ಕಾಂಗ್ರೆಸ್ ಅಭ್ಯರ್ಥಿ ಪರ ಉಸ್ತುವಾರಿ ಆಲೂರ ಮತಯಾಚನೆ

ಶಹಾಪುರ: ಮೇ.೭ರಂದು ನಡೆಯುವ ಲೋಕಸಭೆ ಚುನಾವಣೆ ನಿಮಿತ್ತ ರಾಯಚೂರ ಕ್ಷೇತ್ರ ಅಭ್ಯರ್ಥಿ ಜಿ,ಕುಮಾರನಾಯಕ ಪರ ರಾಜ್ಯ ಕೆಪಿಸಿಸಿ ಪಜಾ ಘಟಕದ ಕಾರ್ಯಕಾರಣ ಸದಸ್ಯರು ದೇವದುರ್ಗಾ ಉಸ್ತುವಾರಿ ವೆಂಕಟೇಶ ಆಲೂರ ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಸವರಾಜಪ್ಪಗೌಡ ಇಟಗಿ ದೇವದುರ್ಗಾ ತಾಲುಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ ಅಜಿಜ್ ರವರೊಂದಿಗೆ ಚರ್ಚಿಸಿದರು. ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಮತ್ತು ಪ್ರಗತಿ ಕುರಿತು ಮನವರಿಕೆ ಮಾಡುವದಲ್ಲದೆ ರಾಜ್ಯದಲ್ಲಿ ರಾಜ್ಯ ಸರ್ಕಾರ ಅನೇಕ ಕಾರ್ಯ ಯೋಜನೆಗಳನ್ನು ಜಾರಿಗೆ ಕುರಿತು ತಾಲುಕಿನಲ್ಲಿ ಜಾಗ್ರತಿ ಮೂಡಿಸಲು ಗ್ರಾಮಗಳ ಮನೆಗಳಿಗೆ ಬೇಟಿ ನಿಡುವ ಕುರಿತು ಪ್ರಸ್ತಾಪ ಮಾಡಲಾಯಿತು. ಯಾದಗಿರಿ ಜಿಲ್ಲಾ ಪ್ರದೇಶ ಕಾಂಗ್ರೆಸ್ ಪಕ್ಷದ ಪಜಾ ಘಟಕದ ಮಾಧ್ಯಮ ವಕ್ತಾರರಾದ ಚಂದ್ರಶೇಖರ ಕಟ್ಟಿಮನಿ, ವೀರಭದ್ರ ಕುಂಬಾರ ಸೇರಿದಂತೆ ತಾಲುಕಾ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *