ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲೆಂದು ಗುರುಕುಲ ಅಕಾಡೆಮಿ ಪ್ರಾರಂಭ : ಬಸವರಾಜ ಇಜೇರಿ

ಶಹಾಪುರ : ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳು  ಹಾಗೂ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂದು ತಾಲೂಕಿನ ಶ್ರೀಮತಿ ಸಂಗಮ್ಮ ಬಾಪುಗೌಡ ಪಿಯು ಕಾಲೇಜಿನಲ್ಲಿ ಗುರುಕುಲ ಅಕಾಡೆಮಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಡಾ. ಬಸವರಾಜ ಇಜೇರಿ ಹೇಳಿದರು.

ಎಸ್ ಎಸ್ ಬಿ ದರ್ಶನಾಪುರ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯುಸಿಯ ನಂತರ ಮೇಡಿಕಲ್ ಶಿಕ್ಷಣಕ್ಕಾಗಿ ಈ ಭಾಗದ ಶಾಲಾ ಮಕ್ಕಳು ನೀಟ್ ಕೋಚಿಂಗ್ ಪಡೆಯಲು ಬೆಂಗಳೂರು ಸೇರಿದಂತೆ ದೇಶದ ಇತರ ಪ್ರದೇಶಗಳಿಗೆ ಹೋಗುತ್ತಾರೆ. ಇದನ್ನು ತಡೆದು ನಮ್ಮಲ್ಲಿಯೇ ನೀಟ್ ಕೇಂದ್ರವನ್ನು ಆರಂಭಿಸಲು ಗುರುಕುಲ ಅಕಾಡೆಮಿ ಮುಖ್ಯಸ್ಥರಾದ ಮುರಳಿಯವರನ್ನು ಸಂಪರ್ಕಿಸಿ ಭೇಟಿ ಮಾಡಿ ಶಹಾಪುರ ನಗರದಲ್ಲಿ ಗುರುಕುಲ ಅಕಾಡೆಮಿ ಆರಂಭಿಸಿದ್ದೇವೆ. ವಿಶೇಷವಾಗಿ ಇಲ್ಲಿನ ಕೇಂದ್ರದಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಮೊದಲ ಪ್ರಶಸ್ತಿ ನೀಡಲಾಗುವುದು. ವಸತಿ ನಿಲಯದ ಜೊತೆಗೆ ಉಪನ್ಯಾಸಕರಿಗೂ ಕೂಡ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಗುರುಕುಲ ಮುಖ್ಯಸ್ಥರಾದ ಮುರುಳಿಯವರು ಮಾತನಾಡಿ ಸಮಾಜದ ಬದಲಾವಣೆಗೆ ಗುರು ಅಗತ್ಯ. ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವುದು ನಮ್ಮ ಉದ್ದೇಶವಾಗಿದ್ದು, ಗ್ರಾಮೀಣ ಭಾಗದ ಮಕ್ಕಳು ಅವಕಾಶ ವಂಚಿತವಾಗಬಾರದು ಎನ್ನುವ ಉದ್ದೇಶದಿಂದ ಗುರುಕುಲ ಅಕಾಡೆಮಿಯನ್ನು ಶಹಪುರದಲ್ಲಿ ಆರಂಭಿಸಲಾಗಿದೆ. ನಮ್ಮ ಸಂಸ್ಥೆಯಿಂದ ರಾಜ್ಯಾದ್ಯಂತ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಹಲವಾರು ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಪಡೆದುಕೊಂಡಿದ್ದಾರೆ.ಇದರ ಸದುಪಯೋಗವನ್ನು  ಈ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಡಾ. ಶಿವರಾಜ್, ವೀರಭದ್ರಪ್ಪ ಇದ್ದರು.

About The Author