ಮಹಾಶೈವ ಧರ್ಮಪೀಠದಲ್ಲಿ 90 ನೆಯ ‘ ಶಿವೋಪಶಮನ ಕಾರ್ಯ’

ಗಬ್ಬೂರು ಎಪ್ರಿಲ್ 28,2024 : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಎಪ್ರಿಲ್ 28 ರ ಆದಿತ್ಯವಾರದಂದು 90 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರನ ಸನ್ನಿಧಿಯನ್ನರಸಿ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ತನ್ನನ್ನು ನಂಬಿದ ಭಕ್ತರು ಎಲ್ಲಿಯೇ ಕರೆಯಲಿ ಅಲ್ಲಿ ಓಗೊಟ್ಟು ಭಕ್ತರನ್ನು ಉದ್ಧರಿಸುವ ಮೂಲಕ ವಿಶ್ವೇಶ್ವರ ಶಿವನು ‘ಮಾತನಾಡುವ ಮಹಾದೇವ’ ಎಂದು ಬಿರುದುಗೊಂಡಿದ್ದಾನೆ.ಇಂದಿನ ಶಿವೋಪಶಮನವು ವಿಶ್ವೇಶ್ವರ ಶಿವನ ಭಕ್ತವತ್ಸಲ ಲೀಲೆಗೆ ಸಾಕ್ಷಿಯಾಯಿತು.ಗಬ್ಬೂರಿನ ಪಕ್ಕದ ಖಾನಾಪುರ ಗ್ರಾಮದ ಶ್ರೀಮತಿ ರತ್ನಮ್ಮ ಪ್ರಕಾಶ ಅವರಿಗೆ ಇತ್ತೀಚೆಗೆ ತೀವ್ರ ಎದೆನೋವು ಕಾಣಿಸಿಕೊಂಡು ಗಬ್ಬೂರಿನ ವೈದ್ಯರಲ್ಲಿ ತೋರಿಸಿದಾಗ ‘ ಸೀರಿಯಸ್ ಇದೆ.ರಾಯಚೂರಿಗೆ‌ ಕರೆದುಕೊಂಡು ಹೋಗಿ’ ಎಂದು ವೈದ್ಯರು ಸೂಚಿಸಿದ್ದರಂತೆ.ಭಯ- ಆತಂಕಕ್ಕೀಡಾದ ರತ್ನಮ್ಮ ರಾಯಚೂರು ಮಾರ್ಗದಲ್ಲಿ ವಿಶ್ವೇಶ್ವರ ಶಿವನನ್ನು ಸ್ಮರಿಸಿ ‘ ನನಗೆ ಏನೂ ಆಗದಂತೆ ಕಾಪಾಡು ತಂದೆ.ನಿನ್ನ ಮಠದಲ್ಲಿ ದಾಸೋಹ ಮಾಡಿಸುವೆ ‘ಅಂತ ಬೇಡಿಕೊಂಡಿದ್ದರಂತೆ.ಅವರು ರಾಯಚೂರು ತಲುಪುವದರೊಳಗಾಗಿ ಪವಾಡ ಸದೃಶ ರೀತಿಯಲ್ಲಿ ಎದೆನೋವು ಕಡಿಮೆಯಾಗಿದ್ದಲ್ಲದೆ ರಾಯಚೂರಿನಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ‘ ಏನೂ ಸಮಸ್ಯೆ ಇಲ್ಲ.ಆರಾಮ ಇದ್ದೀರಿ’ ಎಂದು ಹೇಳಿದರಂತೆ.ಸಂತೋಷದಲ್ಲಿ ಇಂದು ರತ್ನಮ್ಮ ಪ್ರಕಾಶ ದಂಪತಿಗಳು ವಿಶ್ವೇಶ್ವರನ ಸನ್ನಿಧಿಯಲ್ಲಿ ದಾಸೋಹ ಸೇವೆ ಸಲ್ಲಿಸಿದರು.ಪೀಠಾಧ್ಯಕ್ಷರು ಶ್ರೀಮತಿ ರತ್ನಮ್ಮ ಪ್ರಕಾಶ ದಂಪತಿಗಳನ್ನು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮೂಲ ಕಾರ್ಯಕರ್ತ ಗೋಪಾಲ ಮಸೀದಪುರ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಸಿದ್ರಾಮಯ್ಯಸ್ವಾಮಿ ಹಳ್ಳಿ,ವೀರಭದ್ರಯ್ಯಸ್ವಾಮಿ,ಯಲ್ಲಪ್ಪ ಕರಿಗಾರ, ಪತ್ರಕರ್ತ ಏಳುಬಾವೆಪ್ಪ ಗೌಡ,ರಂಗನಾಥ ಮಸೀದಪುರ, ಸಿದ್ದಣ್ಣ ಪೂಜಾರಿ ಚಾಗಬಾವಿ,ನಾಗರಾಜ ಕರಿಗಾರ,ಯಲ್ಲೋಜಿ,ಬೂದೆಪ್ಪ ಖಾನಾಪುರ,ಬಸವಲಿಂಗ ಪೂಜಾರಿ ಅಮರಾಪುರ, ವೆಂಕಟೇಶ,ಶಿವಕುಮಾರ ವಸ್ತಾರ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author