ಡಿಡಿಯು ಕಾನ್ವೆಂಟ್ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ಶಹಾಪುರ : ತಾಲೂಕಿನ ದೇವರಾಜ ಅರಸು ಶಿಕ್ಷಣ ಸೇವಾ (DDU)ಸಂಸ್ಥೆಯ ಶಹಪುರದ ಕಾನ್ವೆಂಟ್ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿಯಾದ ದೇವೇಂದ್ರಪ್ಪ ಮೇಟಿ ಧ್ವಜಾರೋಹಣ ಗೈದು ಮಾತನಾಡುತ್ತಾ,1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳಾದವು. ಮಹಾತ್ಮ ಗಾಂಧೀಜಿ ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವಾರು ಸ್ವಾತಂತ್ರ ಹೋರಾಟಗಾರರು ಬ್ರಿಟಿಷ್ ಆಳ್ವಿಕೆಯಿಂದ ದೇಶವನ್ನು ಸ್ವಾತಂತ್ರಗೊಳಿಸಲು ಹೋರಾಡಿದರು.

ದೇಶದ ಸ್ವಾತಂತ್ರ್ಯಕ್ಕೋಸ್ಕರ ಸಾವಿರಾರು ಜನರ ಪ್ರಾಣ ಬಲಿದಾನದ ಫಲವಾಗಿ ಇಂದು ದೇಶಕ್ಕೆ ಸ್ವಾತಂತ್ರ್ಯ ದಕ್ಕಿದೆ. ಅಂತಹ ಮಹಾನ್ ವ್ಯಕ್ತಿಗಳನ್ನು ನೆನೆಯುವ ದಿನವೆಂದು. ಅವರನ್ನು ಸ್ಮರಿಸಿ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಅವರ ಹಾದಿಯಲ್ಲಿ ನಡೆದು ದೇಶದ ಪ್ರಗತಿಗಾಗಿ ಶಾಲಾ ಮಕ್ಕಳು ಶ್ರಮಿಸಬೇಕೆಂದು ಶಾಲಾ ಮಕ್ಕಳಿಗೆ ಕರೆ ನೀಡಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶಾಲಾ ಮುಖ್ಯ ಗುರುಗಳಾದ ಜಸ್ಟಿನ್ ಶಿಕ್ಷಕರಾದ ಶಶಿರೇಖಾ, ಬೀಮಲ್, ಮಂಜುಳಾ, ಜ್ಯೋತಿ, ರಹಿಮಾನ್, ಸಲೀಂ, ಸೂರ್ಯಕಾಂತ ಸುನಿಲ್ ಕುಮಾರ್, ಮಹಾನಂದ,  ಅನು, ಸಿಲ್ಜಿ, ಶ್ರೀನಿವಾಸ, ರಾಜೇಶ, ಮಲ್ಲಿಕಾರ್ಜುನ, ದಿವ್ಯಾ, ಸಿಂಧು,ದರ್ಶಿನಿ ಸೇರಿದಂತೆ ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.

About The Author