ಸಿಪಿಎಸ್ ಶಾಲಾ ಮೈದಾನದಲ್ಲಿ 78ನೇ ಸ್ವಾತಂತ್ರ್ಯ ದಿನೋತ್ಸವ : ಸ್ವಾತಂತ್ರಕ್ಕಾಗಿ ಮಡಿದವರ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು

ಶಹಪುರ : ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಜನರ ತ್ಯಾಗ ಬಲಿದಾನದ ಶ್ರಮವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಲಕ್ಷಾಂತರ ವೀರರು ರಾಜರು ತಮ್ಮ ಪ್ರಾಣವನ್ನೇ ಬದಿಗೊತ್ತಿ ದೇಶಕ್ಕಾಗಿ ಹೋರಾಟ ಮಾಡಿ ಸಾವನ್ನಪ್ಪಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳ ಸ್ಮರಣೆ ಮಾಡುವ ದಿನವೆಂದು ಪ್ರತಿಯೊಬ್ಬ ನಾಗರಿಕರು ಕೂಡ ಸ್ವಾತಂತ್ರ ದೊರಕಿಸಿಕೊಟ್ಟ ಲಕ್ಷಾಂತರ ಜನರ ಸ್ಮರಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಾಲೂಕು ದಂಡಾಧಿಕಾರಿಗಳಾದ ಉಮಾಕತ್ ಹಳ್ಳೆ ಹೇಳಿದರು.
ತಾಲೂಕು ಆಡಳಿತ ವತಿಯಿಂದ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ  78ನೇ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಜಾತಿ ಧರ್ಮ ಮರೆತು ದೇಶದ ಸ್ವಾತಂತ್ರ್ಯವೇ ಗುರಿಯಾಗಿಟ್ಟುಕೊಂಡು ಎಲ್ಲರೂ ಹೋರಾಟ ಮಾಡಿದ್ದಾರೆ ಅಂತ ಮಹಾನುಭಾವರ ತತ್ವಾದರ್ಷಗಳನ್ನು ದೇಶದ ಐಕ್ಯತೆ ದೇಶಾಭಿಮಾನ ಕೋಮು ಸೌಹಾರ್ದತೆಯ ಬಗ್ಗೆ ಮಕ್ಕಳಿಗೆ ತಿಳಿಸಿ ಕೊಡಬೇಕಿದೆ ಎಂದರು.
 ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರೆದಾರ ಮಾತನಾಡಿ, ಸ್ವಾತಂತ್ರ ದೊರಕಿಸಿಕೊಟ್ಟ ಸ್ವಾತಂತ್ರ್ಯ ಯೋಧರನ್ನು ಸ್ಮರಿಸುತ್ತಾ,ನಮ್ಮಲ್ಲಿ ಶಕ್ತಿ ಇರುವವರೆಗೆ ನಾವು ಕುಗ್ಗದೆ ಮತ್ತು ಬೀಳಲು ಬಿಡದೆ ಸ್ವಾತಂತ್ರ್ಯದ ಜ್ಯೋತಿಯನ್ನು ಹೊತ್ತುಕೊಂಡು ಸಾಗಬೇಕಿದೆ. ಭಾರತದ ಕೋಟ್ಯಂತರ ಯುವಕ-ಯುವತಿಯರು ನಮ್ಮ ನಂತರ ಗೌರವ ಮತ್ತು ಹೆಮ್ಮೆಯಿಂದ ಕಾರ್ಯವನ್ನು ನಿರ್ವಹಿಸಬೇಕು. ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ನಿವೃತ್ತ ಸೈನಿಕರಿಗೆ ಸನ್ಮಾನ. ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ದೇಶ ಸೇವೆ ಮಾಡಿ ನಾಡಿಗೆ ಕೀರ್ತಿ ತಂದ ನಿವೃತ್ತ ಸೈನಿಕರಾದ ಎಸ್ಎಮ್ ಜಾನಿ, ಮರೆಪ್ಪ ಚಂಡು, ವೆಂಕು ಟಣಕೆದಾರ್ ಅವರನ್ನು ತಾಲೂಕ ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪೌರಾಯುಕ್ತ ರಮೇಶ್ ಬಡಿಗೇರ, ತಾಲೂಕ ಖಜಾನೆ ಅಧಿಕಾರಿ ಡಾ. ಎಂಎಸ್ ಶಿರವಾಳ, ಪೋಲಿಸ್ ಇನ್ಸ್ಪೆಕ್ಟರ್ ಎಸ್ ಎಂ ಪಾಟೀಲ್, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಶರಣಗೌಡ ನ್ಯಾಮಣ್ಣನವರ್, ಅಬಕಾರಿ ಉಪನಿರೀಕ್ಷಕ ವಿಜಯಕುಮಾರ್ ಹಿರೇಮಠ್, ಕ್ಷೇತ್ರ ಶಿಕ್ಷಣಾಧಿಕಾರಿ ಜಾಹೀರಾ ಬೇಗಮ್, ಬಿಸಿಎಂ ಅಧಿಕಾರಿ ಚೆನ್ನಪ್ ಗೌಡ ಚೌದ್ರಿ, ಅಕ್ಷರ ದಾಸೋಹ ತಾಲೂಕ ಅಧಿಕಾರಿ ಸೂರ್ಯವಂಶಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೆದ್ ಸೇರಿದಂತೆ ಕಂದಾಯ, ತಾಲೂಕ ಪಂಚಾಯಿತಿ,ನಗರಸಭೆ ಅಗ್ನಿಶಾಮಕದಳ, ಆರೋಗ್ಯ ಇಲಾಖೆ ಸೇರಿದತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.  ಯೋಗಗುರು ಲಕ್ಷ್ಮಣ ಲಾಳ ಸೇರಿ ನಿರೂಪಣೆ ಮಾಡಿ ಸ್ವಾಗತಿಸಿದರು.

About The Author