ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಾಲನೆ | ಕಾಂಗ್ರೆಸ್ ಅಪಪ್ರಚಾರ 

ಶಹಾಪುರ : ಲೋಕಸಭಾ ಚುನಾವಣೆ ನಿಮಿತ್ತ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಅದನ್ನು ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಪಾಲಿಸಲಾಗುತ್ತಿದ ಶಹಾಪೂರ ಕ್ಷೇತ್ರದಲ್ಲಿ ಕಾಂಗ್ರೆಸ್ನವರು ಸುಳ್ಳು ಹೇಳುತ್ತಾ,ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಸುಳ್ಳು ಹೇಳಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳು ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಅಮಿನ್ ರೆಡ್ಡಿ ಪಾಟೀಲ್ ಯಾಳಗಿ ತಿಳಿಸಿದರು.ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್ ಮುಖಂಡರಾದ ಮಾಲ್ಕರೆಡ್ಡಿ ಅವರು ಬಿಜೆಪಿ ಅಭ್ಯರ್ಥಿ ಅಂಬರೇಶ ನಾಯಕ್ ಪರ ಪ್ರಚಾರ ಕೈಗೊಂಡಿದ್ದಾರೆ. ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ ಅವರನ್ನು ಈಗಾಗಲೇ ಭೇಟಿ ಮಾಡಿದ್ದು ಅವರು ಕೂಡ ಮೈತ್ರಿ ಪಾಲನೆ ಮಾಡುವುದಾಗಿ ತಿಳಿಸಿದ್ದಾರೆ.ಇದರಲ್ಲಿ ಯಾವುದೇ ಗೊಂದಲವಿಲ್ಲ.ಗುರುಪಾಟೀಲ್ ಶಿರವಾಳ ಆದಷ್ಟು ಬೇಗ ಜೆಡಿಎಸ್ ಕಾರ್ಯಕರ್ತರಿಗೆ ಸಂದೇಶ ತಿಳಿಸಲಿದ್ದಾರೆ ಎಂದು ತಿಳಿಸಿದರು.

ಶಾಸಕರು ಹಾಗೂ ಚುನಾವಣಾ ಉಸ್ತುವಾರಿಗಳಾದ ಸುರೇಶಗೌಡ ಮಾತನಾಡಿ,ಇನ್ನು 14 ಕ್ಷೇತ್ರಗಳಿಗೆ ಮೇ 7ರಂದು ಚುನಾವಣೆ ನಡೆಯಲಿದ್ದು,ಕಳೆದ‌ ಲೋಕಸಭಾ ಚುನಾವಣೆಯಲ್ಲಿ ಶಹಪೂರ ಕ್ಷೇತ್ರದಲ್ಲಿ 19000 ಲೀಡ್ ಕೊಟ್ಟಿದ್ದು, ಈ ಸಾರಿ 30,000 ಲೀಡ್ ಕೊಡಬೇಕೆಂದು ತಿಳಿಸಿದರು. ಮಾಜಿ ಶಾಸಕರಾದ ಗುರುಪಾಟೀಲ್ ರವರ ಜೊತೆ ಮಾತನಾಡಿದ್ದು ಸಾಯಂಕಾಲ ಪಕ್ಷದ ಮುಖಂಡರ ಜೊತೆಗೂಡಿ ಚರ್ಚಿಸುವುದಾಗಿ ತಿಳಿಸಿದರು.

ಬಿಜೆಪಿ ಹಿರಿಯ ಮುಖಂಡರಾದ ಡಾ. ಚಂದ್ರಶೇಖರ ಸುಬೇದಾರ್, ಬಸವರಾಜ ವಿಭೂತಿಹಳ್ಳಿ, ಡಾ.ಶಿವರಾಜ ದೇಶಮುಖ್, ಗುರುಕಾಮ,ರಾಜುಗೌಡ ಉಕ್ಕಿನಾಳ, ರಾಜಶೇಖರ ಗೂಗಲ್,ವೆಂಕಟೇಶ,ದೇವೆಂದ್ರಪ್ಪ ಕೊನೇರ್,ಬಾಲಕೃಷ್ಣ, ಮಲ್ಲಿಕಾರ್ಜುನ ಕಂದಕೂರ್,ರಾಘವೇಂದ್ರ ಯಕ್ಸ್ಚಿಂತಿ, ಜಿಲ್ಲಾ ಕೋಶಾಧ್ಯಕ್ಷರಾದ ರಮೇಶ್ ಕೊಲ್ಕರ್,ಯಲ್ಲಪ್ಪ ನಾಯಕ್,ಹನುಮಂತ ಸೇರಿದಂತೆ ಇತರರು ಇದ್ದರು.

ಎಚ್ ಡಿ ರೇವಣ್ಣನವರ ಪುತ್ರ ಮತ್ತು ಸಂಸದರಾದ ಪ್ರಜ್ವಲ್ ರೇವಣ್ಣನವರ ಪೇನ್ ಡ್ರೈವ್ ಕೇಸ್ ಅನ್ನು ರಾಜ್ಯ ಸರ್ಕಾರ ಈಗಾಗಲೇ ಎಸ್ಐಟಿಗೆ ಕೊಟ್ಟಿದೆ. ಸತ್ಯ ಸತ್ಯತೆ ಆದಷ್ಟು ಬೇಗನೆ ಹೊರಬರಲಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕೂಡ ಕಾನೂನಿಗೆ ಶರಣಾಗಲೆಬೇಕು. ಶಿಕ್ಷೆ ಅನುಭವಿಸಲೇಬೇಕು. ಬಿಜೆಪಿ ಪಕ್ಷ ಮಹಿಳೆಯರ ಪರವಿದೆ.

ಸುರೇಶಗೌಡ hk
ಚುನಾವಣಾ ಉಸ್ತುವಾರಿಗಳು ಮತ್ತು ಶಾಸಕರು.

About The Author