ಕೆಪಿವೈಸಿ ಯುವ ಘಟಕದ ಚುನಾವಣೆ : ಅಧ್ಯಕ್ಷಗಿರಿಗಾಗಿ ತೀವ್ರ ಪೈಪೋಟಿ : ನಿಖಿಲ್ ವಿ ಶಂಕರ್ ಸ್ಪರ್ಧೆ

ಬಸವರಾಜ ಕರೇಗಾರ
**********************************
ಶಹಾಪುರ : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದ 2024ರ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಲಿದೆ.  ಆಗಸ್ಟ್ 20 ರಿಂದ ಸೆಪ್ಟೆಂಬರ್ 20ರವರೆಗೆ ಮತದಾನ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಹಾಗೂ 35 ವರ್ಷದೊಳಗಿನ  ಯುವಕರು ಮತದಾನ ಮಾಡಬಹುದು. ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷಗಿರಿಗಾಗಿ ಉತ್ತರ ಕರ್ನಾಟಕದ ನೇತಾರ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಪ್ರಸ್ತುತ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ನಿಖಿಲ್ ವಿ ಶಂಕರ್ ಅವರು ಅಧ್ಯಕ್ಷಗಿರಿಗಾಗಿ ಸ್ಪರ್ಧಿಸಿದ್ದಾರೆ. ರಾಜ್ಯಾದ್ಯಂತ ಯುವ ಮತದಾರರು ನಿಖಿಲ್ ವಿ ಶಂಕರ್ ಗೆಲುವಿಗಾಗಿ ಮತದಾನ ಮಾಡಬೇಕಿದೆ.
*********************************

***************************************
ಪ್ರಸ್ತುತ ಚುನಾವಣೆಯು ಬಿರುಸಿನಿಂದ ಕೂಡಿದ್ದು 13 ಜನ ಸ್ಪರ್ಧೆಯಲ್ಲಿ ಉತ್ತರ ಕರ್ನಾಟಕದಿಂದ ನಿಖಿಲ್ ವಿ ಶಂಕರ್ ಒಬ್ಬರೇ ಸ್ಪರ್ಧಿಸಿದ್ದಾರೆ. ಯುವ ನಾಯಕರು ಪಕ್ಷ ಸಂಘಟನೆಯ ಚತುರರಾದ ನಿಖಿಲ್ ವಿ ಶಂಕರ್ ಇಡೀ ಕರ್ನಾಟಕ ರಾಜ್ಯದಲ್ಲಿಯೇ  ಉತ್ತರ ಕರ್ನಾಟಕದಿಂದ ಸ್ಪರ್ಧಿಸಿದ ಏಕೈಕ ವ್ಯಕ್ತಿ. ಉಳಿದ 12 ಜನರು ದಕ್ಷಿಣ ಕರ್ನಾಟಕದ ಸ್ಪರ್ಧಾಳುಗಳು ಅದರಲ್ಲಿ ಹೆಚ್ಚಾಗಿ ಬೆಂಗಳೂರಿನವರೇ ಸ್ಪರ್ಧಿಸಿದ್ದಾರೆ.
ಈ ಚುನಾವಣೆ ಉತ್ತರ ಕರ್ನಾಟಕದ ಮಹತ್ವದ ಚುನಾವಣೆಯಾಗಿದೆ.ಎಲ್ಲಾ ಅಧಿಕಾರವೂ ದಕ್ಷಿಣ ಕರ್ನಾಟಕದವರದಾಗಿದೆ.  ಉತ್ತರ ಕರ್ನಾಟಕಕ್ಕಾಗಿ ಮಾನ್ಯತೆ ಕೊಟ್ಟಿಲ್ಲ.ಉತ್ತರ ಕರ್ನಾಟಕ ನಾವೆಲ್ಲರೂ ಒಂದುಗೂಡಿ ನಿಖಿಲ್ ವಿ ಶಂಕರ್ ಅವರ ಗೆಲ್ಲಿಸುವ ಹೊಣೆ ಇದೆ.ಮತದಾರರು (ವೋಟಿಂಗ್ ಕಾರ್ಡ್) ಮತದಾನ ಕಾರ್ಡ್ ಹೊಂದಿದವರೆಲ್ಲರೂ 18 ರಿಂದ 35 ವರ್ಷದ ಯುವಕರು ಮೊಬೈಲ್ ಮುಖಾಂತರವೇ ಮತದಾನ ಮಾಡಬಹುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
***************************************
 ಐವೈಸಿ ಸದಸ್ಯತ್ವ(ಕೆಪಿವೈಸಿ ಯುವ ಘಟಕದ ಯ್ಯಾಪ್) ಪಡೆಯಲು ವಿಥ್ ಐವೈಸಿ ಯಾಪ್ ಡೌನ್ಲೋಡ್ ಮಾಡಿ ಮತ ಚಲಾಯಿಸಲು ನೋಂದಾಯಿಸಿಕೊಳ್ಳಬಹುದು.
*******************************
ಕೆಪಿವೈಸಿ ಯುವ ಘಟಕ ಅಧ್ಯಕ್ಷ ಸ್ಥಾನದ ಸ್ಪರ್ಧಿಗಳಾದ ನಿಖಿಲ್ ವಿ ಶಂಕರ್ ಅವರು ಗೆಲ್ಲಿಸಿಕೊಂಡು ಬರುವ ಹೊಣೆ ನಮ್ಮ ಮೇಲಿದೆ.ಯಾದಗಿರಿ ಜಿಲ್ಲೆಯಾದ್ಯಂತ ಯುವ ಮತದಾರರು ನಿಖಿಲ್ ವಿ ಶಂಕರ್ ಅವರ ಕ್ರಮ ಸಂಖ್ಯೆ 3ನೇ ನಂಬರಿಗೆ ಮತ ಚಲಾಯಿಸಬೇಕು.ಇವರ ಗೆಲುವಿನಿಂದ ಉತ್ತರ ಕರ್ನಾಟಕಕ್ಕೆ ಅಧಿಕಾರ ಸಿಗಲಿದೆ.
**********************************
ಪ್ರತಿ ಬಾರಿಯೂ ಕೂಡ ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ ಸ್ಥಾನ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ನಾಯಕರಿಗೆ ಹೋಗುತ್ತದೆ. ಆದರೆ ಉತ್ತರ ಕರ್ನಾಟಕದ ನಾಯಕ ನಿಖಿಲ್ ವಿ ಶಂಕರ್ ಅವರಿಗೆ ಈ ಬಾರಿ ಮತದಾನ ಮಾಡುವುದರಿಂದ ನಮಗೂ ಅಧಿಕಾರ ಸಿಕ್ಕಂತಾಗುತ್ತದೆ. ಮತದಾರರು ನಿಖಿಲ್ ವಿ ಶಂಕರ್ ಅವರ ಗೆಲುವಿಗೆ ಮತದಾನ ಮಾಡಿ ಸಹಕರಿಸಬೇಕೆಂದು ಯಾದಗಿರಿ ಜಿಲ್ಲೆಯ ಮತದಾರರು ವಿನಂತಿಸಿದ್ದಾರೆ.

About The Author