ಪ್ರಜ್ವಲ್ ಅಶ್ಲೀಲತೆ ಮುಚ್ಚಲು ಮಾಜಿ  ಎಚ್ಡಿಕೆ ಹುನ್ನಾರ ಕಟ್ಟಿಮನಿ ಆರೋಪ!

ಶಹಾಪುರ : ಅಶ್ಲೀಲ ವಿಡಿಯೋಗಳಿಂದ ರಾಜ್ಯಾದ್ಯಾಂತ ಮನೆ ಮಾತಾದ ಪ್ರಜ್ವಲ್ ರೇವಣ್ಣನವರನ್ನು ಪಾರು ಮಾಡಲು ಮಾಜಿ ಸಿಎಮ್ ಕುಮಾರಸ್ವಾಮಿಯವರು ಉಪ ಮುಖ್ಯಮಂತ್ರಿ ಡಿಕೆ ಶಿವುಕುಮಾರವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಯಾದಗಿರಿ ಜಿಲ್ಲಾ ಎಸ್ಸಿ ಘಟಕದ ಮಾಧ್ಯಮ ವಕ್ತಾರರಾದ ಚಂದ್ರಶೇಖರ ಕಟ್ಟಿಮನಿ ಆರೋಪ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಈಗಾಗಲೆ ಪ್ರಜ್ವಲ್ ರೇವಣ್ಣ ನವರು ಬಂಧನದಲ್ಲಿದ್ದು ರಾಜ್ಯ ಸರ್ಕಾರ ಸೂಕ್ತ ತನಿಖೆ ಕ್ರಮ ಕೈಗೊಂಡಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎನ್ನುವ ಮಾತಿನಂತೆ ಆಶ್ಲೀಲ ವಿಡಿಯೋಗಳ ತನಿಖೆಯಿಂದ ರಾಜ್ಯದ ಜನತೆಗ ಸತ್ಯ ಗೊತ್ತಾಗುತ್ತದೆ.ಇದನ್ನು ಮರೆಮಾಚಲು ಎಚ್ಡಿಕೆಯವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಆರೋಪಿ ಸ್ಥಾನದಲ್ಲಿರುವಂತೆ ಮಾತನಾಡುತ್ತಿದ್ದಾರೆ. ಹೆಣ್ಣು ದೇವತೆಯಂದು ಪೂಜಿಸುವ ಈ ನೆಲದಲ್ಲಿ ಹಣ ಮತ್ತು ಅಧಿಕಾರದ ವ್ಯಾಮೋಹದಲ್ಲಿ ಹೆಣ್ಣುಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿರುವದು ಅಸಹ್ಯದ ಸಂಗತಿಯಾಗಿದೆ.

ಕುಟುಂಬದ ಮಗನೊಬ್ಬ ಈ ಕೃತ್ಯ ಮಾಡಿದ್ದು ಸಮರ್ಥನೆ ಮಾಡಿಕೊಳ್ಳುವ ಹುನ್ನಾರದಲ್ಲಿ ಎಚ್ಡಿಕೆ ಮಾಧ್ಯಮದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಸೂಕ್ತ ತನಿಖೆಗೆ ಅವಕಾಶ ನೀಡದೆ ಹೋದಲ್ಲಿ ಕಾಂಗ್ರೆಸ್ ಮಹಿಳಾ ಘಟಕ ರಾಜ್ಯಾದ್ಯಾಂತ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಕಟ್ಟಿಮನಿಯವರು ತಿಳಿಸಿದರು. ಮಾಜಿ ಸಿಎಮ್ ಎಚ್ಡಿಕೆಯವರ ಹೇಳಿಕೆಯಲ್ಲಿ ಮಿತಿ ಇಟ್ಟುಕೊಂಡು ಸಹೋದರನ ಮಗ ಮಾಡಿದ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *