ಅಧಿಕಾರಿಗಳ ನಿರ್ಲಕ್ಷ ನೀರಿಲ್ಲದೆ ಒಣಗಿ ನಿಂತ ಗಿಡಮರಗಳು

ವರದಿ : ಬಸವರಾಜ ಕರೇಗಾರ 

ಶಹಾಪುರ : ಶಹಪುರ ವಡಗೇರ ತಾಲೂಕಿನಾದ್ಯಂತ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಗಿಡ ಮರಗಳು ಒಣಗಿ ಹೋಗುತ್ತಿವೆ. ಪ್ರಸ್ತುತ ವರ್ಷದಲ್ಲಿ ಬಿಸಿಲಿನ ಪ್ರಮಾಣ ಯಾದಗಿರಿ ಜಿಲ್ಲೆಯಲ್ಲಿ ಅಧಿಕವಾಗಿದ್ದು, ಬಿಸಿಲಿನ ತಾಪಮಾನದಿಂದ ಗಿಡ-ಮರಗಳು ಸುಟ್ಟು ಕರಕಲಾಗಿವೆ. ಮಳೆಯ ಪ್ರಮಾಣ ಈ ವರ್ಷ ಕಡಿಮೆಯಾಗಿರುವುದರಿಂದ ಕಾರ್ಮಿಕರು ಗೂಳೆ ಹೋಗುವುದನ್ನು ತಪ್ಪಿಸಲು ಸರಕಾರ ನರೇಗಾ ಕಾಮಗಾರಿಗಳನ್ನು ಹೆಚ್ಚುವರಿಯಾಗಿ ಹಮ್ಮಿಕೊಂಡಿದ್ದು, ಅದರಲ್ಲಿ ಅರಣ್ಯ ಇಲಾಖಾವತಿಯಿಂದ ರಸ್ತೆಯ ಪಕ್ಕದಲ್ಲಿ, ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ, ಗ್ರಾಮೀಣ ಪ್ರದೇಶದ ಸರ್ಕಾರಿ ಸ್ಥಳಗಳಲ್ಲಿ ಗಿಡ-ಮರಗಳನ್ನು ನೆಡಲು ಕಾಮಗಾರಿಗಳನ್ನು ರೂಪಿಸಿ ಕಾರ್ಮಿಕರಿಗೆ ಕೆಲಸ ಸೃಷ್ಟಿಸಿ ಗಿಡ ಮರಗಳು ನೆಡುವುದರಿಂದ ತಂಪಾದ ಮತ್ತು ಹಸಿರಾದ ವಾತಾವರಣ ವನ್ನು ಸೃಷ್ಟಿಸಲು ಸರಕಾರ ನರೇಗಾದಡಿಯಲ್ಲಿ ಕಾಮಗಾರಿಗಳನ್ನು ಜಾರಿಗೆ ತಂದಿದೆ.

ರಸ್ತೆಯ ಪಕ್ಕದಲ್ಲಿರುವ ಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಂರಕ್ಷಿಸದೆ ಗಿಡಗಳು ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಸಂಪೂರ್ಣವಾಗಿ ಸುಟ್ಟು ಗಿಡಗಳೇ ಇಲ್ಲದಂತಾಗಿದೆ.ವಡಗೇರಾ ತಾಲೂಕಿನ ಕೋನಳ್ಳಿ,ಬೀರನಕಲ್ ತಾಂಡಾದ ಅರಣ್ಯ ಇಲಾಖೆಯವರು ಕಾಯ್ದಿಟ್ಟ ಪ್ರದೇಶದಲ್ಲಿ ನೆಟ್ಟ ಗಿಡಗಳೆ ಸಾಕ್ಷಿ. ಇಲ್ಲಿನ ಗಿಡಗಳು ನೀರಿಲ್ಲದೆ ಸಂಪೂರ್ಣವಾಗಿ ಬಾಡಿದ್ದು ಗಿಡಗಳೆ ಇಲ್ಲದಂತಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಮರಗಳು ಬಾಡಿಹೋದ ಪರಿಣಾಮ ಪಕ್ಷಿ ಸಂಕುಲವು ನೀರಿಲ್ಲದೆ ಪರದಾಡುವಂತಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.

ವಡಗೇರಾ ತಾಲೂಕಿನ ಕೋನಳ್ಳಿ,ಬೀರನಕಲ್ ತಾಂಡಾದ ಅರಣ್ಯ ಇಲಾಖೆಯವರು ಕಾಯ್ದಿಟ್ಟ ಪ್ರದೇಶದಲ್ಲಿ ನೀರಿಲ್ಲದೆ ಒಣಗಿ ನಿಂತ ಗಿಡ ಮರಗಳು

********

ಅರಣ್ಯ ಇಲಾಖೆಯವರು ಗಿಡಮರಗಳಿಗೆ ನೀರುಣಿಸಲು ಕೃಷಿ ಹೊಂಡಗಳನ್ನು ತಮ್ಮ ವ್ಯಾಪ್ತಿಯ ಸ್ಥಳಗಳಲ್ಲಿ ಮಾಡಬೇಕಿದೆ. ಈ ರೀತಿಯ ಕೃಷಿ ಹೊಂಡಗಳನ್ನು ಮಾಡುವುದರಿಂದ ಬೇಸಿಗೆಯ ದಿನಗಳಲ್ಲಿ ಗಿಡಮರಗಳಿಗೆ ನೀರುಣಿಸಿ ಗಿಡಮರಗಳನ್ನು ಸಂರಕ್ಷಿಸಬಹುದು.

ಬಸವರಾಜ ಅತ್ನೂರು
ಪರಿಸರ ಪ್ರೇಮಿ

ನರೇಗಾ ಕಾಮಗಾರಿಯಿಂದ ನೆಟ್ಟ ಸಸಿಗಳು ಅರಣ್ಯ ಇಲಾಖೆ ನಿರ್ಲಕ್ಷದಿಂದ ಒಣಗಿ ನಿಂತಿರುವುದು.

******

ಪ್ರಸ್ತುತ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಗಿಡಮರಗಳು ಒಣಗುತ್ತಿವೆ. ಅರಣ್ಯ ಇಲಾಖೆಯ ನಿರ್ಲಕ್ಷತನದಿಂದ ಮರಗಳನ್ನು ಘೋಷಣೆ ಮಾಡುವುದು ಅವರ ಕರ್ತವ್ಯವಾಗಿದೆ. ನರೇಗಾ ಕಾಮಗಾರಿಯಿಂದ ಗಿಡಗಳನ್ನು ಹಾಕಲಾಗಿದ್ದು, ಬಿಲ್ ಪಾವತಿಸುವದಷ್ಟೇ ಅವರ ಕೆಲಸವಲ್ಲ.ಗಿಡಗಳನ್ನು  ಪೋಷಿಸುವುದು ಅರಣ್ಯ ಇಲಾಖೆಯವರ ಹೆಚ್ಚಿನ ಜವಾಬ್ದಾರಿಯಾಗಿದೆ.

ಶರಣು ಜಡಿ ರೈತ ಸಂಘದ ಗೌರವಾಧ್ಯಕ್ಷ.

About The Author