ಬಡವರ ಹಕ್ಕಿಗೆ ಕನ್ನ ಹಾಕಿದ ಖದೀಮರು | 282 ಚೀಲ ಪಡಿತರ ಅಕ್ಕಿ ವಶ ಪ್ರಕರಣ ದಾಖಲು

ಶಹಾಪುರ : ತಾಲೂಕಿನ ಭೀಮರಾಯನ ಗುಡಿಯ ಕಾಲಿಗೆ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ ಲಾರಿಯನ್ನು ಭೀಮರಾಯ ಗುಡಿಯ ಪೊಲೀಸರು ಭಾನುವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ. ಪಡಿತರ ಅಕ್ಕಿಯ ಸಾಗಾಣೆ ಮಾಡುತ್ತಿದ್ದ ಲಾರಿಯಲ್ಲಿ 282 ಚೀಲ ಪಡಿತರ ಅಕ್ಕಿ ಇದ್ದು ಲಾರಿಯ ಚಾಲಕ ಸೋಮಲು ನಾಯಕನನ್ನು ವಶಕ್ಕೆ ಪಡೆಯಲಾಗಿದೆ.
ಕಲಬುರ್ಗಿಯಿಂದ ಲಾರಿಯಲ್ಲಿ ಪಡಿತರ ಅಕ್ಕಿಯನ್ನು ತೆಗೆದುಕೊಂಡು ಹೈದರಾಬಾದ್ ನಗರಕ್ಕೆ ತೆರಳುತ್ತಿರುವ ಬಗ್ಗೆ ಸ್ಪಷ್ಟ ಮಾಹಿತಿ ಅರಿತ ಪೊಲೀಸರು ಲಾರಿಯನ್ನು ತಡೆದು ತಪಾಸಣೆ ಮಾಡಿದಾಗ ಸುಮಾರು 282 ಚೀಲ ಪಡಿತರ ಅಕ್ಕಿ ಪತ್ತೆಯಾಗಿದ್ದು 4.70 ಲಕ್ಷ ಮೊತ್ತದಾಗಿದೆ.
ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಆಗಮಿಸಿ ಪಡಿತರ ಅಕ್ಕಿ ಎಂದು ದೃಢಪಡಿಸಿದ್ದಾರೆ. ಭೀಮರಾಯನ ಗುಡಿಯ ಪಿಎಸ್ಐ ಮಹಾಂತೇಶ ಪಾಟೀಲ್ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.ವಶಪಡಿಸಿಕೊಂಡ ಅಕ್ಕಿಯನ್ನು ಶಹಾಪುರ ನಗರದ ಹೊರವಲಯದಲ್ಲಿರುವ ಕೆ ಎಫ್ ಸಿ ಸಿ ಗೋಡನ್ನಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಆಹಾರ ಇಲಾಖೆಯ ನಿರೀಕ್ಷಕ ಜಂಬಯ್ಯ ಗಣಾಚಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *