ಸಕಲ ಸೌಲಭ್ಯಗಳನ್ನು ಒಳಗೊಂಡ ಶಹಾಪುರ ಸಾರ್ವಜನಿಕ ಆಸ್ಪತ್ರೆ : ಸಾವಿರ ಶಸ್ತ್ರ ಚಿಕಿತ್ಸೆಯ ಸರದಾರ ಡಾ.ಯಲ್ಲಪ್ಪ ಪಾಟೀಲ್

ಆಸ್ಪತ್ರೆ ಆಡಳಿತಾಧಿಕಾರಿ ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್

ವರದಿ : ಬಸವರಾಜ ಕರೇಗಾರ 

ಶಹಾಪುರ : ಸರಕಾರಿ ಆಸ್ಪತ್ರೆ ಎಂದರೆ ಎಲ್ಲರೂ ಮೂಗು ಮುರಿಯುವರೇ ಹೆಚ್ಚು. ಸೌಲಭ್ಯಗಳಿಲ್ಲದ ಸರಕಾರಿ ಆಸ್ಪತ್ರೆಗಳಲ್ಲಿ ಬಡವರು ಹೊರತುಪಡಿಸಿದರೆ ಇತರರು ಹೋಗುವುದು ಬಹಳ ಕಡಿಮೆ. ಆದರೆ ಶಹಾಪೂರ ಸರಕಾರಿ ಆಸ್ಪತ್ರೆ ಇದಕ್ಕೆ ಭಿನ್ನವಾಗಿದೆ.ಖಾಸಗಿ ಆಸ್ಪತ್ರೆಯಂತೆ ಇಲ್ಲಿಯೂ ಕೂಡ ಕೆಲವು ಸೌಲಭ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ.

ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ತಂಡ ಮತ್ತು ಸಿಬ್ಬಂದಿ ವರ್ಗ.

ಆಸ್ಪತ್ರೆಯ ಚಿತ್ರಣದ ವಿಡಿಯೋ 

******

ವೈದ್ಯರು ಮನಸ್ಸು ಮಾಡಿದರೆ ಖಾಸಗಿ ಆಸ್ಪತ್ರೆಗಳಿಗಿಂತ ಮಿಗಿಲಾಗಿ ಬದಲಾವಣೆ ಮಾಡಬಹುದು ಎನ್ನುವುದಕ್ಕೆ ನಗರ ಆಡಳಿತ ವೈದ್ಯಾಧಿಕಾರಿಯಾದ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್ ಅವರೆ ಕಾರಣ.

ರೋಗಿಗಳು ಜೊತೆಗೆ ಆಗಮಿಸಿದವರು ಕುಳಿತುಕೊಳ್ಳುವ ವ್ಯವಸ್ಥೆ

******

ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಕುಡಿಯುವ ನೀರಿನಿಂದಿಡಿದು ಸ್ವಚ್ಛತೆ, ಗಾರ್ಡನ್ ವ್ಯವಸ್ಥೆ, ರೋಗಿಗಳು ಉಳಿದುಕೊಳ್ಳಲು ಸಭಾಂಗಣಗಳು, ನುರಿತ ವೈದ್ಯರನ್ನು ಒಳಗೊಂಡ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಕಾಣಬಹುದು.

ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕೈ ತೊಳೆದುಕೊಳ್ಳುವ ವ್ಯವಸ್ಥೆ ಬಟ್ಟೆ ಒಗೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ

******

ಸರಕಾರಿ ಆಸ್ಪತ್ರೆಗೆ ಬಡವರು ಬರುವುದೆ ಹೆಚ್ಚು. ಅದರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕ್ಕ ಶಸ್ತ್ರ ಚಿಕಿತ್ಸೆಗೆ 30 ರಿಂದ 40 ಸಾವಿರ ರೂಪಾಯಿ ತೆಗೆದುಕೊಳ್ಳುತ್ತಾರೆ. ನುರಿತ ಶಸ್ತ್ರ ಚಿಕಿತ್ಸಕನಾದ ಡಾ.ಯಲ್ಲಪ್ಪ ಪಾಟೀಲ್ ಹುಲಕಲ್ ಸಾವಿರಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಗಳನ್ನು ಸರಕಾರಿ ಆಸ್ಪತ್ರೆಯಲ್ಲಿ ಮಾಡಿದ್ದಾರೆ. ಇದರ ಜೊತೆಗೆ ಸುರಪೂರ ಸರಕಾರಿ ಆಸ್ಪತ್ರೆಯಲ್ಲಿಯೂ ಕೂಡ ಹಲವಾರು ಶಸ್ತ್ರ ಚಿಕಿತ್ಸೆಗಳನ್ನು ಮಾಡಿದ್ದಾರೆ.

ಆಡಳಿತಾಧಿಕಾರಿ ವೈದ್ಯಾಧಿಕಾರಿಗಳಾದ ಡಾ.ಯಲ್ಲಪ್ಪ ಪಾಟೀಲ್  ಸಾವಿರಾರು ಯಶಸ್ವಿ ಶಸ್ತ್ರ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿದ್ದಾರೆ.

ಬಡವರ ಪಾಲಿನ ದೇವರೆಂದು ಹೇಳುತ್ತಿರುವ ಸಾರ್ವಜನಿಕರು ಡಾ.ಯಲ್ಲಪ್ಪ ನವರಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲು ದಿನಂಪ್ರತಿ ಎರಡು ನೂರಕ್ಕೂ ಹೆಚ್ಚು ರೋಗಿಗಳು ಕಾಯುತ್ತಾ ಕುಳಿತುಕೊಳ್ಳುತ್ತಿರುವುದನ್ನು ಸರಕಾರಿ ಆಸ್ಪತ್ರೆಯಲ್ಲಿ ನಾವು ಕಾಣಬಹುದು. ಡಾ.ಯಲ್ಲಪ್ಪ ಪಾಟೀಲ್ ರವರ ಸೇವೆಯನ್ನು ಮೆಚ್ಚಿ ಮಾಜಿ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಯವರು ಅಭಿನಂದನೆ ಸಲ್ಲಿಸಿದ್ದರು.

ವೈದ್ಯರ ಪ್ರತ್ಯೇಕ ಓಪಿಡಿ ವ್ಯವಸ್ಥೆ

*******

ಡಾ.ಯಲ್ಲಪ್ಪ ಹುಲ್ಕಲ್ ಅವರು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಆದ ಬದಲಾವಣೆಗಳು

* ರೋಗಿಗಳನ್ನು ನೋಡುವುದರ ಜೊತೆಗೆ ಆಡಳಿತದ ಜವಾಬ್ದಾರಿಯು ಕೂಡ ಡಾ.ಯಲ್ಲಪ್ಪ ಪಾಟೀಲ್ ರವರ ಮೇಲಿದೆ.

*ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್ ರವರು ಆಡಳಿತ ವಹಿಸಿಕೊಂಡ ಮೇಲೆ ಶಹಪುರ ಆಸ್ಪತ್ರೆಯ ಚಿತ್ರಣವೇ ಬದಲಾಗಿದೆ.

* ಎಮರ್ಜೆನ್ಸಿ ವಾರ್ಡ್, ಹೆರಿಗೆಯ ಕೋಣೆಗಳು, ರೋಗಿಗಳನ್ನು ವಿಚಾರಿಸಿಕೊಳ್ಳುತ್ತಿರುವ ಪ್ರತ್ಯೇಕ ರಿಸಪ್ಶನ್ ಕೋಣೆಗಳ ವ್ಯವಸ್ಥೆಯನ್ನು ಮಾಡಲಾಗಿದೆ.

* ರಾತ್ರಿ 11.30 ರವರೆಗೆ ತುರ್ತು ಸಿಸೇರಿಯನ್ ಆಪರೇಷನ್

* ಸಿಟಿ ಸ್ಕ್ಯಾನ್ ವ್ಯವಸ್ಥೆ ಇದ್ದು,ರೇಡಿಯಾಲಜಿಸ್ಟ್ ಕೂಡ ಶೀಘ್ರದಲ್ಲೇ ಸ್ಕ್ಯಾನಿಂಗ್ ಪ್ರಾರಂಭಿಸಲು ನೇಮಕಗೊಂಡಿದ್ದಾರೆ.

* ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ,

* ಪ್ರತಿ ವೈದ್ಯರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ.

*******

ಸ್ವಚ್ಚತೆಗೆ ಆದ್ಯತೆ

********

ಇಲ್ಲಿನ ಪ್ರತಿ ವೈದ್ಯರು ರೋಗಿಗಳನ್ನು ಅಷ್ಟೇ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ.ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು, ಶಸ್ತ್ರ ಚಿಕಿತ್ಸಕರು,ಎಲುಬು ರೋಗ ತಜ್ಞರು, ಕಣ್ಣು ಮತ್ತು ಕಿವಿಗೆ ಸಂಬಂದಿಸಿದ ವೈದ್ಯರು, ಸಕ್ಕರೆ ಮತ್ತು ಹೃದಯಕ್ಕೆ ಸಂಬಂಧಿಸಿದ ವೈದ್ಯರು ಸ್ರ್ತೀ ರೋಗ ವೈದ್ಯರು ಶಹಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಕಾಣಬಹುದು.ಜನೌಔಷಧಿ ಕೇಂದ್ರ,ಎಕ್ಸ್ ರೇ ವಿಭಾಗ, ರಕ್ತ ಪರೀಕ್ಷಾ ವಿಭಾಗ, ಡಯಾಲಿಸಿಸ್ ಕೇಂದ್ರಗಳ ಪ್ರತ್ಯೇಕ ಕೊಠಡಿಗಳಿವೆ.

*********

ಡಯಾಲಿಸೀಸ್ ಕೇಂದ್ರ 

********

ಸಾಮಾನ್ಯವಾಗಿ ಬಡವರು ಕಾರ್ಮಿಕರು ಸರಕಾರಿ ಆಸ್ಪತ್ರೆಗೆ ಬರುತ್ತಾರೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡುವುದು ವೈದ್ಯರ ಕರ್ತವ್ಯ. ಸರಕಾರಿ ಆಸ್ಪತ್ರೆಗೆ ಬರುವ ಅನುದಾನದಲ್ಲಿ ಹಲವು ಸೌಕರ್ಯಗಳ ವ್ಯವಸ್ಥೆಯನ್ನು ಮಾಡಲಾಗಿದೆ.. ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ್ ಅವರ ಸಹಕಾರದಿಂದ ಹೆಚ್ಚಿನ ಅನುದಾನ ಆಸ್ಪತ್ರೆಗೆ ಕೊಟ್ಟಿದ್ದಾರೆ. ಅದರಲ್ಲಿ ಹಲವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ.

ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್
ಆಡಳಿತ ವೈದ್ಯಾಧಿಕಾರಿ ಶಹಾಪುರ.

About The Author