ಮಹಾಶೈವ ಧರ್ಮಪೀಠದಲ್ಲಿ 92 ನೆಯ ‘ ಶಿವೋಪಶಮನ ಕಾರ್ಯ’

ರಾಯಚೂರು:(ಗಬ್ಬೂರು ಮೇ ೧೨,೨೦೨೪) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಮೇ 12 ರ ಆದಿತ್ಯವಾರದಂದು 92 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರನ ಸನ್ನಿಧಿಯನ್ನರಸಿ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ವಿಶ್ವನಿಯಾಮಕ ಪರಶಿವನು ಮಹಾಶೈವ ಧರ್ಮಪೀಠದಲ್ಲಿ ಲೋಕೋದ್ಧಾರ ಲೀಲೆಯನ್ನಾಡುತ್ತ ಭಕ್ತರ ಸರ್ವವಿಧ ಸಂಕಷ್ಟಗಳನ್ನು ಪರಿಹರಿಸುತ್ತ ಭವರೋಗವೈದ್ಯನೆಂದು ಬಿರುದುಗೊಂಡಿರುವುದರಿಂದ ಅಸಾಧ್ಯರೋಗದಿಂದ ಬಳಲುತ್ತಿರುವ ಭಕ್ತರುಗಳು ರಾಜ್ಯ ಹೊರರಾಜ್ಯಗಳಿಂದಲೂ ಬಹುಸಂಖ್ಯೆಯಲ್ಲಿ ಮಹಾಶೈವ ಧರ್ಮಪೀಠಕ್ಕೆ ಆಗಮಿಸುತ್ತಿದ್ದಾರೆ.ಮದುವೆಯಾಗದೆ ಪರಿತಪಿಸುತ್ತಿರುವ ತರುಣ ತರುಣಿಯರಿಗೆ ವಿಶ್ವೇಶ್ವರ ಶಿವನು ತನ್ನ ಸನ್ನಿಧಿಗೆ ಬಂದ ಕೆಲವೇ ವಾರಗಳಲ್ಲಿ ವಿವಾಹಯೋಗವನ್ನು ಕರುಣಿಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಕಂಕಣಭಾಗ್ಯವನ್ನರಸಿ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಈದಿನದ ಶಿವೋಪಶಮನದಲ್ಲಿ ಕೂಡ ವಿವಾಹಭಾಗ್ಯಬೇಡಿ ಬಂದ ಭಕ್ತರ ಸಂಖ್ಯೆಯೇ ಅಧಿಕವಾಗಿತ್ತು.

ರಘುನಾಥನಹಳ್ಳಿಯ ವೀರಭದ್ರಯ್ಯಸ್ವಾಮಿ ಚಂದ್ರಗಿರಿಮಠ ಅವರ ಮಗನಾದ ಕುಮಾರಸ್ವಾಮಿ ಮೊನ್ನೆ ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಉತ್ತೀರ್ಣನಾಗಿದ್ದರಿಂದ ಇಂದು ಚಂದ್ರಗಿರಿಮಠದ ಕುಟುಂಬವು ವಿಶ್ವೇಶ್ವರನ ಭಕ್ತರುಗಳಿಗೆ ಲಾಡಿನ ಸಿಹಿಯನ್ನಿತ್ತು ಸಂಭ್ರಮಿಸಿದರು.ಪೀಠಾಧ್ಯಕ್ಷರು ಕುಮಾರಸ್ವಾಮಿಗೆ ಯಶಸ್ಸು ಹಾಗೂ ಉತ್ತಮ ಭವಿಷ್ಯವನ್ನು ಹಾರೈಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮೂಲಕಾರ್ಯಕರ್ತ ಈರಪ್ಪ ಹಿಂದುಪುರ,ದಾಸೋಹ ಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಪತ್ರಕರ್ತರುಗಳಾದ ಏಳುಬಾವೆಪ್ಪಗೌಡ,ರಮೇಶ ಖಾನಾಪುರ,ಸಂಶೋಧಕ ಡಾ.ಚನ್ನಬಸ್ಸಪ್ಪ ಮಲ್ಕಂದಿನ್ನಿ,ಗಬ್ಬೂರಿನ ಐತಿಹಾಸಿಕ ಸ್ಥಳಗಳ ಮಾಹಿತಿನೀಡುವ ಮಂಜುನಾಥ ಕರಿಗಾರ,ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಸಿದ್ರಾಮಯ್ಯಸ್ವಾಮಿ ಹಳ್ಳಿ,ಯಲ್ಲಪ್ಪ ಕರಿಗಾರ,ಬಸವರಾಜ ಹದ್ದಿನಾಳ, ಖಾನಾಪುರದ ಪರಶುರಾಮ ಜಡೇರ,ಬೂದೆಪ್ಪ ಖಾನಾಪುರ,ಹನುಮೇಶ,ಬೂದೆಪ್ಪ ಬಳ್ಳಾರಿ, ಬಸವರಾಜ ಗುರುಪಾದಪ್ಪ ಕರಿಗಾರ,ಪರಮೇಶಪ್ಪ ಮಸೀದಪುರ,ಆನಂದ ಬಾಡದ,ಮೌನೇಶ ಬಳ್ಳಾರಿ ಮತ್ತು ಶಿವಕುಮಾರ ವಸ್ತಾರ ಮೊದಲಾದವರು ಉಪಸ್ಥಿತರಿದ್ದರು.

About The Author