ಮಹಾಶೈವ ಧರ್ಮಪೀಠದಲ್ಲಿ 96 ನೆಯ ‘ ಶಿವೋಪಮನ ಕಾರ್ಯ’

ರಾಯಚೂರು : ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜೂನ್ 23 ರ ಆದಿತ್ಯವಾರದಂದು 96 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರಾನುಗ್ರಹವನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ವಿಶ್ವೇಶ್ವರ ಶಿವನು ತನ್ನ ಸನ್ನಿಧಿಗೆ ಬರುವ ಭಕ್ತರ ಸರ್ವವಿಧ ಸಮಸ್ಯೆ,ಸಂಕಟಗಳನ್ನು ಕಳೆಯುತ್ತಿರುವುದರಿಂದ ಅಸಾಧ್ಯವ್ಯಾದಿಪೀಡಿತ ಜನರಲ್ಲದೆ ಸಾಂಸಾರಿಕ ತೊಂದರೆ,ಕೋರ್ಟು ಕಛೇರಿ ವ್ಯಾಜ್ಯ,ದಾಯಾದಿ ಕಲಹಗಳು ಸೇರಿದಂತೆ ನಾನಾ ವಿಧದ ಸಮಸ್ಯೆಗಳನ್ನು ಹೊತ್ತು ಬಂದಿದ್ದ ಸಾಕಷ್ಟು ಸಂಖ್ಯೆಯ ಭಕ್ತರುಗಳು ಇಂದಿನ ಶಿವೋಪಶಮನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಇತರ ಕ್ಷೇತ್ರ,ಮಠ ಮಂದಿರಗಳಿಗೆ ಸುತ್ತಿ ಪರಿಹಾರ ಕಾಣದೆ ಇರುವ ಸಾಕಷ್ಟು ಜನ ಭಕ್ತರುಗಳು ಮಹಾಶೈವ ಧರ್ಮಪೀಠಕ್ಕೆ ಆಗಮಿಸುತ್ತಿದ್ದಾರೆ.ಇತರ ಮಠ ಮಂದಿರಗಳಲ್ಲಿ ವ್ಯಕ್ತಿಗಳು ತಾಂತ್ರಿಕ ಪ್ರಯೋಗಗಳಿಂದ ಜನರನ್ನು ನೋಡುತ್ತಿದ್ದರೆ ಮಹಾಶೈವ ಧರ್ಮಪೀಠದಲ್ಲಿ ಸ್ವಯಂ ಪರಶಿವನೇ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಮೂಲಕ ತನ್ನ ಲೋಕೋದ್ಧಾರದ ಲೀಲೆಯನ್ನಾಡುತ್ತಿರುವುದರಿಂದ ಇಲ್ಲಿ ಎಂತಹುದೇ ಸಮಸ್ಯೆಗಳಿಗೆ ಪರಿಹಾರವಿದೆ.ಮಹಾಶೈವ ಧರ್ಮಪೀಠವು ಭೂಕೈಲಾಸವೆನ್ನಿಸಿಕೊಂಡಿದ್ದು ‘ ಎಲ್ಲಿಯೂ ಪರಿಹಾರವಾಗದ ಸಮಸ್ಯೆಗಳು ಇಲ್ಲಿ ಪರಿಹಾರವಾಗುತ್ತಿವೆ; ಇಲ್ಲಿ ಪರಿಹಾರವಾಗದ ಸಮಸ್ಯೆಗಳು ಇನ್ನೆಲ್ಲಿಯೂ ಪರಿಹಾರವಾಗುವುದಿಲ್ಲ’ ಎನ್ನುವ ಮಾತು ಜನಜನಿತವಾಗಿದೆಯಾದ್ದರಿಂದ ಎಲ್ಲೆಡೆಗಳಿಂದ ಭಕ್ತರುಗಳು ಮಹಾಶೈವ ಧರ್ಮಪೀಠವನ್ನು ಹುಡುಕಿಕೊಂಡು ಬರುತ್ತಿದ್ದಾರೆ.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮೂಲಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ದಾಸೋಹಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಮಾಲಿಪಾಟೀಲ್ ಹೊನ್ನಟಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಪತ್ರಕರ್ತ ಏಳುಬಾವೆಪ್ಪಗೌಡ,ಸಿದ್ರಾಮಯ್ಯಸ್ವಾಮಿ ಹಳ್ಳಿ,ವೀರಭದ್ರಯ್ಯಸ್ವಾಮಿ ಹಳ್ಳಿ,ವಿರುಪಾಕ್ಷಪ್ಪಗೌಡ ಹೊನ್ನಟಗಿ,ಬಂದಪ್ಪಗೌಡ ಖಾನಾಪುರ,ಯಲ್ಲಪ್ಪ ಕರಿಗಾರ,ಬಸವರಾಜ ಹರವಿ,ಲಿಂಗಪ್ಪ,ಬಸವಲಿಂಗಪೂಜಾರಿ ಅಮರಾಪುರ,ಮಸೀದಪುರದ ದೇವಿ ಉಪಾಸಕರಾದ ರಾಮಕೃಷ್ಣ ಗುಂಟ್ರಾಳ,ನರಸರಡ್ಡೆಪ್ಪ ಪೋಲೀಸ್ ಪಾಟೀಲ್,ವೆಂಕಟೇಶ ಮಸೀದಪುರ, ರಾಮಕೃಷ್ಣ ಯಾದವ,ಅಕ್ರಂಪಾಶಾ,ಜಿಂದಪ್ಪ,ತಿಪ್ಪಯ್ಯ ಭೋವಿ ಸೇರಿದಂತೆ ಭಕ್ತರುಗಳು ಉಪಸ್ಥಿತರಿದ್ದರು.

About The Author