ಕ್ಷೇತ್ರದರ್ಶನ : ಹುಮನಾಬಾದ್ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ :   ಮುಕ್ಕಣ್ಣ ಕರಿಗಾರ

ಕ್ಷೇತ್ರದರ್ಶನ
    ಹುಮನಾಬಾದ್ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ
  ಮುಕ್ಕಣ್ಣ ಕರಿಗಾರ
       ಹುಮನಾಬಾದ್ ತಾಲೂಕಾ ಪಂಚಾಯತಿಯ ಆಡಳಿತಾಧಿಕಾರಿ ಅಧಿಕಾರವನ್ನು ಸ್ವೀಕರಿಸಲು 11.08.2024 ರ ರವಿವಾರದಂದು ಹುಮನಾಬಾದ್ ತಾಲೂಕಾ ಪಂಚಾಯತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹುಮನಾಬಾದಿನ ಪ್ರಸಿದ್ಧಕ್ಷೇತ್ರ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ದರ್ಶನಾರ್ಥಿಯಾಗಿ ತೆರಳಿ ಶ್ರೀ ವೀರಭದ್ರೇಶ್ವರಸ್ವಾಮಿ ಮತ್ತು ಭದ್ರಕಾಳಿದೇವಿಯರ ದರ್ಶನ ಪಡೆದೆ‌‌.
      ವೀರಭದ್ರದೇವರು ಜಾಗೃತವೀರಭದ್ರನಾಗಿರುವುದರಿಂದ ರಾಜ್ಯ ಮತ್ತು ಹೊರರಾಜ್ಯಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರುಗಳಿದ್ದಾರೆ.ಶ್ರೀವೀರಭದ್ರಸ್ವಾಮಿಯು ದುಷ್ಟಶಿಕ್ಷಣ,ಶಿಷ್ಟರಕ್ಷಣ ಕಾರ್ಯಗೈಯುತ್ತ ಸಾವಿರಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ನೆಲೆ ನಿಂತಿದ್ದು ಎರಡುನೂರು ವರ್ಷಗಳ ಹಿಂದೆ ದೇವಾಲಯ ಕಟ್ಟಿಸಲಾಗಿದೆ.ದೇವಸ್ಥಾನದ ಆವರಣವು ತುಂಬ ವಿಶಾಲವಾಗಿದ್ದು ಮದುವೆ,ಅಯ್ಯಾಚಾರ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ.ವಿಶಾಲವಾದ ದಾಸೋಹಮಂಟಪವೂ ಇದೆ.
       ಶ್ರೀಮತಿ ಶಿವಲೀಲಾ  ಹುಮನಾಬಾದ್ ತಾಲೂಕಾ ಪಂಚಾಯತಿಯ ಸಹಾಯಕ ನಿರ್ದೆಶಕರು( ನರೆಗಾ) ಅವರು ನಮ್ಮನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ನಮ್ಮ ಕಾರುವಾಹನ ಚಾಲಕ ರಮೇಶ ನನ್ನ ಜೊತೆಯಲ್ಲಿದ್ದರು.