ಗಬ್ಬೂರಿನ ಇತಿಹಾಸ ; ಮುಂದುವರೆದ ಗಬ್ಬೂರಿನ ಕ್ಷೇತ್ರಕಾರ್ಯ

ಗಬ್ಬೂರಿನ ಇತಿಹಾಸ ; ಮುಂದುವರೆದ ಗಬ್ಬೂರಿನ ಕ್ಷೇತ್ರಕಾರ್ಯ

ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಸಂಕಲ್ಪ ಹಾಗೂ ಸದಿಚ್ಛೆಯಂತೆ ಗಬ್ಬೂರಿನ ಇತಿಹಾಸ ರಚನೆಯ ಕಾರ್ಯ ಭರದಿಂದ ನಡೆದಿದ್ದು ಗಬ್ಬೂರ ಇತಿಹಾಸವನ್ನು ರಚಿಸಲಿರುವ ರಾಯಚೂರು ಜಿಲ್ಲೆಯ ಖ್ಯಾತ ಇತಿಹಾಸಕಾರ,ಶಾಸನತಜ್ಞ ಮತ್ತು ಸಂಶೋಧಕ ಡಾ.ಚನ್ನಬಸವ ಮಲ್ಕಂದಿನ್ನಿ ಅವರ ನೇತೃತ್ವದ ತಂಡವು ಮೇ 11 ಮತ್ತು 12 ರ ಎರಡು ದಿನಗಳ ಕಾಲ ಗಬ್ಬೂರಿನ ಐತಿಹಾಸಿಕ ಸ್ಥಳಗಳು ಹಾಗೂ ಸ್ಮಾರಕಗಳ ಸ್ಥಳಸಮೀಕ್ಷೆಯ ಎರಡನೇ ಹಂತದ ಕ್ಷೇತ್ರಕಾರ್ಯವನ್ನು ಕೈಗೊಂಡಿತು.

ಡಾ.ಚನ್ನಬಸವ ಮಲ್ಕಂದಿನ್ನಿಯವರು ಗಬ್ಬೂರಿನ ಪರಿಪೂರ್ಣ ಇತಿಹಾಸ ರಚನೆಗೆ ಅವಶ್ಯಕವಿರುವ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿದರು.ಗಬ್ಬೂರಿನ ಪುರಾತನ ದೇವಸ್ಥಾನಗಳು,ಪುಷ್ಕರಣಿಗಳು,ವೀರಗಲ್ಲುಗಳು,ಸ್ಮಾರಕಗಳನ್ನು ಪರಿವೀಕ್ಷಿಸಿ ಉಪಲಬ್ಧವಿರುವ ಎಲ್ಲ ಶಾಸನಗಳನ್ನು ಪಡಿಯಚ್ಚುಮಾಡಿ ಓದಿದರು.

ಮಹಾಶೈವ ಧರ್ಮಪೀಠವು ಗಬ್ಬೂರಿನ ಇತಿಹಾಸವನ್ನು ಪ್ರಕಟಿಸಲಿದ್ದು ಗಬ್ಬೂರಿನ ಐತಿಹಾಸಿಕ ಮಹತ್ವವನ್ನು ಹೊರಜಗತ್ತಿಗೆ ಸಾರುವುದಲ್ಲದೆ ಗ್ರಾಮದ ಮುಂಬರುವ ಪೀಳಿಗೆಗೆ ಊರ ಭವ್ಯ ಇತಿಹಾಸದ ಪರಿಚಯ ಮಾಡಿಕೊಡುವ ಉದ್ದೇಶದಿಂದ ಗಬ್ಬೂರಿನ ಇತಿಹಾಸ ರಚಿಸಲಾಗುತ್ತಿದೆ.ಹಂಪೆ,ಮೈಸೂರು,ಬೆಂಗಳೂರು,ಶ್ರೀರಂಗಪಟ್ಟಣಗಳಂತಹ ಐತಿಹಾಸಿಕ ಸ್ಥಳಗಳಂತೆಯೇ ಕಲ್ಯಾಣಕರ್ನಾಟಕದ ಏಕಗ್ರಾಮ ಇತಿಹಾಸವನ್ನು ಹೊರತರಲಿರುವ ಹಿರಿಮೆಗೆ ಗಬ್ಬೂರು ಪಾತ್ರವಾಗಲಿದೆ.

ಡಾ.ಚನ್ನಬಸ್ಸಪ್ಪ ಮಲ್ಕಂದಿನ್ನಿಯವರೊಂದಿಗೆ ಗಬ್ಬೂರಿನ ಐತಿಹಾಸಿಕ ಮಹತ್ವವನ್ನು ಹೊರತರುವಲ್ಲಿ ಸಹಕರಿಸಿದ್ದಾರೆ ಗಬ್ಬೂರು ಗ್ರಾಮಪಂಚಾಯತಿಯ ಕರವಸೂಲಿಗಾರ ಮಂಜುನಾಥ ಕರಿಗಾರ,ಪತ್ರಕರ್ತರುಗಳಾದ ಏಳುಬಾವೆಪ್ಪಗೌಡ,ರಮೇಶ ಖಾನಾಪುರ ಮತ್ತು ಗುರುಬಸವ ಹುರಕಡ್ಲಿ ಮೊದಲಾದವರು.ಚಿತ್ರದಲ್ಲಿ ಡಾ.ಚನ್ನಬಸವ ಮಲ್ಕಂದಿನ್ನಿಯವರೊಂದಿಗೆ ಮಂಜುನಾಥ ಕರಿಗಾರ,ಗುರುಬಸವ ಹುರಕಡ್ಲಿ,ರಮೇಶ ಖಾನಾಪುರ,ಚನ್ನಬಸವ ಚಿಕ್ಕಮಠ,ವೆಂಕಟೇಶ ಉಪ್ಪಾರ,ನರಸಿಂಹ ನೀಲಗಲ್ ಅವರುಗಳನ್ನು ಕಾಣಬಹುದು.ಗಬ್ಬೂರಿನ ಗ್ರಾಮಸ್ಥರು ಕ್ಷೇತ್ರಕಾರ್ಯ ತಂಡಕ್ಕೆ ಅಗತ್ಯ ಮಾಹಿತಿ ನೀಡಿ ಸಹಕರಿಸಿದ್ದಾರೆ.ಊರಿನ ಭವ್ಯೋಜ್ವಲ ಇತಿಹಾಸವನ್ನು ಓದುವ,ಕೇಳುವ ಕುತೂಹಲ ಗಬ್ಬೂರ ಗ್ರಾಮಸ್ಥರಲ್ಲಿದೆ.

About The Author