ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಂಗೀತ ಸುಧೆ ಹಿರಿಯರಿಗೆ ಗೌರವ : ಶುಕ್ಲ ಯಜುರ್ವೇದದ ಪ್ರಥಮ ಪ್ರವರ್ತಕ ಶ್ರೀ ಯಾಜ್ಞವಲ್ಕ್ಯ ಮಹರ್ಷಿಗಳು : ಕುಲ್ಕರ್ಣಿ

ಶಹಾಪುರ :  ವೈದಿಕ ಋಷಿಮುನಿಗಳಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳು ಅಗ್ರಗಣ್ಯರಾಗಿದ್ದು, ಇವರು ಶುಕ್ಲ ಯಜುರ್ವೇದದ ಪ್ರಥಮ ಪ್ರವರ್ತಕರು ಹಾಗೆಯೇ, ಭಾರತದಲ್ಲಿ ಹಿಂದೂ ಕಾಯ್ದೆ ಕಾನೂನು ಯಾಜ್ಞವಲ್ಕ್ಯ ಸ್ಮೃತಿಯ ಆಧಾರದಿಂದಲೇ ರಚಿತವಾಗಿದೆ ಇದು ಯಾಜ್ಞವಲ್ಕ್ಯ ಕೊಡುಗೆ ಎಂದು ಸಾಧಕ ಗೌತಮ ಸುಧಾಕರ ಕುಲ್ಕಣ ð ತಿಳಿಸಿದರು.
       ನಗರದ ಹಳೆಪೇಟೆಯ ಪರಿಮಳ ಪ್ರಸಾದ ಕಲ್ಯಾಣ ಮಂಟಪದಲ್ಲಿ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳ ಸೇವಾ ಸಮಿತಿ ವತಿಯಿಂದ ಜಯಂತ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ ಸಂದರ್ಭದಲ್ಲಿ ಯಾಜ್ಞವಲ್ಕ್ಯ  ಮಹರ್ಷಿಗಳ ಕುರಿತು ಪ್ರವಚನವನ್ನು ಪ್ರಸ್ತುತಪಡಿಸಿದ ಅವರು, ತಂದೆ ಮಹರ್ಷಿ ಬ್ರಹ್ಮರಾತರ ಆಜ್ಞೆಯಲ್ಲಿ ಬೆಳೆದು, ವೇದಶಾಸ್ತ್ರ ಪಾರಂಗತರಾದ ಯಾಜ್ಞವಲ್ಕ್ಯರು, ಅಗ್ನಿ ದೇವರನ್ನು ಪ್ರಾಣ ದೇವರನ್ನು ಅನುಸಂಧಾನ ಮಾಡಿ ಒಲಿಸಿಕೊಂಡ ಮಹಿಮಾನ್ವಿತರು, ಅವರ ಗ್ರಂಥಗಳ ಪಾರಾಯಣದಿಂದ ಸರ್ವಶ್ರೇಯಸ್ಸು ಸಾಧ್ಯ. ಧರ್ಮವೆಂಬುದು ದೈನಂದಿನ ಜೀವನದಲ್ಲಿ ನಡೆಯಬೇಕಾದ ದಿನನಿತ್ಯದ ವ್ಯವಹಾರಗಳಿಗೂ ಸಂಬಂಧಿಸಿದ್ದಾಗಿದೆ, ಶುಕ್ಲ ಯಜುರ್ವೇದವನ್ನು ಜಗತ್ತಿನಾದ್ಯಂತ ಪಸರಿಸುವಂತೆ ಮಾಡಿದ ಕೀರ್ತಿ ಮಹರ್ಷಿ ಯಾಜ್ಞವಲ್ಕ್ಯರಿಗೆ ಸಲ್ಲುತ್ತದೆ, ಪ್ರತಿಯೊಬ್ಬರು ಆಧ್ಯಾತ್ಮದ ದಾರಿಯಲ್ಲಿ ಮುನ್ನಡೆಯಬೇಕು, ಸತ್ಯ, ಧರ್ಮ, ತತ್ವದ ಬೆಳಕಿನತ್ತ ಸಾಗುವ ಸಂಕಲ್ಪ ನಮ್ಮದಾಗಲಿ ಎಂದರು.
      ಇದೇ ಸಂದರ್ಭದಲ್ಲಿ ಸಂಗೀತ ವಿದ್ವಾಂಸ ಚಂದ್ರಶೇಖರ ಗೋಗಿ ತಂಡದವರಿಂದ ವಿಶೇಷ ಭಕ್ತಿ ಗೀತೆಗಳು, ಸುಗಮ ಸಂಗೀತ ಕಾರ್ಯಕ್ರಮ ಭಕ್ತಿಯ ವಾತಾವರಣಕ್ಕೆ ಸಾಕ್ಷಿಯಾಗಿತ್ತು. ಪುಟಾಣಿ  ಖುಷಿ ಅಗ್ನಿ ಇವಳ ಭರತನಾಟ್ಯ ಕಣ್ಮನ ಸೆಳೆಯಿತು, ಹತ್ತನೇ ಮತ್ತು ಪಿಯು ದ್ವಿತೀಯ ಭಾಗದಲ್ಲಿ ಹೆಚ್ಚು ಅಂಕ ಪಡೆದ ವಿಪ್ರ ಸಮುದಾಯದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು, ಬೆಳಗ್ಗೆ ಮಹರ್ಷಿಗಳ ಅಷ್ಟೋತ್ತರ, ಸತ್ಯನಾರಾಯಣ ಪೂಜೆ, ಭಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಜರುಗಿದವು.
      ಕಾರ್ಯಕ್ರಮದಲ್ಲಿ ಸೇವಾ ಸಮಿತಿ ಅಧ್ಯಕ್ಷ ಭೀಮಸೇನಾಚಾರ್ಯ ಜೋಶಿ, ಶ್ರೀಕಾಂತ ಸರ್ಕಿಲ್, ಡಾ.ಗಂಗಾಧರ ಸರಾಫ, ಮಲ್ಹರಾವ ಕುಲ್ಕಣ ð, ಪ್ರಾಣೇಶ ಕುಲಕಣ ð, ರಾಘವೇಂದ್ರ ಕುಲ್ಕಣ ð, ಬಸವಂತರಾವ ಕುಲ್ಕಣ ð, ವಾಸುದೇವಾಚಾರ್ಯ ಸಗರ, ಶ್ರೀನಿವಾಸ, ನರಸಿಂಹಾಚಾರ್ಯ ರೊಟ್ಟಿ, ರಾಘವೇಂದ್ರ ಸರ್ನಾಡ, ಧೀರೇಂದ್ರ ಭಕ್ರಿ, ಸತ್ಯನಾರಾಯಣ ದೇಸಾಯಿ, ಸೇರಿದಂತೆ ಸರ್ವ ವಿಪ್ರ ಸಮಾಜದ ಪ್ರಮುಖರು ಇದ್ದರು.
ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು:
ಕಾರ್ತಿಕ.ಆರ್, ಪೂಜಾ.ಬಿ, ಶ್ರೇಯಾ ತಿಳಗೂಳ, ವೈಷ್ಣವಿ.ಪಿ, ಕೃತಿಕಾ ಜೋಶಿ, ಅನುಪ್ರಿಯಾ ಜೋಶಿ, ಮಲ್ಹರಾವ ಕುಲ್ಕರ್ಣಿ.

About The Author