ಬೀಡಾಡಿ ದನಗಳ ಹಾವಳಿ ಪ್ರತಿಭಟನೆಯ ಎಚ್ಚರಿಕೆ

ಶಹಾಪೂರ : ಜಿಲ್ಲೆಯಲ್ಲಿ ಅತ್ಯಂತ ಜನದಟ್ಟಣೆ ಜನರಿಂದ ಕೂಡಿದ ನಗರ ಶಹಪುರ. ನಗರಸಭೆಯವರ ನಿರ್ಲಕ್ಷದಿಂದ ನಗರದ ಹೆದ್ದಾರಿಯ ಮೇಲೆ ಬೀಡಾಡಿ ದನಗಳು ಓಡಾಡುತ್ತಿವೆ. ಇದರಿಂದ ವಾಹನ ಚಾಲಕರಿಗೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು ನಗರಸಭೆಯ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕಿದೆ. ಬಿಡಾಡಿ ದನಗಳಿಗೆ ಸಂಬಂಧಿಸಿದ ಪಟ್ಟ ವ್ಯಕ್ತಿಗಳು ಬಾರದಿದ್ದರೆ ಕೂಡಲೇ ಅವುಗಳನ್ನು ಗೋಶಾಲೆಗೆ ಸೇರಿಸಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಶಹಪುರ ತಾಲೂಕು ಸಮಿತಿ ಕಾರ್ಯದರ್ಶಿ ಭೀಮರಾಯ ಪೂಜಾರಿ ನಗರಸಭೆಯ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಬಿಡಾಡಿ ದನಗಳನ್ನು ನಿಯಂತ್ರಣ ಮಾಡದಿದ್ದರೆ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *