ಶಾಲಾ ಪ್ರವೇಶಕ್ಕೆ ಜಾಗೃತಿ ಜಾಥಾ : ಬಡಾವಣೆಯ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು: ಸಗರ ಶಹಾಪುರ:

ಶಹಾಪುರ : ನಗರದ ಹಳೆಪೇಟೆಯ ಬಡಾವಣೆಯ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಿ ಶಾಲೆಯಿಂದ ಹೊರಗುಳಿಯಬಾರದು ಎಂದು ಶಿಕ್ಷಣ ಸಂಸ್ಥೆಯ ಪ್ರಮುಖ ನಾರಾಯಣಾಚಾರ್ಯ ಸಗರ ತಿಳಿಸಿದರು.ನಗರದ ಹಳಪೇಟೆಯ ಜ್ಞಾನಗಂಗೋತ್ರಿ ಶಾಲೆಯ ಮಕ್ಕಳಿಂದ “ಶಾಲೆ ಬಿಟ್ಟ ಮಕ್ಕಳೇ ಶಾಲೆಗೆ ಬನ್ನಿ ಜಾಗೃತಿ” ಅಭಿಯಾನದ ನಿಮಿತ್ಯ ಬಡಾವಣೆಯ ವಿವಿಧ ಭಾಗಗಳಲ್ಲಿ ಪ್ರಭಾತ ಪೇರಿ ಆಯೋಜಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಶಾಲೆಯಿರಲಿ ಮೊದಲು ಮಕ್ಕಳು ಶಾಲೆಗೆ ಪ್ರವೇಶ ಪಡೆಯಬೇಕು, ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದು ಜವಾಬ್ದಾರಿಯುತ ಪ್ರಜೆಯಾಗಬೇಕು ಹಾಗಾದಾಗ ಮಾತ್ರ ಸ್ವಾಸ್ಥö್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಮಗುವಿಗೆ ಶಾಲೆಗೆ ಪ್ರೇರೇಪಿಸಲು ಶಾಲೆಗೆ ಹೊರಟರೆ ಮಗು ಮುಖದಲ್ಲಿ ನಗು, ಅಕ್ಷರಗಳ ಕಾಳು ನುಂಗಿದರೆ ಬಾಳು, ಪಾಟಿ ಚೀಲ ಹಿಡಿ ಶಾಲೆ ಕಡೆಗೆ ನಡಿ ಹೀಗೆ ಹತ್ತು ಹಲವು ಘೋಷಣೆಗಳನ್ನು ಶಾಲಾ ವಿದ್ಯಾರ್ಥಿಗಳು  ಕೂಗಿ ಗಮನಸೆಳೆದರು. ಈ ಸಂದರ್ಭದಲ್ಲಿ  ಸಮಸ್ತ ಶಿಕ್ಷಕವೃಂದದವರು, ಬಡಾವಣೆಯ ಪಾಲಕರು, ಖುಷಿ ಹಂಚಿಕೊಂಡು. ಸ್ಕೌಟ್ ಗೈಡ್ಸ್ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

About The Author