ಜೆಡಿಎಸ್ ದಿಂದ ಬಿಜೆಪಿ ಸೇರ್ಪಡೆ

ಶಹಾಪುರ : 2024 ರ ಲೋಕಸಭಾ ಚುನಾವಣೆ ಪ್ರಯುಕ್ತ  ಶಹಪುರ ಕ್ಷೇತ್ರದ ಪ್ರಮುಖ ಕಾರ್ಯಕರ್ತರ ಚಹಾ ಕೂಟವನ್ನು ಯಾದಗಿರಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಧ ಅಮೀನರೆಡ್ಡಿ ಯಾಳಗಿ ಅವರ ನಿವಾಸದಲ್ಲಿ ಏರ್ಪಡಿಸಲಾಗಿತ್ತು.   ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕರಾದ ಬಿ. ವೈ. ವಿಜೇಯೇಂದ್ರ ಅವರು ಆಗಮಿಸಿದ್ದರು.ಈ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿ ತತ್ವ, ಸಿದ್ಧಾಂತವನ್ನು ಮೆಚ್ಚಿ, ನರೇಂದ್ರ ಮೋದಿ ಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಶಿರವಾಳ ಗ್ರಾಮದ ಪ್ರಭಾವಿ ಮುಖಂಡರಾದ ವರದರಾಜ್ ಕುಲಕರ್ಣಿ, ಸಿದ್ದಪ್ಪಗೌಡ ಪೊಲೀಸ್ ಪಾಟೀಲ್,ಮಲ್ಲಿಕಾರ್ಜುನ ಬೋಳಾರಿ,ದೇವಪ್ಪ ಸ್ವಾಮಿ ಪೂಜಾರಿ, ಬಂದುಸಾಬ್ ಯಲಗೋಡ ಇತರರು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಬಿಜೆಪಿಯ‌ ಹಿರಿಯ‌ ಮುಖಂಡರು ಜಿಲ್ಲಾ ಕೋಶಾಧ್ಯಕ್ಷರಾದ ರಮೇಶ್ ಕೊಲ್ಕರ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *