ಸಚಿವರ ಗೃಹ ಕಚೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯರಿಂದ ಮುಷ್ಕರ

ಶಹಾಪುರ : ರಾಜ್ಯ ಸರ್ಕಾರ ರಾಜ್ಯದ ಪ್ರಾಥಮಿಕ ಶಾಲೆಯಲ್ಲಿ ಶಿಶು ವಿಹಾರ ಕೇಂದ್ರಗಳನ್ನು ಪ್ರಾರಂಭಿಸುವಂತೆ ಈಗಾಗಲೇ ಸುತ್ತೋಲೆ ಹೊಡೆಸಿದ್ದು ಇದರಿಂದ ರಾಜ್ಯದ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಸಂಚು ರೂಪಿಸುತ್ತಿದೆ.ಕೂಡಲೇ ಸರ್ಕಾರ ಸುತ್ತೋಲೆಯನ್ನು‌ ರದ್ದುಪಡಿಸಬೇಕು. ರಾಜ್ಯದ ಎಲ್ಲಾ ಸಚಿವರ ಮತ್ತು ಶಾಸಕರ  ಕಚೇರಿಗಳ ಮುಂದೆ ಅಂಗನವಾಡಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಇಂದು  ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಶಹಾಪುರದ ಗೃಹ ಕಚೇರಿ ಮುಂದೆ ಮುಷ್ಕರ ಹಮ್ಮಿ
ಕೊಳ್ಳಲಾಗಿದ್ದು, ನೂರಾರು ಅಂಗನವಾಡಿ ಕಾರ್ಯಕರ್ತೆಯರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಾಲೂಕು ಅಂಗನವಾಡಿ ಸಂಘದ ಅಧ್ಯಕ್ಷರಾದ ಬಸಲಿಂಗಮ್ಮ ನಾಟೇಕರ್, ಸಿಐಟಿಯುನ ತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *