ಘನ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಹಾಗೂ ವಿಲೇವಾರಿ ಕುರಿತು ಗ್ರಾಮ ಪಂಚಾಯತ ಸಫಾಯಿಗಾರರಿಗೆ ಒಂದು ದಿನದ ತರಬೇತಿ ಶಿಬಿರ

ಯಾದಗಿರಿ:ಜಿಲ್ಲೆಯ ಶಹಾಪೂರ ತಾಲೂಕ ಪಂಚಾಯತ ಸಭಾಂಗಣದಲ್ಲಿ ವಡಗೇರಾ ಮತ್ತು ಶಹಾಪೂರ ತಾಲೂಕಿನ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿಗಾರರಿಗೆ ಘನ ತ್ಯಾಜ್ಯ ಸಂಗ್ರಹಣೆ,ಸಾಗಾಣಿಕೆ ಮತ್ತು ವಿಲೇವಾರಿ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಮಾರಂಭದಲ್ಲಿ ಸ್ವಚ್ಚ ಭಾರತ ಅಭಿಯಾನದ ಜಿಲ್ಲಾ ಸಂಯೋಜಕರಾದ ಶಿವಕುಮಾರ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಉದ್ದೇಶ ಮಾತನಾಡುತ್ತಾ, ಗ್ರಾಮೀಣಾ ಬಾಗದಲ್ಲಿರುವ ಸಪಾಯಿಗಾರರು ಇನ್ಮು ಮುಂದೆ ಕಡ್ಡಾಯವಾಗಿ ಸ್ವಚ್ಛ ಕಾರ್ಯಾದಲ್ಲಿ ತೊಡಗಬೇಕು. ದಿನವಹಿ ಸಂಗ್ರಹಿಸಿರುವ ತ್ಯಾಜ್ಯವನ್ನು ತಾ.ಪಂ,ಜಿ.ಪಂಚಾಯತಗೆ ವಿವರ ಕೊಡಬೇಕಾಗಿದ್ದು,ಗ್ರಾಮದಲ್ಲಿರುವ ಪ್ರತಿ ಮನೆ, ಅಂಗಡಿ, ಹೋಟೇಲ್ ಗಳಲ್ಲಿ ಕಸವನ್ನು ಬೀಸಾಡದೆ ಒಂದಲ್ಲಿ ಸಂಗ್ರಹಿಸಿ ಗ್ರಾಮ ಪಂಚಾಯತ ವಾಹನಕ್ಕೆ ನೀಡಲು ಪ್ರತಿಯೊಬ್ಬ ಸಪಾಯಿಗಾರರು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಗೋಗಿ ಕೆ ಗ್ರಾಮ ಪಂಚಾಯತಿಯಲ್ಲಿ ಉತ್ತಮವಾಗಿ ತ್ಯಾಜ್ಯ ಸಂಗ್ರಹಣೆ ಮಾಡುತ್ತಿರುವ ಪ್ರಯುಕ್ತ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಮಲ್ಲಣ್ಣ ಮಾಳೂರ ಸಿಬ್ಬಂದಿಯಿಂದ ತ್ಯಾಜ್ಯ ಸಂಗ್ರಹದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರು, ಪಂ.ರಾ ವಡಗೇರಾ‌ ಮತ್ತು ಶಹಾಪೂರ, ಶಿವಕುಮಾರ ಐ.ಇ.ಸಿ ಸಮಾಲೋಚಕರು, ವೆಂಕಟೇಶ ಹೆಚ್ ಆರ್ ಡಿ ಸಮಾಲೋಚಕರು, ತರಬೇತಿ ನೀಡಿದರು. ಈ ತರಬೇತಿಯಲ್ಲಿ ಎಲ್ಲಾ ಗ್ರಾ.ಪಂ.ಯ ಸಫಾಯಿಗಾರರು ಪಾಲ್ಹೊಂಡಿದ್ದರು.

About The Author