ಒಳ ಮೀಸಲಾತಿ ಸರಿ ಎಂದ ಸುಪ್ರೀಂಕೋರ್ಟ್ : ಹರ್ಷ ವ್ಯಕ್ತಪಡಿಸಿದ ಮಾದಿಗ ದಂಡೋರ ಸಮಿತಿ

ಶಹಾಪೂರ :ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಒಳ ಮೀಸಲಾತಿಯಲ್ಲಿ ಅನುಮತಿ ಇದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಬಹುಮತದ ತೀರ್ಪು ನೀಡಿದೆ.ಉದ್ಯೋಗಗಳು ಮತ್ತು ಪ್ರವೇಶಗಳಲ್ಲಿ ಕೋಟಾವನ್ನು ನೀಡಲು ಈ ವರ್ಗೀಕರಣವನ್ನು ಮಾಡಲು ರಾಜ್ಯಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟು ಹೇಳಿದೆ. ಏಳು ಜನರಿದ್ದ ನ್ಯಾಯಪೀಠ ಈ ತೀರ್ಪನ್ನು ನೀಡಿದೆ.
ಕಳೆದ 30 ವರ್ಷಗಳಿಂದಲೂ ಕೂಡ ಒಳ ಮೀಸಲಾತಿಗಾಗಿ ಹಲವು ಹೋರಾಟಗಳು ದಿನಂಪ್ರತಿ ನಡೆಯುತ್ತಲೇ ಇದ್ದವು. ಒಳ ಮೀಸಲಾತಿಗಾಗಿ ಒತ್ತಾಯ ಮಾಡುತ್ತಿದ್ದ ಮಂದಕೃಷ್ಣ ಮಾದಿಗ ಹಾಗೂ ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷರಾದ  ಮಾಪಣ್ಣ ಹದನೂರು,ಎಮ್, ಶಂಕ್ರöಪ್ಪ, ಸಿಕೆ.ಜಯಣ್ಣರವರ ಹೋರಾಟದ ಫಲವಾಗಿ ಇಂದು ಸುಪ್ರಿಂಕೋರ್ಟ್ ನೀಡಿದ್ದ ತೀರ್ಪು ಐತಿಹಾಸಿಕ ಘಟ್ಟ ತಲುಪಿದಂತಾಗಿದ್ದು ಏಳು ಜನ ನ್ಯಾಯಾಧೀಶರ ಪೀಠದಲ್ಲಿ ಒಳಮೀಸಲಾತಿ ಕುರಿತು ಮಹತ್ವದ ತೀರ್ಪು ನೀಡಿದ ಹಿನ್ನಲೆಯಲ್ಲಿ ಶಹಪುರದ ಬಸವೇಶ್ವರ ವೃತ್ತದಲ್ಲಿ ಮಾದಿಗ ಸಮಾಜದ ಹಲವು ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತ ಸುರುಪುಕರ್,ಮಾದಿಗ ದಂಡೋರ ಸಮಿತಿ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷರಾದ ವೆಂಕಟೇಶ ಆಲೂರ, ಮುಖಂಡರಾದ ಶಾಂತಪ್ಪ ಕಟ್ಟಿಮನಿ, ನಿಂಗಣ್ಣ ಹೊಸಮನಿ,ಮಲ್ಲಪ್ಪ ಗೋಗಿ,ಸಿದ್ದಪ್ಪ ದೇವರಗೊನಾಲ್. ಬಸವರಾಜ ನಾಯ್ಕಲ್, ಜೆಟ್ಟೆಪ್ಪ ಕೆಂಭಾವಿ ಭೀಮರಾಯ ರಸ್ತಾಪುರ, ಭೀಮರಾಯ ಕದರಾಪುರ, ಬಸವರಾಜ ಪೂಜಾರಿ, ಬಸವರಾಜ ಮೈತ್ರಿ, ಮಾನಪ್ಪ ವಠಾರ, ರುದ್ರಪ್ಪ ಹುಲಿಮನಿ, ಅಯ್ಯಾಳಪ್ಪ ದೊರನಳ್ಳಿ, ವಾಸು ವಕೀಲರು, ಲಕ್ಷ್ಮಣ್ ಶೆಟ್ಟಿ, ಪರಶುರಾಮ ಮಹಲರೋಜಾ,  ಶಿವು ದೊಡ್ಡಮನಿ, ಭೀಮರಾಯ ಕರಕಳ್ಳಿ, ಸಾಬಣ್ಣ ಅಲಿಗಿ, ಖಂಡಪ್ಪ ಕಂಚನಕವಿ, ವಿಜಯಕುಮಾರ ಎದರಮನಿ, ಹಿರಗಪ್ಪ ಹೋತಪೇಟ, ಶಿವು ನಾಟೇಕಾರ, ಬಸವರಾಜ ಗಣೆಕಲ್, ಶೇಖಪ್ಪ ಕತ್ತಿ, ಚಂದಪ್ಪ ಅಲಿಗಿ, ಶಿವುಪುತ್ರ ಚಂದಾಪುರ, ಮಲ್ಲಣ್ಣ ಜೆಂಡೆದ, ಮರೆಯಪ್ಪ ರತ್ತಾಳ,. ಹೊನ್ನಪ್ಪ ಕಟ್ಟಿಮನಿ, ಶರಣಪ್ಪ ದೊಡಮನಿ, ಚಂದ್ರ ಕಟ್ಟಿಮನಿ ಚಂದ್ರಶೆಖರ ಸಗರ, ಭೀಮರಾಯ ಕನ್ಯಾಕೊಳೂರು ಮರೆಪ್ಪ ಬೊಮನಳ್ಳಿ, ಮಲ್ಲೇಶ ದೊರನಳ್ಳಿ, ಶಿವು ದಿಗ್ಗಿ ಸೇರಿದಂತೆ ಅನೇಕರು ಇದ್ದರು.
ಒಳ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂಕೋರ್ಟ್ ಏಳು ಸದಸ್ಯರ ಪೀಠ ನೀಡಿರುವ ತೀರ್ಪು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಅಭೂತಪೂರ್ವ ಗೆಲುವಾಗಿದೆ.ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಸಾಮಾಜಿಕ ನ್ಯಾಯಕ್ಕೆ ನವ ಶಕ್ತಿ ಹಾಗೂ ಭಾರತೀಯ ಸಂವಿಧಾನದ ಆಶಯಕ್ಕೆ ಇನ್ನಷ್ಟೂ ಬಲ ನೀಡಿದಂತಾಗಿದೆ. ಎಂದು ಯಾದಗಿರಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಕಾರ್ಯದರ್ಶಿ ಮಲ್ಲು ಹಲಗಿ ಕುರಕುಂದಾ ಹರ್ಷ ವ್ಯಕ್ತಪಡಿಸಿದ್ದಾರೆ. ಕೂಡಲೆ ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಜಾರಿ ಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.ಹಣಮಂತ ಮಾಲಹಳ್ಳಿ, ಸುರೇಶ ಹಾಲಗೇರಾ, ಮರಿಲಿಂಗ ಹೊರಟುರು, ಕುಮಾರ ತುಮಕೂರು, ಹಣಮಂತ ಒಡ್ಕರ್ ಇದ್ದರು.

About The Author