ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಬಿಎಮ್ ಪಾಟೀಲ್

ಶಹಾಪುರ : ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಅಧ್ಯಕ್ಷರಾದ ಬಿಎಮ್ ಪಾಟೀಲ್ ಸದಾ ಸಮಾಜದ ಸಂಘಟನೆಯ ಬಗ್ಗೆ ಚಿಂತಿಸುತ್ತಿರುವ ವ್ಯಕ್ತಿ.ಸಮಾಜದ ಕಟ್ಟ ಕಡೆಯ ಜನರು ಕೂಡ ಸಂತಸದಿಂದ ಇರಬೇಕು ಎನ್ನುವ ವ್ಯಕ್ತಿ ಬಿ ಎಂ ಪಾಟೀಲ್. ರಾಜ್ಯಾದ್ಯಂತ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘವನ್ನು ಸ್ಥಾಪಿಸಿ ಸಂಘಟನೆಯನ್ನು ಬೆಳೆಸಿದ್ದಾರೆ.

ರಾಜಧಾನಿ ಬೆಂಗಳೂರಿನಿಂದಿಡಿದು ಉತ್ತರ ದಕ್ಷಿಣ ಮತ್ತು ಕಲ್ಯಾಣ ಕರ್ನಾಟಕದವರಿಗೂ ಯುವ ಘಟಕಗಳಿವೆ.ಯಾರಿಗಾದರೂ ಅನ್ಯಾಯವಾದರೆ ತಕ್ಷಣವೇ ಆ ಸ್ಥಳಕ್ಕೆ ಬಂದು ಪರಿಹರಿಸುವ ಪ್ರಯತ್ನ ಮಾಡುತ್ತಾರೆ. ಸಮಾಜದ ಪರ ಅಪಾರ ಕಳಕಳಿ ಇರುವಂತಹ ಯುವ ನಾಯಕ.

ಅಮಾಯಕರಾದ ಕುರುಬರಿಗೆ ಹಲವಾರು ಜನರು ಆರ್ಥಿಕವಾಗಿ, ಸಾಮಾಜಿಕವಾಗಿ ಕಷ್ಟಕೊಡುತ್ತಿದ್ದಾರೆ. ಆಸ್ತಿಯ ವಿಚಾರ, ಹಣಕಾಸಿನ ವಿಚಾರದಲ್ಲಿ ವಂಚಿತರಾಗಿದ್ದಾರೆ. ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಹಲವಾರು ಸಮಸ್ಯೆಗಳು ಬಿಎಂ ಪಾಟೀಲರು ತಾವೇ ಖುದ್ದಾಗಿ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಸಮಾಜದ ಒಳಿತಿಗಾಗಿ ಸರ್ಕಾರದ ಗಮನ ಸೆಳೆದಿದ್ದಾರೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದಾರೆ. ಸಮಸ್ಯೆಗಳ ಸ್ಥಳಕ್ಕೆ ಖುದ್ದಾಗಿ ಬಂದು ಚರ್ಚಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದಾರೆ. ಅಧಿಕಾರ ಸಿಕ್ಕಾಗ ಸಮಾಜದ ಒಳಿತಿಗಾಗಿ ಜನರ ನಾಡಿಮಿಡಿತವನ್ನು ಅರಿಯಬೇಕು. ಇಲ್ಲದಿದ್ದರೆ ನಾವಿದ್ದು ಲಾಭವಿಲ್ಲ ಎನ್ನುತ್ತಾರೆ ಪಾಟೀಲರು.

ಹಾಲುಮತ ಕುರುಬರು ಸಂಭೂತರು ಎಂದು ಉತ್ತರ ಕರ್ನಾಟಕ ಭಾಷೆಯಲ್ಲಿ ಕರೆಯುತ್ತಾರೆ. ಅಂದರೆ ಯಾವುದೇ ಜಗಳ ಜಂಜಾಟ ದೌರ್ಜನ್ಯ ಇವೆಲ್ಲವುಗಳಿಂದ ಬಹುದೂರವಿರುವ ಜನ ಹಾಲುಮತದವರ. ತಮ್ಮ ಪಾಡಿಗೆ ತಾವಿರುವ ಕುರುಬರು ಕುರಿ ಮೆಯಿಸುವುದು, ಸಂಚಾರಿಕರಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕುರಿಗಳನ್ನು ಮೇಯಿಸಿಕೊಂಡು ಸಂಚಾರ ಮಾಡುವ ಕುರುಬರು, ಇಂತಹವರಿಗೆ ಇತರರು ಅನೇಕ ಕಿರುಕುಳ ಕೊಡುತ್ತಾರೆ. ಆದರೂ ಸಹಿಸಿಕೊಳ್ಳುವವರು ಹಾಲುಮತದವರು.ಕುರಿ ಕಳ್ಳತನ,ಕುರಿ ಮೇಯಿಸವಾಗ ಹೊಲದ ಮಾಲೀಕರು ದೌರ್ಜನ್ಯ ಮಾಡುವರು. ಇದೆಲ್ಲ ಸಮಸ್ಯೆಗಳನ್ನು ನಾವು ಪರಿಹರಿಸಬೇಕಿದೆ ಎನ್ನುತ್ತಾರೆ ಪಾಟೀಲರು.

ಸಮಾಜದ ಸಮಸ್ಯೆಗಳನ್ನು ಸರಕಾರದ ಮಟ್ಟಕ್ಕೆ ಒಯ್ಯಬೇಕು. ಸರಕಾರದ ಗಮನ ಸೆಳೆಯಬೇಕು. ಸಮಾಜಕ್ಕೆ ನಾವು ಕೊಡುವ ಕೊಡುಗೆ ಚಿರಸ್ಮರಣೆಯವಾಗಿರಬೇಕು ಎನ್ನುತ್ತಾರೆ ಪಾಟೀಲರು.

ಇತ್ತೀಚಿನ ದಿನಗಳಲ್ಲಿ ಸಮಾಜದ ಮುಖಂಡರು ಅಧಿಕಾರಕ್ಕಾಗಿ ಸಮಾಜವನ್ನು ಬಳಸಿಕೊಳ್ಳುತ್ತಿರುವುದು ದುರಂತವೇ ಸರಿ. ರಾಜಕೀಯವಾಗಿ ಏಳಿಗೆ ಕಂಡ ಮೇಲೆ ಸಮಸ್ಯೆ ಕೇಳಿಕೊಂಡು ಹೋದವರನ್ನು ಕಣ್ಣಾಡಿಸಿ ನೋಡುತ್ತಿಲ್ಲ. ಅಧಿಕಾರಕ್ಕಾಗಿ ಸಮಾಜ ಬೇಕು. ಆದರೆ ಸಮಾಜದ ಒಳಿತಿಗಾಗಿ ತಳಮಟ್ಟದ ಕುರುಬರ ಹಿತಕ್ಕಾಗಿ ನಾಯಕರು ನಮ್ಮನ್ನು ಕಡೆಗಣಿಸುತ್ತಿದ್ದಾರೆ. ರಾಜ್ಯ ಕುರುಬ ಸಂಘಟನೆಯಿಂದಿಡಿದು ಎಲ್ಲಾ ನಾಯಕರು ಕೂಡ ನಮ್ಮನ್ನು ಕಡೆಗಣಿಸುತ್ತಿರುವುದು ಕಳವಳಕಾರಿ. ಇತರ ಸಮಾಜದವರನ್ನು ನೋಡಿ ಕಲಿತುಕೊಳ್ಳುವುದು ಬಹಳಷ್ಟು ಇದೆ ಅದರಲ್ಲಿಯೂ ಬಿ ಎಂ ಪಾಟೀಲ್ ಸಮಾಜದ ಜನರ ಬಗ್ಗೆ ಅಪಾರ ಕಾಳಜಿ ಇರುವ ವ್ಯಕ್ತಿ ಎಂದರೆ ತಪ್ಪಾಗಲಾರದು.

ಕಾಂಗ್ರೆಸ್ ಕಟ್ಟಾಳು ಬಿಎಂ.ಪಾಟೀಲ

ಕರ್ನಾಟಕ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದಾರೆ.ಹಿಂದುಳಿದ ವರ್ಗದಿಂದ ಬಂದ ವ್ಯಕ್ತಿ ಪಾಟೀಲರು. ಕಾಂಗ್ರೆಸ್ ಪಕ್ಷದಲ್ಲಿ NSUI ದಿಂದ ಬಂದು, ಕಾಂಗ್ರೆಸ್ ಪಕ್ಷದಲ್ಲಿ ಕೊಟ್ಟಿರುವ ಪದವಿಗಳನ್ನು ಸ್ವೀಕರಿಸಿ ಪಕ್ಷಕ್ಕಾಗಿ ದುಡಿದಿದ್ದಾರೆ. ಪ್ರಸ್ತುತ ನಡೆದ ಲೋಕಸಭಾ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಬಳ್ಳಾರಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ನೇಮಕ ಮಾಡಿದ್ದರು. ಕಾಂಗ್ರೆಸ್ ಪಕ್ಷ ಲೋಕಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡರಲ್ಲೂ ಜಯ ಸಾಧಿಸಿರುವುದು ವಿಶೇಷವಾಗಿತ್ತು.

ಹಾಲುಮತ ಸಮಾಜದ ಒಳಿತಿಗಾಗಿ ದುಡಿದ ಪ್ರಯುಕ್ತ ಬಿಎಂ ಪಾಟೀಲರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ಹಾಗೂ ಹಿಂದುಳಿದ ವರ್ಗದ ನಾಯಕನಾಗಿ ಹಲವಾರು ಸಮಾಜದ ಪರ‌ಕೆಲಸ ಮಾಡಿದ ನಿಮಿತ್ತ ಪಾಟೀಲರಿಗೆ ದೇವರಾಜ್ ಅರಸು ಪ್ರಶಸ್ತಿ ಲಭಿಸಿದೆ.

ಜೊತೆಗೆ ಸಮಾಜದ ಏಳಿಗೆಗಾಗಿ ಇಂದಿಗೂ ಶ್ರಮಿಸುತ್ತಿದ್ದಾರೆ. ಇವರು ರಾಜಕೀಯವಾಗಿ ಮೇಲ್ಪಂಕ್ತಿಗೇರಲಿ. ಸಮಾಜದ ಒಳಿತಿಗಾಗಿ ಹಲವು ಒಳ್ಳೆಯ ಕೆಲಸಗಳನ್ನು ಮಾಡಲಿ ಎನ್ನುವುದು ಕುರುಬ ಸಮಾಜದವರ ಆಶಯವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾದ ಬಿಎಮ್ ಪಾಟೀಲರು,ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಮುಂದಿನ ದಿನಗಳಲ್ಲಿ ಬಿ ಎಂ ಪಾಟೀಲರಿಗೆ ಪಕ್ಷ ಮತ್ತು ಸರ್ಕಾರ ಒಳ್ಳೆಯ ಸ್ಥಾನಮಾನ ನೀಡಲಿ.

ಬಸವರಾಜ ಅತ್ನೂರು.
ಜಿಲ್ಲಾಧ್ಯಕ್ಷರು. ಸಿದ್ದರಾಮಯ್ಯ ಬ್ರಿಗೇಡ್ ಯಾದಗಿರಿ

ಸಿ

About The Author