ಇಂದಿನ ಕಲುಷಿತ ರಾಜಕೀಯ ವಾತಾವರಣದಲ್ಲಿ ಸಾಮಾಜಿಕ ಸಂಬಂಧಗಳು ಸೊರಗಿ ಹೋಗಿವೆ:ಜೀವನ್ ಸಾಬ್ ವಾಲೀಕರ್

ಹಗರಿಬೊಮ್ಮನಹಳ್ಳಿ:ಇಂದಿನ ಕಲುಷಿತ ರಾಜಕೀಯ ವಾತಾವರಣದಲ್ಲಿ ನಮ್ಮ ಸಾಮಾಜಿಕ ಸಂಬಂಧಗಳು ಸೊರಗಿ ಹೋಗಿವೆ ಎಂದು ಅಂತಾರಾಷ್ಟ್ರೀಯ ಕಲಾವಿದರಾದ ಜೀವನ್ ಸಾಬ್ ವಾಲೀಕರ್ ಹೇಳಿದರು.ಹಗರಿ ಬೊಮ್ಮನಹಳ್ಳಿ ಚಿಲುಗೋಡದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿರುವ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಿಂದಿನ ಕಾಲದಲ್ಲಿ ಗ್ರಾಮದ ಜಾತ್ರೆ, ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದರು.ಸರ್ವಧರ್ಮ ಸಮಾನತೆಯಲ್ಲಿ ಶರಣರ ಸಾಹಿತ್ಯ, ಜಾನಪದ ಸಾಹಿತ್ಯ ಹಾಗೂ ರಂಗಭೂಮಿ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಾಲೀಕರ್, ಬಸವಾದಿ ಶರಣರನ್ನು, ಹಿರಿಯ ಜಾನಪದ ಕಲಾವಿದರನ್ನು, ಹಳ್ಳಿಯ ಲಾವಣಿ, ಗೀಗೀಪದ, ಸೋಬಾನ ಪದ ಹಾಡುವ ತಾಯಂದಿರನ್ನು ಹಾಗೂ ರಂಗಭೂಮಿಯ ಹಿರಿಯ ನಟರನ್ನು ಸ್ಮರಿಸಿದರು.ಲಾವಣಿಪದ,ಒಡವು ಮತ್ತು ಒಗಟುಗಳನ್ನು ಹೇಳುವುದಲ ಮೂಲಕ ನೆರೆದ ಜನಸ್ತೋಮವನ್ನು ರಂಜಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಚರಂತೇಶ್ವರ ಮಹಾಸ್ವಾಮಿಗಳು ಮಾತನಾಡುತ್ತಾ, ಹಳ್ಳಿಗಳಲ್ಲಿ ಎಲ್ಲಿ ಜಾತಿ ಧರ್ಮ ಮತದವರು ಸಾಮರಸ್ಯದ ಜೀವನ ನಡೆಸಬೇಕೆಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮ ಉದ್ಘಾಟನೆಗೈದ ನಿವೃತ್ತಿ ಶಿಕ್ಷಕರಾದ ಹಿ.ಮ.ಕೊಟ್ರಯ್ಯನವರು ಮಾತನಾಡುತ್ತಾ, ಈಗಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು  ಉತ್ತಮ ಕಾರ್ಯಗಳನ್ನು ಹಮ್ಮಿಕೊಂಡು ಗ್ರಾಮೀಣ ಭಾಗದ ಜನರನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ.ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಾನಿಗಳ ಪರವಾಗಿ ಸನ್ಮಾನ ಸ್ವೀಕರಿಸಿ ಮಾಡಿ ಮಾತನಾಡಿದ ಅಕ್ಕಿ ತೋಟೇಶ, ಇಂತಹ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ಕನ್ನಡ ಸಾಹಿತ್ಯ ಬಲವರ್ಧನೆಗೆ ಪೂರಕವಾಗಿದೆ ಎಂದು ಹೇಳಿದರು.

ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗೂಳಪ್ಪ ಹುಲಿಮನಿ ಮಾತನಾಡುತ್ತಾ,ದತ್ತಿ ಉಪನ್ಯಾಸ ಕಾರ್ಯಕ್ರಮವು ಕನ್ನಡ ಸಾಹಿತ್ಯ ಚಟುವಟಿಕೆಯ ಒಂದು ಭಾಗವಾಗಿದ್ದು, ದಾನಿಗಳ ಆಶಯದಂತೆ ಅವರ ಸ್ಮರಣಾರ್ಥವಾಗಿ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳು ಅವರಿಗೆ ಸಲ್ಲಿಸುವ ಗೌರವವಾಗಿದೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವುದು ಆಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಗ್ರಾಮದ ಮುಖಂಡರಾದ ಎ. ಮಂಜುನಾಥ, ಉತ್ತಂಗಿ ದೊಡ್ಡ ಹನುಮಂತ, ಮೋರಿಗೇರಿ ವೀರಣ್ಣ,ಕಾದ್ಗಿಹಳ್ಳಿ ಹುಲುಗಪ್ಪ,ಬಿಎಸ್ ಮೈಲಪ್ಪ ಮಧುಸೂದನ, ಕೊಟ್ರೇಶ, ಗಂಗಾಧರ, ಹನುಮರೆಡ್ಡಿ, ಕಾಡಪ್ಪ, ಎಚ್ಎಮ್ ಮಹೇಶ್ವರಯ್ಯ, ಜಿ. ಕರಿಯಜ್ಜ, ಮೆಟ್ರಿ ದೊಡ್ಡಬಸಪ್ಪ, ಜಿ. ರುದ್ರಪ್ಪ, ಕೂಡ್ಲಿಗಿ ಕೊಟ್ರೇಶ, ಬಿ. ಶ್ರೀನಿವಾಸ ಕಡ್ಡಿ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.ಕುಮಾರಿ ಕೌಶಲ್ಯ, ಭೂಮಿಕಾ, ಗೋಣೆಪ್ಪ, ಆನೇಕಲ್ ಕೊಟ್ರೇಶ, ಎಮ್. ದೊಡ್ಡಬಸಪ್ಪ ಕಾರ್ಯಕ್ರಮ ನಿರೂಪಿಸಿದರು.

About The Author