ಲೋಕಸಭಾ ಚುನಾವಣೆ : ರಾಯಚೂರು ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ? : ಅಮರೇಶ್ವರ ನಾಯಕ ಅಥವಾ ಬಿ.ವಿ ನಾಯಕ , ಇಬ್ಬರಲ್ಲಿ ತೀವ್ರ ಪೈಪೋಟಿ 

ಬಸವರಾಜ ಕರೇಗಾರ

ಯಾದಗಿರಿ : ಕೆಲವೇ ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗವು ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ದೇಶದಲ್ಲಿ ಮಾಧ್ಯಮಗಳಿಂದ ಚುನಾವಣಾ ಸಮೀಕ್ಷೆಗಳು ನಡೆಯುತ್ತಿವೆ. ಮತ್ತೊಮ್ಮೆ ಪ್ರಧಾನಿ ಮೋದಿಯವರು ಪ್ರಧಾನಮಂತ್ರಿಯಾಗುತ್ತಾರೆ ಎನ್ನುವ ಅಂಶಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚುನಾವಣೆಯಲ್ಲಿ ಮತದಾರ ಪ್ರಭುಗಳ ತೀರ್ಮಾನವೇ ಅಂತಿಮ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಕ್ಷೇತ್ರವಾರು ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯುತ್ತಿದೆ. ರಾಯಚೂರು ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದು, ಇಲ್ಲಿಯವರೆಗೆ ರಾಯಚೂರಿನವರೇ ಅತಿ ಹೆಚ್ಚು ಜನ ಸಂಸತ್ ಸದಸ್ಯರಾಗಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಅಮರೇಶ್ವರ ನಾಯಕ ಸಂಸದರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ಪ್ರಸ್ತುತ ಒಲವು ಮತ್ತೊಮ್ಮೆ ಅಮರೇಶ್ವರ ನಾಯಕ ಎನ್ನುವಂತಿಲ್ಲ.ಕಾಂಗ್ರೆಸ್ ರಿಂದ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಬಂದವರು ಅಮರೇಶ ನಾಯಕ.

ಬಿ.ವಿ.ನಾಯಕ

ಪ್ರಧಾನಿ ನರೇಂದ್ರ ಮೋದಿಯವರ ಹೆಸರೇಳಿಕೊಂಡು ಗೆದ್ದು ಬಂದವರು ಹಲವು ಸಂಸತ್ ಸದಸ್ಯರಾಗಿದ್ದಾರೆ. ಆದರೆ ಪ್ರಸ್ತುತ ರಾಜ್ಯದಲ್ಲಿ ಚುನಾವಣೆಯ ಗಾಳಿ ಬೇರೆಯೇ ಇದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ.ಹಲವು ಉಚಿತ ಗ್ಯಾರಂಟಿಗಳ ಮಧ್ಯೆ ಬಿಜೆಪಿ ಗೆಲುವು ಸಾಧಿಸಬೇಕು ಇದೆ. ತನ್ನ ಸ್ವಂತ ವರ್ಚಸ್ಸಿನಿಂದ ಗೆಲ್ಲುವುದು ಅಂಬರೇಶ ನಾಯಕರಿಂದ ಸಾಧ್ಯವಿಲ್ಲ ಎನ್ನಲಾಗುತ್ತಿದ್ದು,ಇದನ್ನರಿತ ಬಿಜೆಪಿ ಹೈಕಮಾಂಡ್ ಮಾಜಿ ಸಂಸದರಾದ ಬಿ.ವಿ.ನಾಯಕರವರಿಗೆ ಟಿಕೆಟ್ ಕೊಡುವ ಚಿಂತನೆಯಲ್ಲಿದೆ ಎನ್ನುವ ಬಲವಾದ ಕೂಗು ಕೇಳಿ ಬರುತ್ತಿದೆ.

ಬಿ ವಿ ನಾಯಕ ಮಾಜಿ ಸಂಸದರಾದ ದಿವಂಗತ ವೆಂಕಟೇಶ ನಾಯಕರವರ ಪುತ್ರರಾಗಿದ್ದು.ಒಂದು ಬಾರಿ ಸಂಸತ್ ಸದಸ್ಯರಾಗಿದ್ದಾರೆ. ದೇವದುರ್ಗ ಕ್ಷೇತ್ರ ಸೇರಿದಂತೆ ರಾಯಚೂರು ಜಿಲ್ಲೆಯಾದ್ಯಂತ ಪ್ರಭಾವಶಾಲಿ ವ್ಯಕ್ತಿ. ಮಾನ್ವಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡರು.

ಅಮರೇಶ್ವರ ನಾಯಕ ಪ್ರಸ್ತುತ ಬಿಜೆಪಿ ಪಕ್ಷದ ಸಂಸತ್ ಸದಸ್ಯರು

ಕೇವಲ ಒಂದು ತಿಂಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಮಾನ್ವಿ ಕ್ಷೇತ್ರದಲ್ಲಿ ಸಂಚರಿಸಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ತನ್ನ ತಂದೆಯವರ ಅಭಿವೃದ್ಧಿ ಕೆಲಸ ಮತ್ತು ತನ್ನದೇ ಆದ ವರ್ಚಸ್ಸು ಬಿ ವಿ ನಾಯಕ ಅವರಿಗಿದೆ. ತನ್ನ ಸ್ವಂತ ವರ್ಚಸ್ಸಿನ ಬಲ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವದಿಂದ ರಾಯಚೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ದಕ್ಕಿಸಿಕೊಂಡರೆ ಗೆಲುವು ಸುಲಭವಾಗಲಿದೆ ಎನ್ನುವ ಲೆಕ್ಕಾಚಾರ ರಾಜ್ಯ ಮತ್ತು ಕೇಂದ್ರದ ನಾಯಕರಿಗಿದೆ. ರಾಯಚೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಬಿ.ವಿ.ನಾಯಕರಿಗೆ ಟಿಕೆಟ್ ಕೊಟ್ಟರೆ ಅಚ್ಚರಿ ಪಡಬೇಕಿಲ್ಲ. ಗೆಲುವು ಸುಲಭವಾಗಲಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ರಾಯಚೂರು ಕ್ಷೇತ್ರಕ್ಕೆ ಪ್ರಭಾವಿ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಲು ಬಿ.ವಿ. ನಾಯಕರಿಗೆ ಬಿಜೆಪಿ ಟಿಕೆಟ್ ಕೊಟ್ಟರೆ ಗೆಲುವು ಸುಲಭವಾಗಲಿದೆ ಎನ್ನಲಾಗುತ್ತಿದೆ. ಕೇಂದ್ರದ ಬಿಜೆಪಿ ನಾಯಕರು ಯಾರಿಗೆ ಬಿಜೆಪಿ ಟಿಕೆಟ್ ಕೊಡುವರು ಎಂದು ಕಾದು ನೋಡಬೇಕಿದೆ !

 

ಪ್ರಸ್ತುತ ಸಂಸದರಿಂದ ಬಿಜೆಪಿ ಕಾರ್ಯಕರ್ತರ ಕಡೆಗಣನೆ ಬಲವಾದ ಆರೋಪ !
ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರೇ ಜೀವಾಳ ಎಂದು ಪ್ರಧಾನಿ ಮೋದಿಯವರು ಬಿಜೆಪಿ ಪಕ್ಷದ ಹಲವು ಬಿಜೆಪಿ ಮುಖಂಡರು ಹೇಳುತ್ತಾರೆ.ಪ್ರಸ್ತುತ ಸಂಸದರು ಬಿಜೆಪಿ ಕಾರ್ಯಕರ್ತರು ಮತ್ತು ಪಕ್ಷದಲ್ಲಿರುವ ಪ್ರಮುಖ ಹುದ್ದೆಯಲ್ಲಿರುವವರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎನ್ನುವ ಬಲವಾದ ಆರೋಪಗಳು ರಾಯಚೂರು ಕ್ಷೇತ್ರದಾದ್ಯಂತ ಕೇಳಿ ಬರುತ್ತಿದೆ. ಇದರಿಂದ ಬಿಜೆಪಿ ಕಾರ್ಯಕರ್ತರು ತೀವ್ರ ನಿರಾಶೆಗೊಂಡಿದ್ದಾರೆ ಎನ್ನಲಾಗುತ್ತಿದ್ದು, ಪಕ್ಷದ ಪ್ರಮುಖ ಮಂಡಲದ ಹುದ್ದೆಯಲ್ಲಿರುವವರು ಸಾರ್ವಜನಿಕರ ಕೆಲಸಕ್ಕೆ ಅನಿವಾರ್ಯತೆ ಇದ್ದ ಸಂದರ್ಭದಲ್ಲಿ ಪತ್ರ ಕೇಳಲು ಹೋದಾಗ ನಿರಾಸಕ್ತಿ ವಹಿಸಿರುವುದು ಮತ್ತು ಪತ್ರವು ನೀಡದೇ ಇರುವುದರಿಂದ ಮಂಡಲದ ಮುಖಂಡರು ತೀವ್ರ ನಿರಾಸೆಗೊಂಡಿದ್ದು ಇದು ಬೇಸರ ತರಿಸುವ ವಿಷಯ ಎಂದು ಹೆಸರೇಳಲು  ಇಚ್ಛಿಸದ ಮಂಡಲದ ಮುಖಂಡರು ತಿಳಿಸಿದ್ದಾರೆ.ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೆ  ಜೀವಾಳ. ಅದನ್ನು ಕಡೆಗಣಿಸಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ !

About The Author