ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉಪನ್ಯಾಸ ಕಾರ್ಯಕ್ರಮ

ವಿಜಯಪುರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಚಿಲುಗೋಡದ ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ಸಂಜೆ 6-00 ಗಂಟೆಗೆ ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗೂಳಪ್ಪ ಹುಲಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೂಜ್ಯ ಡಾ.ಮಹೇಶ್ವರ ಸ್ವಾಮಿಗಳು ಶ್ರೀ ಕ್ಷೇತ್ರ ನಂದಿಪುರರವರು ಸಾನ್ನಿಧ್ಯ ವಹಿಸಲಿದ್ದು,ಬಸರಕೋಡದ ನಿವೃತ್ತ ಶಿಕ್ಷಕರಾದ ಹಿ.ಮ.ಕೊಟ್ರಯ್ಯ ಕಾರ್ಯಕ್ರಮ ಉದ್ಘಾಟನೆಗೈಯಲಿದ್ದು,ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗೂಳಪ್ಪ ಹುಲಿಮನಿ ವಹಿಸಿಕೊಳ್ಳುವರು.

ಸರ್ವಧರ್ಮ ಸಮನ್ವಯತೆಯಲ್ಲಿ ಶರಣ ಸಾಹಿತ್ಯ.ಜನಪದ ಸಾಹಿತ್ಯ ಮತ್ತು ರಂಗಭೂಮಿಯ ಕೊಡುಗೆ ಕುರಿತು ಅಂತಾರಾಷ್ಟ್ರೀಯ ಜಾನಪದ ಕಲಾವಿದರಾದ ಜೀವನ್ ಸಾಬ್ ವಾಲೀಕರ್ ವಿಶೇಷ ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮದ ಅತಿಥಿಗಳಾಗಿ ಬಾಣದ ಶಿವಪ್ಪ ಮಾಜಿ ಗ್ರಾ.ಪಂ.ಅಧ್ಯಕ್ಷರು ಬಿ.ಬಿ.ಹಳ್ಳಿ.ಚಿಲುಗೋಡಾದ ಮುಖಂಡರಾದ ಮೋರಿಗೇರಿ ವೀರಣ್ಣ, ಕ್ಯಾದಿಗಿಹಳ್ಳಿ ಹುಲುಗಪ್ಪ,ಎಂ.ಮಂಜುನಾಥ ನಿರ್ಧೆಶಕರು.RSSN.ಹ.ಭೋ.ಹಳ್ಳಿಯವರು ಮತ್ತು ವಿಶೇಷ ಆಹ್ವಾನಿತರಾಗಿ ಅಕ್ಕಿ ಕೊಟ್ರಪ್ಪ ತಂಬ್ರಹಳ್ಳಿ, ಯರಡಕೇರಿ ಸಣ್ಣ ತೋಟಪ್ಪ ತಂಬ್ರಹಳ್ಳಿ,ಡಿ.ರಾಮನಮಲಿ ತಂಬ್ರಹಳ್ಳಿ,ಇಟಗಿ ಕಲ್ಲೇಶಪ್ಪ ಹಗರಿ ಕ್ಯಾದಿಗಿಹಳ್ಳಿ,ಬಸವಣ್ಣೆಪ್ಪ ಏಣಗಿ ಬಸಾಪುರ ಸೇರಿದಂತೆ ಗ್ರಾಮಸ್ಥರು ಸಾಹಿತ್ಯ ಪರಿಷತ್ ಪ್ರಮುಖರು ಪಾಲ್ಗೊಳ್ಳುವರು ಎಂದು ತಿಳಿಸಿದರು.

About The Author