ಸಾರ್ವಜನಿಕ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ : 5 ಕೆ.ಜಿ ಅಂಡಾಂಶಯ ಗಡ್ಡೆ ಹೊರ ತೆಗೆದ ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್

ಶಹಾಪುರ : ಶಹಪುರ ತಾಲೂಕಿನ ಸಿಂಗನಹಳ್ಳಿ ಗ್ರಾಮದ  ಹದಿನೇಳು ವರ್ಷದ ಬಾಲಕಿಯ ಹೊಟ್ಟೆಯಲ್ಲಿ ಐದು ಕೆಜಿ ಅಂಡಾಶಯ ಗಡ್ಡೆ ಬೆಳೆದಿದ್ದು, ಹೊಟ್ಟೆ ನೋವಿನಿಂದ ಬಳಲುತ್ತಿರುವ ಆಕೆಯು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ನಲ್ಲಿ ಗಡ್ಡೆ ಬೆಳೆದಿದ್ದನ್ನು ತಿಳಿದು ವೈದ್ಯರಾದ ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್ ಅವರು ಶಸ್ತ್ರಚಿಕಿತ್ಸೆ ಮೂಲಕ 5 ಕೆಜಿ ಅಂಡಾಶಯ ಗಡ್ಡೆಯನ್ನು ಹೊರತೆಗೆದಿದ್ದಾರೆ. ಬಾಲಕಿಗೆ ರಕ್ತ ಕಡಿಮೆ ಇದ್ದುದನ್ನು ಅರಿತ ವೈದ್ಯರು ಎರಡು ಬಾಟಲ್ ರಕ್ತ ಕೊಟ್ಟ ನಂತರ ಯಶಸ್ವಿ ಚಿಕಿತ್ಸೆಯಾಗಿದ್ದು, ಬಾಲಕಿಯು ಆರೋಗ್ಯವಾಗಿದ್ದು ಚಿಕಿತ್ಸೆ ಫಲಕಾರಿಯಾಗಿದೆ ಎಂದು ಪಾಲಕರು ತಿಳಿಸಿದ್ದಾರೆ.

ಐದು ಕೆಜಿ ಅಂಡಾಶಯ ಗಡ್ಡೆ 

******

ಶಹಾಪುರ ಸರಕಾರಿ ಆಸ್ಪತ್ರೆಯಲ್ಲಿ ಐದು ಕೆಜಿಯ ಅಂಡಾಶಯ ಗಡ್ಡೆಯ ಶಸ್ತ್ರಚಿಕಿತ್ಸೆಯಾಗಿರುವುದು ಇದು ಎರಡನೇ ಬಾರಿಯಾಗಿದ್ದು, ಯಾದಗಿರಿ ಜಿಲ್ಲಾ ಆಸ್ಪತ್ರೆಯೂ ಸೇರಿದಂತೆ ತಾಲೂಕಿನ ಯಾವುದೇ ಆಸ್ಪತ್ರೆಯಲ್ಲಿ ಈ ತರಹದ ಅಂಡಾಶಯ ಗಡ್ಡೆಗಳ ಶಸ್ತ್ರಚಿಕಿತ್ಸೆಯಾಗಿಲ್ಲ.
 
ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್ 
ಶಸ್ತ್ರಚಿಕಿತ್ಸಕರು ಮತ್ತು ಆಡಳಿತಾಧಿಕಾರಿ ಸಾರ್ವಜನಿಕ ಆಸ್ಪತ್ರೆ ಶಹಾಪುರ 

**********

ಖಾಸಗಿ ಆಸ್ಪತ್ರೆಯಲ್ಲಿ ಇಂತಹ ಅಂಡಾಶಯ ಗಡ್ಡೆಯ ಶಸ್ತ್ರ ಚಿಕಿತ್ಸೆ ಮಾಡಲು ಸುಮಾರು ಎರಡು ಲಕ್ಷ ರೂಪಾಯಿ ಖರ್ಚಾಗುತ್ತದೆ. ಬಡವರಾದ ನಾವು ಅಷ್ಟೊಂದು ಹಣ ಒದಗಿಸುವುದು ಹೇಗೆ ಸಾಧ್ಯ. ಬಡವರ ಪಾಲಿಗೆ ಸರಕಾರಿ ಆಸ್ಪತ್ರೆಗಳು ಮತ್ತು ಅಲ್ಲಿನ ವೈದ್ಯರೆ ಜೀವಾಳವಾಗಿದ್ದು, ಯಲ್ಲಪ್ಪ ನಂತಹ ವೈದ್ಯರಿಂದ ನನ್ನ ಮಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆಯಾಗಿದೆ.

ಹುಸೇನ್ ಪಾಟೀಲ್.
 ಸಿಂಗನಹಳ್ಳಿ.

About The Author