ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಿಂತ ಶ್ರೇಷ್ಠವಾದದ್ದು:ಚನ್ನಯ್ಯ ಹಿರೇಮಠ

ಶಹಾಪುರ:ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು,ಇಂತಹ ದಿನಗಳು ಮುಂದೆ ಸಿಗಲು ಸಾಧ್ಯವಿಲ್ಲ. ಕೆಲವೊಂದು ಘಟನೆಗಳಿಂದ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ ಎಂದು ಸಿ.ಪಿ ಐ ಚನ್ನಯ್ಯ ಹಿರೇಮಠ ಹೇಳಿದರು. ತಾಲೂಕಿನ ಎಸ್.ಎಮ್.ಸಿ.ಜೈನ್ ಬಿ.ಇಡಿ ಕಾಲೇಜನಲ್ಲಿ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಸ್ವಾಗತ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಿಂತ ಸರ್ವಶ್ರೇಷ್ಠವಾದದ್ದು.ಇತ್ತಿಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್  ಗೀಳಿನಿಂದ ಹಾಳಾಗುತ್ತಿದ್ದಾರೆ. ಓದುವ ಸಮಯದಲ್ಲಿ ಮೊಬೈಲ್ ನಿಂದ ದೂರವಿರಿ. ತಂತ್ರಜ್ಞಾನಗಳನ್ನು ನಿಮ್ಮ ಜ್ಞಾನಕ್ಕೆ ಅನುಕೂಲವಾಗುವಂತೆ ಉಪಯೋಗಿಸಿಕೊಳ್ಳಿ.ಪುಸ್ತಕಗಳನ್ನು ಪ್ರೀತಿಸಿಬೇಕು‌.ನಮ್ಮಲ್ಲಿರುವ ಶಕ್ತಿ ದೌರ್ಬಲ್ಯವನ್ನು ನಾವು ಅರಿತುಕೊಳ್ಳಬೇಕು ಅಂದಾಗ ಮಾತ್ರ ಸಾಧನೆ ಸುಲಭವಾಗುತ್ತದೆ ಎಂದರು..

ಕಾಲೇಜ್ ಪ್ರಾಂಶುಪಾಲರಾದ ಶಭನಾರವರು  ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆ ಅವಶ್ಯಕ. ಇವೆರಡನ್ನೂ ನಿಮ್ಮ ಸಂಗಾತಿಗಳನ್ನಾಗಿ ಮಾಡಿಕೊಂಡರೆ ಸೋಲು ಸುಳಿಯುದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಉಪನ್ಯಾಸಕರಾದ ಶರಣು ಭಾವಿಕಟ್ಟಿ,ಅಶೋಕ ಪಾಟೀಲ್ ,ಮಾರುತಿ,ಅನ್ನಪೂರ್ಣ ಮುಂಡಾಸ ಇದ್ದರು‌, ಪ್ರ ಶಿಕ್ಷಣಾರ್ಥಿಗಳಾದ  ಪ್ರಭುರಾಯ, ಪ್ರೀತಿ ಕಾರ್ಯಕ್ರಮ ನಿರೂಪಿಸಿದರು.ದೇವರಾಜ ದೇಸಾಯಿ, ಮಾಳಪ್ಪ ಮಡಗಣಿ ಸ್ವಾಗತಿಸಿದರು.ನಾಗೇಶ ವಂದಿಸಿದರು.