ಸಗರನಾಡಿನ ಆರಾಧ್ಯದೈವ ಶ್ರೀ ಹೈಯ್ಯಾಳಲಿಂಗೇಶ್ವರ ಜಾತ್ರೆ

ವಡಗೇರಾ:ತಾಲೂಕಿನ ಹೈಯಾಳ ಬಿ ಗ್ರಾಮದ ಸಗರನಾಡಿನ ಆರಾಧ್ಯದೈವ ಶ್ರೀ ಹೈಯಾಳಲಿಂಗೇಶ್ವರ ಜಾತ್ರಾ ಮಹೋತ್ಸವ ಆಗಸ್ಟ್ 19 ರಿಂದ 23 ರವರೆಗೆ ಅತ್ಯಂತ ವಿಜ್ರಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.ಆ 19 ಸೋಮವಾರ  ರಂದು ಬೆಳಿಗ್ಗೆ 10 ಗಂಟೆಗೆ ಹೈಯಾಳಲಿಂಗೇಶ್ವರ ಗದ್ದುಗೆಗೆ   ಹೂ ಏರಿಸುವ  ಕಾರ್ಯಕ್ರಮ ನೆರವೇರಲಿದೆ. ಅಂದು ಸಾಯಂಕಾಲ 6 ಗಂಟೆಗೆ ಹೈಯ್ಯಾಳಲಿಂಗೇಶ್ವರ ಪಲ್ಲಕ್ಕಿಯು ಗ್ರಾಮದ ಸಮೀಪವಿರುವ ಕೃಷ್ಣಾ ನದಿಗೆ ಗಂಗಾಸ್ನಾನಕ್ಕೆ  ತೆರಳುವುದು. ಗಂಗಾಸ್ನಾನ ಮುಗಿದ ನಂತರ ಇಡೀ ರಾತ್ರಿ ಡೊಳ್ಳಿನ ಪದ ಹಾಗೂ ಭಜನಾ ಕಾರ್ಯಕ್ರಮಗಳು ಜರುಗಲಿವೆ. ಆ.20 ಮಂಗಳವಾರ  ಬೆಳಿಗ್ಗೆ 6 ಗಂಟೆಗೆ ಗ್ರಾಮದ ಆಳಮೇಲ ಹತ್ತಿರದಲ್ಲಿ  ದೇವರ ಹೇಳಿಕೆ ಜರಗುತ್ತದೆ. ತದನಂತರ ಡೊಳ್ಳು ಭಜಂತ್ರಿಗಳೊಂದಿಗೆ ಪಲ್ಲಕ್ಕಿ  ಮೆರವಣಿಗೆಯೊಂದಿಗೆ  ದೇವಸ್ಥಾನಕ್ಕೆ ತಲುಪಿ ದೇವರ ಗದ್ದುಗೆಗೆ ಮೇಲೆ ಕೂರಿಸಲಾಗುವುದು. ಉಪವಾಸವಿದ್ದ ಭಕ್ತಾದಿಗಳು ಅಂದು ಉಪವಾಸ ಬಿಡುತ್ತಾರೆ.ಜಾತ್ರೆಗೆ ರಾಜ್ಯದ ಹಲವು ಜಿಲ್ಲೆ ಮತ್ತು ಹೊರ ರಾಜ್ಯದಿಂದ ಅಪಾರ ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುವರು.ಪರಸ್ಥಳದಿಂದ ಬಂದಂತ ಭಕ್ತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

About The Author