ಯಕ್ಷಿಂತಿ ಶಾಲೆ ಮೇಲ್ದರ್ಜೆಗೇರಿಸಲು ಮನವಿ 

ವಡಗೇರ : ತಾಲೂಕಿನ ಯಕ್ಷಿಂತಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಯಕ್ಷಿಂತಿ ಗ್ರಾಮಸ್ತರಿಂದು ಮನವಿ ಸಲ್ಲಿಸಿದರು. ಗ್ರಾಮದ ಜನಸಂಖ್ಯೆ ಹದಿನೈದು ನೂರಕ್ಕೂ ಹೆಚ್ಚು ಇದ್ದು ಈಗಿರುವ ಶಾಲೆಯಲ್ಲಿ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದು, ಮುಂದಿನ ಶೈಕ್ಷಣಿಕ ಅನೂಕೂಲಕ್ಕಾಗಿ ಹಿಂದುಳಿದ ಗ್ರಾಮವಾದ ನಮಗೆ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಒದಗಿಸಿ ನಮ್ಮೂರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುವು ಮಾಡಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಹಣಮಂತ ದೊಡ್ಮನಿ, ಎ.ಎಲ್. ದೇಸಾಯಿ, ನಿಂಗಣ್ಣ ಹೊಸಮನಿ, ಸಿದ್ದಣ್ಣ ಪೂಜಾರಿ, ಮಲ್ಲಿಕಾರ್ಜುನ ಮಸರಕಲ್, ಸಿದ್ದಣ್ಣ ಹುಬ್ಬಳ್ಳಿ, ನಿಂಗಣ್ಣ ಕರಡಿ, ದೇವರಾಜ ಸಗರ, ವೆಂಕಟೇಶ ಜಟ್ಟಯ್ಯ, ಹಣಮಂತ ಹಟ್ಟಿ, ಬಾಲಪ್ಪ ಪೂಜಾರಿ ಇದ್ದರು.