ಕಲ್ಯಾಣ ಕಾವ್ಯ
ಮರುಳರಾಟ !
ಮುಕ್ಕಣ್ಣ ಕರಿಗಾರ
ಎಲ್ಲರಿಗು ಎತ್ತರದ ಸ್ಥಾನ ಬೇಕೆಂಬರು
ಇಲ್ಲ ತನಗಾರು ಸರಿ ಎಂಬಂತೆ ವರ್ತಿಪರು
ಎಲ್ಲವನು ಬಲ್ಲವರು ನಾವು ಎಂಬಂತೆ
ಇಲ್ಲ ಸಲ್ಲುದದನಾಡುವರು.
ಶಿವಪಥದಿ ನಡೆವವಗೆ ಬೇಕೆ
ಶಿವಪಥಕೆ ಸಲ್ಲದ ಈ ಅನಾಚಾರ ?
ಜಗಕ್ಕೊಬ್ಬನೆ ಹಿರಿಯ,ಗುರುವು ಶಿವನೆಂಬುದನರಿಯದೆ
ಮರುಳುಗಳು ತಮತಮಗೆ ತಾವೆ ಗುರುಗಳು,ಹಿರಿಯರು ಎಂದು ಉಬ್ಬಿಹರು.
ಶಿವಸರ್ವೋತ್ತಮ ಪಥವನರಿಯದ ನರಕುನ್ನಿಗಳು
ಅಟ್ಟೆಇಲ್ಲದದೇಹಗಳ ಗಟ್ಟಿಗರು ಎಂದು ಭ್ರಮಿಸಿ
ನೆಟ್ಟಗಿಲ್ಲದ ನಡೆಯನಾಚರಿಸಿ
ನೆಟ್ಟಗೆ ನಡೆದಿಹರು ನರಕದತ್ತ! ಗುರುವಿಲ್ಲ ! ಗತಿಯಿಲ್ಲ !
ಶಿವನೆ ಗುರುವು,ಶಿವನೆ ಪರವು
ಶಿವನೊಬ್ಬನೆ ಜಂಗಮನು ಜಗಕ್ಕೆಲ್ಲ
ಭವಿಜೀವಿಗಳಾರೂ ಜಂಗಮರಲ್ಲ
ಮರುಳಮಾನವರ ಮಾತಿಗೆ ಬೆಲೆ ಇಲ್ಲ.
ನಾಯಿಯ ಮೊಲೆಹಾಲ ಕುಡಿದ ಹಸುಳೆ
ನಾಯಿಯಂತಾಡುವುವಲ್ಲದೆ ನರರಂತಾಡುವುದೆ ?
ಸಾಯುಜ್ಯದ ಪಥವವನರಿಯದ ನರರು
ಕಾಯನ್ಮುಕ್ತರಹರೆ? ಜೀವನ್ಮುಕ್ತರಹರೆ?
ಹಿರಿತನದ ಭ್ರಮೆಯಲ್ಲಿ
ಗುರುತನದ ಸುಳಿಮಡುವಿನಲಿ ಸಿಕ್ಕು
ಬಳಲ್ವರಿಗೆಲ್ಲಿಯದೊ ಕೈಲಾಸ?
ನರಕವೆ ಗುರಿಯಾಗಿ ನಡೆವವರಿಗೆ ಎಲ್ಲಿಹುದೊ ಮುಕ್ತಿ ?
೦೪.೦೭.೨೦೨೪
Forwar
|