ಮಹಾಶೈವ ಧರ್ಮಪೀಠದಲ್ಲಿ 83 ನೆಯ ‘ ಶಿವೋಪಶಮನ ಕಾರ್ಯ’

ಗಬ್ಬೂರು ಮಾರ್ಚ್ 10,2024 ::ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಮಾರ್ಚ್ 10 ರ ಆದಿತ್ಯವಾರದಂದು 83 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಲಿಚ್ಛಿಸಿರುವ ಹಿರಿಯ ಬಿಜೆಪಿ ಮುಖಂಡ ಮತ್ತು ರಾಯಚೂರು ಜಿಲ್ಲೆಯ ಹಿರಿಯ ರಾಜಕಾರಣಿ,ಮಾಜಿ ಸಂಸದ ಬಿ.ವಿ.ನಾಯಕ್ ಅವರು ಇಂದು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿಯರ ಆಶೀರ್ವಾದ ಪಡೆದರು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ‘ವಿಜಯದುರ್ಗೆ ‘ಎಂದು ಬಿರುದುಗೊಂಡಿರುವ ವಿಶ್ವೇಶ್ವರಿ ದುರ್ಗಾದೇವಿಯ ಸನ್ನಿಧಿಯಲ್ಲಿ ಬಿ.ವಿ.ನಾಯಕ್ ಅವರನ್ನು ದುರ್ಗಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

ಈ ಶಿವೋಪಶಮನ ದಿನದ ವಿಶೇಷವೆಂದರೆ ಮಲ್ಕಾಪುರದ ಬಸವಲಿಂಗ ಹೊಳಾಚಿ ಸಂತಾನಾಪೇಕ್ಷೆಯಿಂದ 27.11.2022 ರಂದು ನಡೆದಿದ್ದ ಶಿವೋಪಶಮನಕ್ಕೆ ಬಂದಿದ್ದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರಾಭಯವನ್ನು ಕರುಣಿಸಿದ್ದರು.05.10.2023 ರಂದು ಬಸವಲಿಂಗನಿಗೆ ಗಂಡುಮಗುವಾಗಿದ್ದು ಆ ಸಂತಸದಲ್ಲಿ ಶಿವರಾತ್ರಿಯ ಅಮವಾಸೆಯ ಈ ದಿನದಂದು ಮಹಾಶೈವ ಧರ್ಮಪೀಠದಲ್ಲಿ ದಾಸೋಹಸೇವೆಯನ್ನು ಸಲ್ಲಿಸಿದರು.ಪೀಠಾಧ್ಯಕ್ಷರು ಬಸವಲಿಂಗ ಹೊಳಾಚಿಯವರನ್ನು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮೂಲಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ದಾಸೋಹಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷ ಉದಯಕುಮಾರ ಪಂಚಾಳ,ಶಿವಯ್ಯಸ್ವಾಮಿ ಮಠಪತಿ,ಗಂಗಣ್ಣಗೌಡ ಕೊರವಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ,ಪತ್ರಕರ್ತರುಗಳಾದ ಏಳುಬಾವೆಪ್ಪಗೌಡ,ಬಸವರಾಜ ಬ್ಯಾಗವಾಟ,ರಮೇಶ ಖಾನಾಪುರ ಮತ್ತು ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಸೀತಾಕಾಂತ ಗುಡಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ್,ಸಿದ್ರಾಮಯ್ಯಸ್ವಾಮಿ ಹಳ್ಳಿ,ಯಲ್ಲಪ್ಪ ಕರಿಗಾರ,ಪರಶುರಾಮ ಜಡೇರ್,ರಂಗನಾಥ ಮಸೀದಪುರ,ಖಾಸಿಂಸಾಬ್ ಮಸೀದಪುರ, ವೆಂಕಟೇಶ,ಶಿವಕುಮಾರ ವಸ್ತಾರ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author