ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ : ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಸ್ಮರಿಸುವ ದಿನವಿದು : ಡಾ.ಯಲ್ಲಪ್ಪ

ಶಹಪುರ : ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈ ಡಾಕ್ಟರ್ ಎಲ್ಲಪ್ಪ ಹುಲ್ಕಲ್ ರವರು ಮಾತನಾಡುತ್ತಾ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಸ್ಮರಿಸುವ ದಿನವಿದು. ಹಲವಾರು ಜನರು ತಮ್ಮ ಪ್ರಾಣವನ್ನೇ ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಿಟ್ಟಿದ್ದಾರೆ. ಅಂತಹ ಸಾವಿರಾರು ಜನರ ತ್ಯಾಗ ಬಲಿದಾನ ಫಲ ಇಂದು ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಪ್ರತಿಯೊಬ್ಬರು ತಮ್ಮ ಸ್ವಾರ್ಥಕ್ಕಲ್ಲದೆ ದೇಶದ ಏಳಿಗೆಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ರಾಚನಗೌಡ ಪಾಟೀಲ್ ಮಾತನಾಡಿ, ದೇಶದ ಸುಭದ್ರತೆಗಾಗಿ ದೇಶಕ್ಕಾಗಿ ಸೈನಿಕರು ದೇಶದ ಗಡಿಯಲ್ಲಿ ನಮಗೆ ರಕ್ಷಕರಾಗಿ ನಿಂತಿದ್ದಾರೆ. ನಮ್ಮ ಕೊಡುಗೆ ದೇಶಕ್ಕಾಗಿ ಆಗಬೇಕೆ ಹೊರತು ನಮ್ಮ ಸ್ವಾರ್ಥಕ್ಕಾಗಿ ಅಲ್ಲ. ಆರ್ಥಿಕವಾಗಿ ನಾವು ಪ್ರಬಲರಾಗುತ್ತಾ ಹೊರಟಿದ್ದೇವೆ. ಎಲ್ಲಾ ರಂಗಗಳಲ್ಲೂ ಮುನ್ನಡೆಯುತ್ತಿದ್ದೇವೆ.ದೇಶದ ಭವಿಷ್ಯಕ್ಕಾಗಿ ಏಕತೆಗಾಗಿ ನಾವೆಲ್ಲರೂ ದುಡಿಯಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ.ಗಂಗಾಧರ ಚಟರ್ಕಿ ಡಾ ಜಗದೀಶ್ ಉಪ್ಪಿನ್ ಡಾ.ಸುರೇಖಾ ಪಾಟೀಲ್ ಡಾ.ಸಾವಿತ್ರಿ ಮಕ್ಕಳ ತಜ್ಞರು,ಡಾ. ಪದ್ಮಾನಂದ್ ಗಾಯಕ್ವಾಡ್,ಡಾ. ಶೈಲಜಾ ಪಡೆಕನೂರನರ್ಸಿಂಗ್ ಅಧಿಕಾರಿಗಳಾದ ವಿಜಯ ಕುಮಾರಿಲೀನಾ ಅಮೃತಮ್ಮ ರಾಜೇಶ್ವರಿ ಸಾವಿತ್ರಿ ಲಕ್ಷ್ಮಿ ವಿಜಯಲಕ್ಷ್ಮಿ  ಅಮೃತ್ ಕಂಚಿ ಭೀಮರಾಯ ಅಶೋಕ್ ಪಾಟೀಲ್ ಗುಂಡೂರಾವ್ ಆಪ್ತ ಸಮಾಲೋಚಕರು ವಿಠ್ಠಲ್ ಕುಲಕರ್ಣಿ ಶ್ರೀನಿವಾಸ್ ಆಚಾರಿ ಸಿದ್ದರಾಮ ರೆಡ್ಡಿ ಜಯರಾಮ ಚೌಹಾನ್ ಸಿದ್ದು ಚಲವಾದಿ ಮಲ್ಲಿಕಾರ್ಜುನ್ ಚಿನ್ನಮಳ್ಳಿ ಫಯಾಜ್ ಅಹಮದ್ ಮಂಜುನಾಥ್ ಪಾಟೀಲ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಯವರು ಇದ್ದರು.

 

About The Author