ಕೆಕೆಆರ್ಡಿಬಿ ಅನುದಾನದಡಿಯಲ್ಲಿ ಗೋಗಿ ಕೆ ಗ್ರಾಮದಲ್ಲಿ ಸಚಿವರಿಂದ ಶಾಲಾ ಕೊಠಡಿಗಳ ಉದ್ಘಾಟನೆ

ಮುಖ್ಯಾಂಶಗಳು

* 2023-24ರಲ್ಲಿ 1600 ಕೋಟಿ ನೀಡಲಾಗಿತ್ತು.
* 2024-25ರಲ್ಲಿ 1500 ಕೋಟಿ ಮೀಸಲಿಡುವಂತೆ ಪ್ರಸ್ತಾವನೆ ಸಲ್ಲಿಕೆ
* 2023-24 ರಲ್ಲಿ ಗೋಗಿ ಕೆ ಮತ್ತು ಗೋಗಿ ಪಿ ಗ್ರಾಮಗಳಲ್ಲಿ ಸಿಸಿ ರಸ್ತೆ ಸೇರಿದಂತೆ ಇತರ ಕಾಮಗಾರಿಗಳಿಗಾಗಿ 3 ಕೋಟಿ 70 ಲಕ್ಷ ಮಂಜೂರು ಮಾಡಲಾಗಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ.
* ಸರಕಾರಿ ಪದವು ಪೂರ್ವ ಕಾಲೇಜಿನಲ್ಲಿ ಗ್ರಂಥಾಲಯ ಕಂಪ್ಯೂಟರ್ ಲ್ಯಾಬ್ ಪುರುಷರ ಶೌಚಾಲಯ, ಶುದ್ಧಕುಡಿಯುವ ನೀರಿನ ಘಟಕದ ಬೇಡಿಕೆ 
* 100 ಕೋಟಿ ಅನುದಾನದಡಿಯಲ್ಲಿ 80 ವಸತಿ ನಿಲಯಗಳ ಮಂಜೂರು
ಶಹಾಪುರ : ಕಾಂಗ್ರೆಸ್ ಪಕ್ಷ ಬಡವರ ಪರವಾಗಿದ್ದು ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಕೊಡುತ್ತದೆ ಎಂದು ಸಚಿವರಾದ ಶರಣಬಸಪ್ಪಗೌಡ ದರ್ಶನಪೂರ ಹೇಳಿದರು. ತಾಲೂಕಿನ ಗೋಗಿ ಕೆ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ 53 ಲಕ್ಷ ಅನುದಾನದಡಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ನಾಲ್ಕು ಕೊಠಡಿಗಳ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ನಮ್ಮ ಪಕ್ಷ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತದೆ. ಬಿಜೆಪಿಯವರ ಹಾಗೇ ಬಂಡವಾಳಗಳ ಶಾಹಿ ಪರವಲ್ಲ. ಸಂಸದರಾದ ಮಲ್ಲಿಕಾರ್ಜುನ್ ಖರ್ಗೆಯವರ ಶ್ರಮದಿಂದಾಗಿ ಈ ಭಾಗದವರಿಗೆ 371 ಜೆ ಕಲಂದಡಿಯಲ್ಲಿ ಶೈಕ್ಷಣಿಕವಾಗಿ ಉದ್ಯೋಗದಲ್ಲಿ ಹೆಚ್ಚಿನ ಮೀಸಲಾತಿ ದೊರಕಿದೆ. ನಮ್ಮ ಭಾಗದಲ್ಲಿ ಉದ್ಯೋಗದಲ್ಲಿ ಶೇ 85ರಷ್ಟು ಕಲ್ಯಾಣ ಕರ್ನಾಟಕ ಭಾಗದವರಿಗೆ ಹಾಗೂ ಕಲ್ಯಾಣ ಕರ್ನಾಟಕ ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಶೇಕಡ 8ರಷ್ಟು ಉದ್ಯೋಗ ಮೀಸಲಾತಿ ಕೊಡಲೇಬೇಕಾಗುತ್ತದೆ. ಇದರಿಂದ ಕಳೆದ ವರ್ಷದಲ್ಲಿ 1200  ವಿದ್ಯಾರ್ಥಿಗಳು ಮೆಡಿಕಲ್ ಸೀಟ್ಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಪ್ರಸ್ತುತ ಆರ್ಥಿಕ ವರ್ಷದಲ್ಲಿ 5,000 ಕೋಟಿ ಕಲ್ಯಾಣ ಕರ್ನಾಟಕಕ್ಕೆ ಮುಖ್ಯಮಂತ್ರಿಗಳು ಮೀಸಲಿಟ್ಟಿದ್ದಾರೆ.ಕಲ್ಯಾಣ ಕರ್ನಾಟಕದಲ್ಲಿ 69 ಪಿಹೆಚ್ಸಿ ಕೇಂದ್ರಗಳು ಮಂಜೂರಾಗಿವೆ.ನಾಗನಟಗಿ, ದರ್ಶನಾಪುರ, ಮದ್ರಿಕಿ ಗ್ರಾಮಗಳಲ್ಲಿ ಪಿಹೆಚ್ ಸಿ ಕೇಂದ್ರಗಳನ್ನು ಒದಗಿಸುವಂತೆ ಬೇಡಿಕೆ ಇಡಲಾಗಿದೆ. 100 ಕೋಟಿ ಅನುದಾನದ ಅಡಿಯಲ್ಲಿ 80 ವಸತಿ ನಿಲಯಗಳನ್ನು ಸರ್ಕಾರ ಮಂಜೂರು ಮಾಡಿದೆ.ಈ ಸಂದರ್ಭದಲ್ಲಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಾಬಮ್ಮ ಮೋನಪ್ಪ ಹೊಸಮನಿ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಶಿವುಮಾಂತ ಸಾಹು,
ಚಂದಪ್ಪಗೌಡ ತಾಯಮ್ಮಗೋಳ, ಸೈಯದ್ ಸಜಾದ್ ಚಾಂದಸಾಹೇಬ್ ದರ್ಗಾ ಗುರುಗಳು, ಬಸವರಾಜಪ್ಪ ಗೌಡ ತಂಗಡಗಿ, ಮಲ್ಲಣ್ಣ ಗೋಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರರು,ಮಾಣಿಕ್ ರೆಡ್ಡಿ ಮಲ್ಲಾರ್, ಚಂದಪ್ಪ ಹಲ್ಗಿ, ಶೇಖಪ್ಪ ಕತ್ತಿ,ಚಂದಪ್ಪ ಗುಡಿಮನಿ, ಚಂದಪ್ಪ ಸೀತನಿ,ಪ್ರಾಚಾರ್ಯರಾದ ಗುರುಲಿಂಗಪ್ಪ ಸಾಗರ್ ಸೇರಿದಂತೆ ವಿದ್ಯಾರ್ಥಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗ್ರಾಮಸ್ಥರು ಇದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಇರುವವರೆಗು ಗ್ಯಾರಂಟಿಗಳಿರುತ್ತವೆ,  ಯಾವುದೇ ಸಂದರ್ಭದಲ್ಲಿ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ.  ನಾವು ಪ್ರಣಾಳಿಕೆಯಲ್ಲಿ ಹೇಳಿದ ಹಾಗೆ ಎಲ್ಲಾ ಗ್ಯಾರಂಟಿಗಳನ್ನು ಯಥಾ ಸ್ಥಿತಿಯಲ್ಲಿ ಜಾರಿಗೋಳಿಸುತ್ತೇವೆ. ವರ್ಷಕ್ಕೆ 68,000 ಕೋಟಿ ರೂಪಾಯಿಗಳನ್ನು ಯಾವುದೇ ದಲ್ಲಾಳಿಗಳಿಲ್ಲದೆ ನೇರವಾಗಿ ಬಡವರ ಖಾತೆಗೆ ಹಣ ಸೇರುತ್ತದೆ ಎಂದು ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

About The Author