನಿಂತಿದ್ದಾರೆ ಈಗ ಅಹಿಂದ ವರ್ಗ ಮಾತ್ರ ಕಾಂಗ್ರೆಸ್ ಬೆನ್ನಿಗಿದೆ ಇಂತಹ ಹೊತ್ತಲ್ಲಿ ಅಹಿಂದ ಅಗ್ರಗಣ್ಯ ನಾಯಕ ಸಿದ್ದು ಇಳಿಸುವುದುಂಟೇ..? ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರೆ ರಾಜ್ಯ ಕಾಂಗ್ರೆಸ್‌ಗೆ ಮಹಾ ಗಂಡಾಂತರ ಕಾದಿದೆ. ಹಾಗಾಗಿಯೇ ಹೈ ಕಮಾಂಡ್ ಸಿದ್ದರಾಮಯ್ಯ ಬೆನ್ನಿಗೆ ಹೆಬ್ಬಂಡೆ ಯಂತೆ ನಿಂತಿದೆ.
ಹಾಗಾಗಿಯೇ ಸಿದ್ಧರಾಮಯ್ಯ ನಾನು ಯಾರಿಗೂ ಬಗ್ಗಲ್ಲ, ಜಗ್ಗಲ್ಲ ಅಂತಿದ್ದಾರೆ

ಹಣವಂತನಲ್ಲ-ಗುಣವಂತ

ಎಂದಿಗೂ ಹಣದ ಹಿಂದೆ ಹೋಗದ ಮೇರು ನಾಯಕತ್ವ ಸಿದ್ದರಾಮಯ್ಯ ಅವರದ್ದು ಮಗು ಮನಸ್ಸು, ಒರಟು ಭಾಷೆ ಸಿದ್ದು ಭ್ರಷ್ಟಾಚಾರಿಯಾಗಿದ್ದರೆ ಸಾವಿರಾರು ಕೋಟಿ ಮಾಡಬಹುದಿತ್ತು ಜಾರ್ಜ್‌, ಬೈರತಿ, ಎಂಟಿಬಿಗಳಂಥ ಕುಬೇರ ಗೆಳೆಯರಿದ್ದಾರೆ ನಿಜ ಆದರೆ ಅವರ ಜತೆಗಿನ ಸಿದ್ದು ಹಣಕಾಸು ನಂಟು ಅಷ್ಟಕ್ಕಷ್ಟೇ ಗೆಳೆಯ ಬೆನ್ನಿಗಿರಿದ ಬಳಿಕವೋ ಏನೋ ಸಿದ್ದು ಕೊಂಚ ಬದಲಾಗಿದ್ದಾರೆ ನಿಜ ಈ ಬಾರಿ ತನ್ನ ಜಾತಿಯ ಕೆಲವರನ್ನು ಸುತ್ತ ಇಟ್ಟುಕೊಂಡಿದ್ದಾರೆ ನಿಜ ಆದರೆ, ಅವರಲ್ಲಿ ಬಹುತೇಕರು ಜಾತಿ ಮೀರಿ ಅರ್ಹತೆ ಇರುವವರು ತಮ್ಮ ಯೋಗ್ಯತೆಯಿಂದಲೇ ಸ್ಥಾನ ಗಿಟ್ಟಿಸಿರುವವರು ಯಾರೋ ಮಾಡಿರಬಹುದಾದ ಅಥವಾ ಮಾಡಿಲ್ಲದ ತಪ್ಪಿಗೆ ಕಟಕಟೆಯಲಿದ್ದಾರೆ ಸಿದ್ದು ಇಂಥ ಸಿದ್ದುಗೆ ಇದೀಗ ಅಗ್ನಿಪರೀಕ್ಷೆಯ ಕಾಲ ಅಧಿಕಾರಕ್ಕೆ ಅಂಟಿಕೂರುವ ವ್ಯಕ್ತಿತ್ವ ಸಿದ್ದರಾಮಯ್ಯ ಅವ್ರದ್ದಲ್ಲ ಸಿದ್ದು ತಾನೇ ರಾಜೀನಾಮೆ ಬಿಸುಟಿದರೆ ಮತ್ತಷ್ಟು ದೊಡ್ಡವಾಗಿಬಿಡುತ್ತಾರೆ ನಿಜ ಆದರೆ, ಕರ್ನಾಟಕಕ್ಕೆ ಅವರ ಸೇವೆ ಅಗತ್ಯವಿದೆ ಹಾಗಾಗಿ ಯಾವ ಕಾರಣಕ್ಕೂ ಸಿದ್ದು ತಾಳ್ಮೆ ಕಳೆದುಕೊಳ್ಳಬಾರದ ಯಾರು ಏನೇ ಹೇಳಲಿ ನಾಡಿನ ಒಳಿತಿಗೆ ಸಿದ್ದು ಅಧಿಕಾರದಲ್ಲಿರಬೇಕು ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ತಾವೇ ಪದತ್ಯಾಗಕ್ಕೆ ಮುಂದಾಗಬಾರದು ಈ ಅಗ್ನಿದಿವ್ಯವನ್ನು ಸಿದ್ದು ಗೆದ್ದು ಬರಲಿ ಅಂತಿದೆ ಅವರ ಅಭಿಮಾನಿ ಬಳಗ ಹಾಯ್‌ ಸಿದ್ದು ಸರ್‌.. ಈ ಅಗ್ನಿದಿವ್ಯದಿಂದ ಗೆದ್ದು ಬನ್ನಿನಿಮ್‌ ಲುಕ್ಕು.. ನಿಮ್ಮ ಖದರು.. ನಿಮ್ಮ ಗತ್ತು ಹೀಗೆ ಇರಲಿ.

ಕೃಪೆ : ಫ್ರೀಡಂ ಟಿವಿ

About The Author