ವಿಶ್ವ ಸ್ತನ್ಯಪಾನ ಸಪ್ತಾಹ ದಿನಾಚರಣೆ : ಕೊರತೆಗಳನ್ನು ಕೊನೆಗೊಳಿಸಿ : ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ

ಶಹಾಪೂರ : ಅಗಸ್ಟ ಒಂದರಂದು ತಾಲೂಕಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಶಹಾಪೂರ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ವೈದ್ಯಾಧಿಕಾರಿ ಡಾ.ವೆಂಕಟೇಶ ಬೈರವಡಗಿ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜಗದೀಶ ಉಪ್ಪಿನ್ ನೇತ್ರ ತಜ್ಞರು,ಡಾ.ಗಂಗಾಧರ ಚಟ್ರಿಕಿ ವೈದ್ಯಾಧಿಕಾರಿಗಳು, ಡಾ.ರಾಘವೇಂದ್ರ ಮಕ್ಕಳ ತಜ್ಞವೈದ್ಯರು, ಡಾ.ಸರೋಜ ಸ್ತ್ರೀರೋಗ ತಜ್ಞರು, ಡಾ.ಸಾವಿತ್ರಿ ಮಕ್ಕಳ ತಜ್ಞರು ಪಾಲ್ಗೊಂಡಿದ್ದರು.
  ಕಾರ್ಯಕ್ರಮದಲ್ಲಿ ಆರ್‌ಎಂಎನ್ಸಿಎಚ್ ಸಮಾಲೋಚಕರಾದ ಶ್ರೀಮತಿ ಶಿವಬಸಮ್ಮರವರು ಎದೆಹಾಲಿನ ಮಹತ್ವ, ಗೀಬಿನ ಹಾಲು ಕುಡಿಸುವುದು, ರೋಗನಿರೋಧಕ ಶಕ್ತಿ ಬೆಳೆಯುವುದರ ಬಗ್ಗೆ ತಿಳಿಸಿಕೊಟ್ಟರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಸವರಾಜ ರೆಡ್ಡಿ ತಾಯಿಯ ಎದೆಹಾಲು ಮಗುವಿನ ಪ್ರಥಮ ರೋಗ ನಿರೋಧಕ ಲಸಿಕೆ ಎದೆ ಹಾಲುಣಿಸುವುದು, ಪ್ರತಿ ತಾಯಿಯು ಕನಿಷ್ಠ ೬ ತಿಂಗಳುವರೆಗೆ ಎದೆಹಾಲನ್ನು ಹೊರತುಪಡಿಸಿ ಬೇರೆ ಏನನ್ನು ನೀಡಬಾರದು. ಪೂರಕ ಆಹಾರ ತಿನ್ನಿಸುವುದು ಮತ್ತು ಕಾಂಗರೂ ಮದರ್ ಆರೈಕೆ ಕುರಿತು, ಎದೆಹಾಲುಣಿಸುವ ಪ್ರಕ್ರಿಯೆಗಳನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮವನ್ನು ಮಲ್ಲಪ್ಪ ಕಾಂಬ್ಳೆ ಹಿ.ಆ.ನಿರೀಕ್ಷಣಾಧಿಕಾರಿಗಳು ನಿರೂಪಿಸಿದರು.ಬಸವರಾಜ ಅಂಗಡಿ ಹಿ.ಆ.ನಿರೀಕ್ಷಣಾಧಿಕಾರಿಗಳು,
ಇಂದಿರಾ ಪ್ರಾ.ಆ.ಸುರಕ್ಷತಾಧಿಕಾರಿಗಳು,ವಿದ್ಯಾಶ್ರೀ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರು,ಬಿಚ್ಚಮ್ಮ ಆಶಾ ಮೇಲ್ವಿಚಾರಕರು,
ಆಸ್ಪತ್ರೆಯ ಅಮೃತಾ ಶುಷ್ರೂಷಕಾಧಿಕಾರಿ ಹಾಗೂ ಸಿಬ್ಬಂದಿಗಳು,ಮಂಜುನಾಥ ಪಾಟೀಲ್ ಆರೋಗ್ಯ ನಿರೀಕ್ಷಣಾಧಿಕಾರಿಗಳು,ಪದ್ಮಾವತಿ ಪ್ರಾ.ಆ.ಸುರಕ್ಷತಾಧಿಕಾರಿಗಳು ಹಾಗೂ ನಗರದ ಮಕ್ಕಳು-ತಾಯಂದಿರು ಭಾಗವಹಿಸಿದ್ದರು.
ರಾಚಣ್ಣಗೌಡ ಪ್ರ.ಶಾ.ತಂತ್ರಜ್ಞಾಧಿಕಾರಿಗಳು ಕಾರ್ಯಕ್ರಮವನ್ನು ವಂದಿಸಿದರು.

About The Author