ತಾಲೂಕ ಮಟ್ಟದ ಸಮಾರೋಪ ಬೇಸಿಗೆ ತರಬೇತಿ ಶಿಬಿರ:ಚಿಣ್ಣರಲ್ಲಿ ಅಡಗಿರುವ ಪ್ರತಿಭೆ ಅರಳಲು ಸಂಘ ಸಂಸ್ಥೆಗಳು ಪ್ರೋತ್ಸಾಹಿಸಿದಾಗ ಪ್ರತಿಭೆಗೆ ಬೆಲೆ ಸಿಗಲಿದೆ:ಡಾ:ಶರಣು ಗದ್ದುಗೆ

ಶಹಾಪೂರ: ಚಿಣ್ಣರಲ್ಲಿ ಅಡಗಿರುವ ಪ್ರತಿಭೆ ಅರಳಲು ಪಾಲಕರು,ಸಂಘ ಸಂಸ್ಥೆಗಳು ಪ್ರೋತ್ಸಾಹಿಸಿದಾಗ ಮಾತ್ರ ಪ್ರತಿಭೆಗೆ ಬೆಲೆ ಸಿಗಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷರಾದ ಡಾ.ಶರಣು ಗದ್ದುಗೆಯವರು ಹೇಳಿದರು.ಪಟ್ಟಣದ ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಹಾಪೂರ ರಾಜ್ಯ ಬಾಲ ಭವನ ಸೊಸೈಟಿ ಮತ್ತು ಜಿಲ್ಲಾ ಬಾಲಭವನ ಸೋಸೈಟಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ,ತಾಲ್ಲೂಕು ಪಂಚಾಯತ, ತಾಲ್ಲೂಕು ಬಾಲಭವನ, ತಾಲ್ಲೂಕು ಶಿಶು ಅಬಿವೃದ್ದಿ ಯೋಜನೆ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಬೇಸಿಗೆ ಶಿಬಿರಕ್ಕೆ ಸಸಿಗಳಿಗೆ ನೀರೆರೆಯುವ ಮುಖಾಂತರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತಾನಾಡಿದರು.

ಕಾರ್ಯಕ್ರಮದ ಸಾನ್ನಿಧ್ಯವಹಿಸಿದ
ಪಕಿರೇಶ್ವರ ಮಠದ ಪೂಜ್ಯ ಶ್ರೀ ಗುರುಪಾದ ಮಹಾಸ್ವಾಮಿಗಳು ಮಾತನಾಡುತ್ತಾ,ಗ್ರಾಮೀಣ ಬಾಗದ ವಿದ್ಯಾರ್ಥಿಗಳು ಕಲೆ ಸಾಹಿತ್ಯ ಸಂಗೀತ ನಾಟಕದಂತಹ ಪ್ರತಿಭೆಗಳಿಗೆ ಮನ್ನಣೆ ಸಿಗಬೇಕು. ಕೊರೊನಾದಿಂದ ಎರಡು ವರ್ಷಗಳ ಕಾಲ ಚಿಣ್ಣರ ಚಟುವಟಿಕೆ ಸ್ಥಗಿತವಾಗಿದ್ದವು. ಆಯ್ಕೆಯಾದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಯಶಸ್ವಿಯಾಗಲಿ ಎಂದು ಆಶೀರ್ವವಚನ ನೀಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರವೀಂದ್ರ ಹೊಸಮನಿಯವರು ಮಾತನಾಡುತ್ತಾ,ಐದರಿಂದ ರಿಂದ 16 ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸದುಪಯೋಗ ಪಡೆಸಿಕೊಳ್ಳಲು ಕರೆ ನೀಡಿದರು.ಶಹಾಪೂರದ ತಾಲ್ಲೂಕು ಮಟ್ಟದ 2022/23 ನೇ ಸಾಲಿನ ಶಿಬಿರವನ್ನು ಎಂಟು ದಿನಗಳವರೆಗೆ ಯೋಗ ಕರಾಟೆ ನೃತ್ಯ ಸಂಗೀತ ಚಿತ್ರಕಲೆಯ ತರಬೇತಿ ಪಡೆದು ಹೆಚ್ಚಿನ ಪ್ರಮಾಣದಲ್ಲಿ ರಾಜ್ಯಮಟ್ಟದಲ್ಲಿ ಗ್ರಾಮೀಣ ಮಕ್ಕಳು ಭಾಗವಹಿಸಬೇಕೆಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು. ಶಿಶು ಅಬಿವೃದ್ದಿ ಯೋಜನಾಧಿಕಾರಿಗಳಾದ ಸಾವಿತ್ರಿ ಗುಂಡಗುಂಟಿ, ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಗುರುಕಾಮ, ಸುನೀಲ್ ಶಿರ್ಣೆ, ತಿಪ್ಪಣ್ಣ ಖ್ಯಾತನಾಳ, ಬಸವರಾಜ ಕುರುಕುಂದಾ, ಸಹ ಶಿಕ್ಷಕರಾದ ಅಮೋಘ ಶಹಾಪೂರ, ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರದಲ್ಲಿ ತರಬೇತಿ ನೀಡಿದ ಸುರೇಖಾ ಕುಂಬಾರ, ಮಹೇಶ ಇಂದಿರಾ ನಗರ ಶಹಾಪೂರ, ಕಾರ್ಯಕ್ರಮ ಆಯೋಜಕರಾದ ಶರಣು ಎಸ್ ಕಾಡಂಗೇರಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

About The Author