ತಾಲೂಕು ಆಡಳಿತದಿಂದ ಅರಸು ದಿನಾಚರಣೆ : ದೇವರಾಜ ಅರಸು ತಮ್ಮ ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದ ನಾಯಕರಾಗಿದ್ದರು

ಶಹಾಪುರ : ಹಿಂದುಳಿದ ವರ್ಗದ ಜನನಾಯಕ, ತೋಷಿತ ಸಮುದಾಯಗಳಿಗೆ ಹಲವಾರು ಸರ್ಕಾರದ ಸೌಲಭ್ಯಗಳನ್ನು ನೀಡಿದ ನಾಯಕರಾಗಿದ್ದರು. ತಮ್ಮ ತತ್ವ ಸಿದ್ಧಾಂತಗಳಿಗೆ ಯಾವತ್ತೂ ಬದ್ಧರಾಗಿದ್ದರು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸುರವರು ಎಂದು ತಹಶೀಲ್ದಾರರಾದ ಉಮಾಕಾಂತ ಹಳ್ಳೆ ಹೇಳಿದರು.ಪಂಚಾಯಿತಿ ಸಭಾಂಗಣದಲ್ಲಿ ದಿ.ದೇವರಾಜ್ ಅರಸ್ ಅವರ 109ನೇ ಜಯಂತಿ ಅಂಗವಾಗಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇವರಾಜ ಅರಸು ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ ಸಾಮಾಜಿಕ ಹರಿಕಾರರು. ಅವರ ಸಮಾಜಮುಖೀ ಕೆಲಸಗಳು, ಪ್ರಗತಿಪರ ಯೋಜನೆಗಳು ಅವಿಸ್ಮರಣೀಯ.ಸಮಾಜಮುಖಿ ಕಾರ್ಯಗಳತ್ತ ಅವರ ಮನಸು ಸದಾ ತುಡಿಯುತ್ತಿತ್ತು ಎಂದು ತಿಳಿಸಿದರು.
          ಪೌರಾಯುಕ್ತ ರಮೇಶ್ ಬಡಿಗೇರ ಮಾತನಾಡಿ,ಅರಸುರವರು ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ ಬದುಕಿದಾಗ ಮಾತ್ರ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ಅಂತಹ ಘನ ವ್ಯಕ್ತಿತ್ವ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರದ್ದು ಎಂದರು.ತಾಲೂಕ ಖಜಾನೆ ಅಧಿಕಾರಿ ಡಾ. ಎಂ ಬಿ ಎಸ್ ಶಿರವಾಳ, ಮಾತನಾಡಿ
ಅರಸುರವರು ಸಾಮಾಜಿಕ ನ್ಯಾಯವೆಂದರೆ ಸಮಾಜದಲ್ಲಿರುವ ಎಲ್ಲ ರೀತಿಯ ಅಸಮಾನತೆಯನ್ನು ಹೋಗಲಾಡಿಸಿ ಹಿಂದುಳಿದವರ, ಬಡವರ, ದುರ್ಬಲರ, ತುಳಿತಕ್ಕೆ ಮತ್ತು ಶೋಷಣೆಗೆ ಒಳಪಟ್ಟ ಅಸಹಾಯಕರನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲಕ್ಕೆತ್ತಲು ಶಾಸನಗಳನ್ನು, ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಿದರು ಎಂದರು.
  ಕಾರ್ಯಕ್ರಮದಲ್ಲಿ ತಾಲೂಕ ಬಿಸಿಎಂ ಅಧಿಕಾರಿ ಚನ್ನಪ್ಪಗೌಡ ಚೌದ್ರಿ, ದಲಿತ ಮುಖಂಡರಾದ ಶಿವಪುತ್ರ ಜವಳಿ, ನಾಗಣ್ಣ ಬಡಿಗೇರ್, ಪ್ರದೀಪ್ ಯಾದವ್, ಸಾಯ್ಬಣ್ಣ ಪುರ್ಲೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

About The Author