ಕಲ್ಯಾಣಕಾವ್ಯ : ಶಿವ ತತ್ತ್ವಾರ್ಥ : ಮುಕ್ಕಣ್ಣ ಕರಿಗಾರ

ಕಲ್ಯಾಣಕಾವ್ಯ : ಶಿವ ತತ್ತ್ವಾರ್ಥ

ಮುಕ್ಕಣ್ಣ ಕರಿಗಾರ
ಶಿವ
ಎಂದರೆ, ಅದೊಂದು ಹೆಸರಲ್ಲ ; ತತ್ತ್ವ.
ಶಿವ
ಎಂದರೆ, ಅದೊಂದು ಮೂರ್ತಿಯಲ್ಲ,
ಆಕಾರವಿಲ್ಲದ ಚೈತನ್ಯ.
ಶಿವ
ಎಂದರೆ,ಅದೊಂದು ಕಲ್ಪನೆಯಲ್ಲ
ದಿಟಕೆ ದಿಟವಾದ ಪರಮಸತ್ಯ.
ಶಿವ
ಎಂದರೆ,ಬಹುದೂರದ ತತ್ತ್ವವಲ್ಲ
ಎಲ್ಲರ ಅಂತರತಮ ಚೈತನ್ಯ.
ಶಿವ
ಎಂದರೆ ಹುಡುಕಿ ಪಡೆಯುವ ವಸ್ತುವಲ್ಲ
ತನ್ನಸ್ವರೂಪದ ಅರಿವು,ಸಾಕ್ಷಾತ್ಕಾರ.
ಶಿವ
ಎಂದರೆ ನಮ್ಮಿಂದ ದೂರ ಇರುವ
ಯಾವುದೋ ಲೋಕದ ದೇವರಲ್ಲ,
ನಮ್ಮೊಂದಿಗೆ ಇರುವ ನಮ್ಮ ಆತ್ಮಶಕ್ತಿ
ಶಿವ
ಎಂದರೆ ಸತ್ಯ
ಶಿವ
ಎಂದರೆ ನಿತ್ಯ
ಶಿವ
ಎಂದರೆ ಚಿತ್ತ
ಶಿವ
ಎಂದರೆ ಆನಂದ
ಶಿವ
ಎಂದರೆ ಕಲ್ಯಾಣ
ಶಿವ
ಎಂದರೆ ಅಶುಭನಿವಾರಕ
ಶಿವ
ಎಂದರೆ ಅನಿಷ್ಟನಿವಾರಕ
ಶಿವ
ಎಂದರೆ ಎಲ್ಲವೂ ಅಹುದು
ಶಿವ
ಎಂದರೆ ಏನೂ ಇಲ್ಲ !
ಶಿವ
ಎಂದರೆ ಅಹುದು ಅಲ್ಲಗಳಾಚೆಯ
ಪರವಸ್ತು,ಪರಬ್ರಹ್ಮ.
ಶಿವ
ಎಂದರೆ ಕಂಡು ಆನಂದಿಸಬಹುದಾದ
ಪರಮಪ್ರಮಾಣ !
ನಾನು ಶಿವ
ನೀವು ಶಿವ
ಕಲ್ಲುಶಿವ,ಮಣ್ಣುಶಿವ
ಅದು ಶಿವ ,ಇದು ಶಿವ
ಜಡವು ಶಿವ,ಚೇತನವು ಶಿವ
ಎಲ್ಲದರ ಹಿಂದೆಯೂ ಇರುವ ಶಿವ
ಎಲ್ಲದರ ಕಾರಣನೂ ಶಿವ
ಸೃಷ್ಟಿಯೂ ಶಿವ
ಸ್ಥಿತಿಯೂ ಶಿವ
ಸಂಹಾರವೂ ಶಿವ
ಕತ್ತಲೆ ಶಿವ
ಬೆಳಕು ಶಿವ
ಇರುವುದು ಶಿವ
ಆಗುವುದು ಶಿವ
ಎಲ್ಲವೂ ಶಿವನೆಂದರೆ
ಜಗತ್ ಸರ್ವವೂ ಶಿವನೆ
ಸರ್ವಂ ಶಿವಮಯಂ.

About The Author