ರಾಯಣ್ಣ ಮುತ್ಯಾನ ಜಾತ್ರೆ ಸಂಭ್ರಮ

ಶಹಾಪುರ: ಸಗರನಾಡಿನ ಆರಾಧ್ಯದೈವವಾಗಿ ನೆಲೆಸಿರುವ ರಾಯಣ್ಣ ಮುತ್ಯಾನ ಎರಡು ದಿನದ ಜಾತ್ರಾ ಮಹೋತ್ಸವ ನಗರದ ರಾಕಂಗೇರಿಯ ರಾಯಣ್ಣ ಮುತ್ಯಾನ ಸನ್ನಿದಾನದಲ್ಲಿ ಸಂಭ್ರಮದಿಂದ  ಜರುಗಿತು. ಹಳಪೇಟೆಯಿಂದ ಡೊಳ್ಳು ವಾದ್ಯದೊಂದಿಗೆ ಉತ್ಸವ ಮೂರ್ತಿ ಪಲ್ಲಕ್ಕಿಯಲ್ಲಿ ರಾಕಂಗೇರಾದ ರಾಯಣ್ಣ ಮುತ್ಯಾನ ದೇವಸ್ಥಾನದವರೆಗೆ ಹೋಗಿ, ಗಂಗಸ್ನಾನದ ನಂತರ ರಾಯಣ್ಣ ಮುತ್ಯಾನ ಕಟ್ಟಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿದವು, ಮಾಳಪ್ಪ ಪೂಜಾರಿ ಅವರು ವಾಡಿಕೆಯಂತೆ ಸರಪಳಿ ಹರಿಯುವ ಕಾರ್ಯಕ್ರಮ ನಡೆಸಿಕೊಟ್ಟರು.
 ಸೋಮವಾರ ನಗರದಲ್ಲಿ ಮೆರವಣಿಗೆ ಮೂಲಕ  ಹಳೆಪೇಟೆಯಲ್ಲಿರುವ ವಗ್ಗರಾಯಣ್ಣನ ಸನ್ನಿಧಾನದವರೆಗೆ ಉತ್ಸವ ನಡೆಯಿತು.ದಾರಿಯುದ್ದಕ್ಕೂ ಪಲ್ಲಕ್ಕಿಗೆ ನೀರು ನೀಡುವುದು, ಪೂಜೆ ಸಲ್ಲಿಸಿದರು. ಪೋಷಾಕು ಧರಿಸಿಕೊಂಡು ಆಳು ಆಡುವುದು ಜಾತ್ರೆಯ ವೈಶಿಷ್ಟö್ಯಗಳಲ್ಲಿ ಒಂದು, ಹಾಲುಮತ ಸಮಾಜ ಸೇರಿದಂತೆ ಸಮಸ್ತ ನಗರದ ಗ್ರಾಮೀಣ ಭಾಗದ ಎಲ್ಲಾ ಸಮುದಾಯದ ಜನತೆ ಎರಡು ದಿನದ ಜಾತ್ರೆ ಮಹೋತ್ಸವದಲ್ಲಿ ಪಾಲ್ಗೊಂಡು, ಶರಣ ರಾಯಣ್ಣ ಮುತ್ಯಾನ ಆಶಿರ್ವಾದಕ್ಕೆ ಪಾತ್ರರಾದರು.

About The Author