ಡಾ : ಯಲ್ಲಪ್ಪ ಪಾಟೀಲ್ ಆಡಳಿತಾಧಿಕಾರಿಯಾದ ಮೇಲೆ ಸರ್ಕಾರಿ ಆಸ್ಪತ್ರೆಯ ಚಿತ್ರಣವೇ ಬದಲು

ಶಹಾಪುರ:ಸರಕಾರದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರೆ ಅಭಿನಂದನೆ ಸಲ್ಲಿಸಿಕೊಂಡಿರುವ ಡಾ.ಯಲ್ಲಪ್ಪ ಪಾಟೀಲ್ ಶಹಪುರದ ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡು ಆರು ತಿಂಗಳ ನಂತರ ಶಹಾಪುರ ಸರ್ಕಾರಿ ಆಸ್ಪತ್ರೆಯ ಚಿತ್ರಣವೇ ಬದಲಾಗಿದೆ.

ಡಾ.ಯಲ್ಲಪ್ಪ ಹುಲ್ಕಲ್ ಪ್ರತಿದಿನ ಸುಮಾರು ಕನಿಷ್ಠವೆಂದರೂ 10 ರಿಂದ 11 ಶಸ್ತ್ರಚಿಕಿತ್ಸೆ ಸರಕಾರಿ ಆಸ್ಪತ್ರೆಯಲ್ಲಿಯೇ ಮಾಡುತ್ತಾರೆ. ‌ ಇದುವರೆಗೂ ಒಂದು ಶಸ್ತ್ರ ಚಿಕಿತ್ಸೆಯೂ ಕೂಡ ಫೇಲ್ ಆಗಿಲ್ಲ. ಇಂದಿನವರೆಗೂ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಬಡವರ ಪಾಲಿನ ದೇವರು ಎಂದು ಜನರಾಡುತ್ತಿದ್ದಾರೆ.

ಡಾ.ಯಲ್ಲಪ್ಪರವರು ಆರೋಗ್ಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಯಾವ ರೀತಿ ಬದಲಾವಣೆ ಆಗಿದೆ ಎನ್ನುವುದನ್ನು ನೋಡಬಹುದು.ಕೇವಲ ಆರು ತಿಂಗಳಲ್ಲಿಯೇ ಆಸ್ಪತ್ರೆಯ ಚಿತ್ರಣವೇ ಬದಲಾಗಿದೆ.

ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಯೊಬ್ಬ ವೈದ್ಯರಿಗೆ ಓಪಿಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಗರ್ಬಿಣಿ ಸ್ತ್ರೀಯರ ಕೋಣೆಗಳನ್ನು, ಶುದ್ಧ ಕುಡಿಯುವ ನೀರನ್ನು ಜೊತೆಗೆ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಆಸ್ಪತ್ರೆಯ ಒಳಗೆ ಮತ್ತು ಹೊರಗಡೆ ಸ್ವಚ್ಛಂದವಾದ ಸುಂದರವಾದ ಉದ್ಯಾನವನದ ವ್ಯವಸ್ಥೆ ಮಾಡಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಪ್ರತಿ ವೈದ್ಯರು ಪ್ರತಿಯೊಬ್ಬ ರೋಗಿಗೂ ಸ್ಪಂದಿಸುವ ವ್ಯವಸ್ಥೆ ಆಸ್ಪತ್ರೆಯಲ್ಲಿದೆ.

ಡಾ.ಯಲ್ಲಪ್ಪ ಪಾಟೀಲ್ ಪ್ರತಿ ದಿನ ಶಸ್ತ್ರಚಿಕಿತ್ಸೆಯ ಜೊತೆಗೆ ಆಸ್ಪತ್ರೆಯ ಬರುವ ರೋಗಿಗಳನ್ನು ನೋಡುತ್ತಿದ್ದಾರೆ. ಇದರ ಜೊತೆ ಆಡಳಿತದ ವ್ಯವಸ್ಥೆಗೆ ಒತ್ತು ಕೊಡುತ್ತಿದ್ದಾರೆ. ಇಂಥವರನ್ನು ಯಾವುದೇ ಸಂದರ್ಭದಲ್ಲಿ ಆಡಳಿತಾಧಿಕಾರಿಯಿಂದ ಬದಲಾವಣೆ ಮಾಡಬಾರದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಹಿರಿತನಕ್ಕೆ ಆದ್ಯತೆ ಕೊಡಬೇಕು ನಿಜ. ಕಿರಿಯರಿಗೆ ಆದ್ಯತೆ ಕೊಡುವುದರಿಂದ ಆಸ್ಪತ್ರೆಯಲ್ಲಿ ಆದ ಬದಲಾವಣೆಗಳನ್ನು ಉನ್ನತ ಅಧಿಕಾರಿಗಳು ಗಮನಿಸಬೇಕು.

About The Author