ಶಹಾಪುರ: ಗುರುವಾರ ಹೊನ್ನುಗ್ಗಿ ಶುಕ್ರವಾರ ಕರಿ

ಶಹಾಪುರ : ಕಾರಹುಣ್ಣಿಮೆ ರೈತಾಪಿ ಜನರ ಹಬ್ಬ. ಕರಿ ಹರಿಯುವ ಮುನ್ನ ದಿನ ಹೊನ್ನುಗ್ಗಿ ಮಾಡುವ ಪದ್ಧತಿ ಅನುಸರಿಸುತ್ತಾ ಬಂದಿದ್ದು, ಈ ಬಾರಿ ಕಾರಹುಣ್ಣಿಮೆ ಶುಕ್ರವಾರ ಸಂಜೆ ಒಳಗೊಂಡು ಶನಿವಾರ ಬೆಳಗ್ಗೆ ಮುಗಿಯಲಿದೆ.ಆ ಹಿನ್ನೆಲೆಯಲ್ಲಿ ಗುರುವಾರ ಅಂದರೆ ಜೂನ್ ೨೦ ರಂದು ಹೊನ್ನುಗ್ಗಿ ಆಚರಿಸಲಾಗುತ್ತಿದ್ದು,  ಶುಕ್ರವಾರ ಜೂ. ೨೧ ರ ಸಂಜೆ ೬ ಗಂಟೆಗೆ ನಗರದ ದಿಗ್ಗಿ ಬೇಸ್ ಬಳಿ ಸಾಂಪ್ರಾದಾಯದಂತೆ ಕರಿ ಹರಿಯುವ ಕಾರ್ಯಕ್ರಮ ನಡೆಯಲಿದೆ ಸಾರ್ವಜನಿಕರು ಸಹಕರಿಸಬೇಕು ಉತ್ಸವದಲ್ಲಿ ಸರ್ವರು ಭಾಗವಹಿಸಿ ಸಂಭ್ರಮಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಕಾರಹುಣ್ಣಿಮೆ ಶಹಾಪುರ ನಾಗರಿಕ ಉತ್ಸವ ಸಮಿತಿ ಪತ್ರಿಕೆಗೆ ತಿಳಿಸಿದೆ.

About The Author