ಬೀದರ ಜಿಲ್ಲಾ ಪಂಚಾಯತಿಯಲ್ಲಿ 78 ನೆಯ ಸ್ವಾತಂತ್ರ್ಯೋತ್ಸವ ; ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಧ್ವಜಾರೋಹಣ

ಸ್ವಾತಂತ್ರ್ಯೋತ್ಸವ

ಬೀದರ ಜಿಲ್ಲಾ ಪಂಚಾಯತಿಯಲ್ಲಿ 78 ನೆಯ ಸ್ವಾತಂತ್ರ್ಯೋತ್ಸವ ; ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಧ್ವಜಾರೋಹಣ

Bidar : ಬೀದರ ಜಿಲ್ಲಾ ಪಂಚಾಯತಿಯಲ್ಲಿ 78 ನೆಯ ಸ್ವಾತಂತ್ರ್ಯೋತ್ಸವವನ್ನು ಸಡಗರ ಸಂಭ್ರಮೋತ್ಸಾಹಗಳಿಂದ ಆಚರಿಸಲಾಯಿತು.ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆಯವರು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ‘ ನಮ್ಮ ಪೂರ್ವಜರ ತ್ಯಾಗ ಬಲಿದಾನದಿಂದ ಬಂದಿರುವ ಸ್ವಾತಂತ್ರ್ಯವನ್ನು ನಾವು ಶ್ರದ್ಧೆ ಮತ್ತು ಸಮರ್ಪಣಾಭಾವದಿಂದ ಉಳಿಸಿಕೊಳ್ಳಬೇಕಿದೆ.ನಮ್ಮ‌ಕರ್ತವ್ಯವನ್ನು ಪ್ರಾಮಾಣಿಕತೆ ನಿಷ್ಠೆ,ಶ್ರದ್ಧಾಪೂರ್ವಕವಾಗಿ ನಿರ್ವಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಸಲ್ಲಿಸಬೇಕು.

ಬೀದರ ಜಿಲ್ಲಾ ಪಂಚಾಯತಿಯು ರಾಜ್ಯದ ಪ್ರಗತಿಪರ ಜಿಲ್ಲೆಗಳಲ್ಲಿ ಒಂದಾಗಿದ್ದು ಮನರೆಗಾ ಯೋಜನೆ ಸೇರಿದಂತೆ ಮಹತ್ವದ ಯೋಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಲಾಗುತ್ತಿದೆ.ತೆರಿಗೆ ವಸೂಲಾತಿಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಜವಾಬ್ದಾರಿಯ ಅರಿವು ಮೂಡಿಸಿದ್ದರಿಂದ ಗ್ರಾಮ ಪಂಚಾಯತಿಗಳು ಆಸಕ್ತಿಯಿಂದ ತೆರಿಗೆ ವಸೂಲು ಮಾಡುತ್ತಿವೆ.ಈ ವರ್ಷ ಜಲಜೀವನ್ ಮಿಶನ್ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸೋಣ.ಗ್ರಾಮ ಪಂಚಾಯತಿಗಳ ಪಿಡಿಒಗಳಿಂದ ಹಿಡಿದು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳವರೆಗೆ ಎಲ್ಲರೂ ತಂಡದ ಸ್ಫೂರ್ತಿಯಲ್ಲಿ ಕೆಲಸ ಮಾಡಿ ಬೀದರ ಜಿಲ್ಲಾ ಪಂಚಾಯತಿಯನ್ನು ರಾಜ್ಯದ ಮಾದರಿ ಜಿಲ್ಲೆಗಳಲ್ಲಿ ಒಂದನ್ನಾಗಿ ಮಾಡೋಣ,ಈ ದಿಸೆಯಲ್ಲಿ ಪ್ರತಿಜ್ಞಾಪೂರ್ವಕವಾಗಿ ಕೆಲಸ ಮಾಡಬೇಕಿದೆ’ ಎಂದರು.

ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ,ಮುಖ್ಯಯೋಜನಾಧಿಕಾರಿ ಕಿಶೋರಕುಮಾರ ದುಬೆ,ಮುಖ್ಯಲೆಕ್ಕಾಧಿಕಾರಿ ಶ್ರೀಕಾಂತ,ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ,ಸಹಾಯಕ ಕಾರ್ಯದರ್ಶಿ ರಮೇಶನಾಥೆ,ಸಹಾಯಕ ಕಾರ್ಯದರ್ಶಿ ಜಯಪ್ರಕಾಶ ಚವ್ಹಾಣ,ಎಪಿಒ ಶಿವಕುಮಾರ ಯಲಾಲ್ ,ಗ್ರಾಮೀಣ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಾಮಲಿಂಗ ಬಿರಾದರ,ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಶಿವಾಜಿ ದೊಣ್ಣೆ,ಒಂಬಡ್ಸಮನ್ ಸೂರ್ಯಕಾಂತ ಶಂಕರಗೊಂಡ,ಜಿಲ್ಲಾ ಅಕ್ಷರದಾಸೋಹ ಅಧಿಕಾರಿ ಬಸವಂತರಾಯ ಜಿಡ್ಡೆ ಮತ್ತು ಜಿಲ್ಲಾ ಪಂಚಾಯತಿಯ ಎಲ್ಲಾ ಸಿಬ್ಬಂದಿಯವರು ಹಾಜರಿದ್ದರು.