ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಉನ್ನತ ಸ್ಥಾನಮಾನ ಪಡೆದಾಗ ಮಾತ್ರ ಸಮಾನತೆ ಪೂರ್ಣ ಪ್ರಮಾಣದಲ್ಲಿ ಪಡೆದಂತಾಗುತ್ತದೆ:ಶರಣಬಸಪ್ಪಗೌಡ ದರ್ಶನಾಪುರ

ಶಹಾಪೂರ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಸ್ಥಾನಮಾನ ಪಡೆದಾಗ ಮಾತ್ರ ಸಮಾನತೆ ಪೂರ್ಣ ಪ್ರಮಾಣದಲ್ಲಿ ಪಡೆದಂತಾಗುತ್ತದೆ.ಸಮಾನತೆಗಾಗಿ ಬುದ್ಧ, ಬಸವ, ಅಂಬೇಡ್ಕರರು ಶ್ರಮಿಸಿದ ಹಾದಿಯಲ್ಲಿ ಸಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ಆ ನಿಟ್ಟಿನಲ್ಲಿ ಎಲ್ಲರು ಮನಸ್ಸನ್ನು ಕೇಂದ್ರಿಕರಿಸಬೇಕಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕರೆ ನೀಡಿದರು.ತಾಲೂಕಿನ ಮದ್ದರಕಿ ಗ್ರಾಮದಲ್ಲಿ 2566 ನೇ ಬುದ್ಧ ಪೂರ್ಣಿಮೆಯ ನಿಮಿತ್ಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಹಾಪುರ ಹಾಗೂ ಪ್ರಬುದ್ಧ ಬುದ್ಧ ವಿಹಾರ ಸಮಿತಿ ಮದ್ದರಕಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೂರಾರು ವರ್ಷಗಳ ಹಿಂದೆ ಅಸಮಾನತೆಯಿಂದ ಬಳಲುತ್ತಿದ್ದ ಭಾರತಕ್ಕೆ ಅಂಬೇಡ್ಕರರ ಸಂವಿಧಾನ ಜಾರಿಯಾಗಿದ್ದರಿಂದ ಇಂದು ಅಸಮಾನತೆ ದೂರವಾಗಿದೆ ಎಂದ ಅವರು, ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಕುಟುಂಬಕ್ಕೆ ಸರಳ ಸಾಮೂಹಿಕ ಮದುವೆ ಆಸರೆಯಾಗಿ ನವ ದಂಪತಿಯ ಜೀವನಕ್ಕೆ ಹೊಸ ದಾರಿ ರೂಪಿಸುತ್ತವೆ ಎಂದರು.ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ ಮಾತನಾಡಿ,ಮದುವೆ ಮಾಡಲು ಬಡವರು ಜಮೀನು, ಆಸ್ತಿ ಮಾರಾಟ ಮಾಡಿ, ಸಾಲದ ಸೂಲಕ್ಕೆ ಸಿಲುಕುತ್ತಾರೆ. ಅಂತಹ ಸಾಲದ ಸುಳಿಗೆ ಕುಟುಂಬ ಸಿಲುಕಬಾರದು. ಅವರಿಗೆ ಸರ್ಕಾರದ ಸವಲತ್ತುಗಳನ್ನ ನೀಡಬೇಕು ಎಂಬ ಆಶಾಭಾವನೆ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಭಂತೆ ಧಮ್ಮಾನಂದ, ಆದಿತ್ಯ, ಬೋಧಿನಂದ, ಸಾರಿಪುತ್ರರು ವಹಿಸಿದ್ದರು. ಮಲ್ಲಿಕಾರ್ಜುನ ಪೂಜಾರಿ, ಅಶೋಕಗೌಡ ಮಾಲಿ ಪಾಟೀಲ್, ನಾಗಣ್ಣ ಬಡಿಗೇರ, ನೀಲಕಂಠ ಬಡಿಗೇರ, ಶಿವಕುಮಾರ ತಳವಾರ, ಶ್ರೀಶೈಲ ಹೊಸ್ಮನಿ, ಶಂಕರ ಸಿಂಘೇ, ರಾಮಣ್ಣ ಕಲ್ಲದೇವನಹಳ್ಳಿ, ಶರಣಪ್ಪ ಕೊಂಬಿನ್, ರಾಯಪ್ಪ ಗಂಗನಾಳ, ಮಲ್ಲಣ್ಣ ಉಳ್ಳಂಡಗೇರಿ, ಶರಣಬಸವ ಬಿರೆದಾರ್, ಬಾಬುರಾವ್ ಬೂತಳಿ, ಭೀಮರಾಯ ಜುನ್ನಾ, ಚಂದ್ರಕಾಂತ ರಸ್ತಾಪುರ, ಶರಣಪ್ಪ ಭೂತಳಿ, ಪರಶುರಾಮ ಹೊಸ್ಮನಿ ಸೇರಿದಂತೆ ಇತರರು ಇದ್ದರು.

About The Author