ಮಹಾಶೈವ ಧರ್ಮಪೀಠಕ್ಕೆ ಬಿ.ವಿ.ನಾಯಕ್ ಭೇಟಿ | ವಿಜಯದುರ್ಗಾ ದೇವಿಯ ಆಶೀರ್ವಾದ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಪೀಠಕ್ಕೆ ಮಾಜಿ ಸಂಸದರಾದ ಡಿ.ವಿ.ನಾಯಕ ಭೇಟಿ ನೀಡಿದರು.

ಭಾರತೀಯ ಜನತಾ ಪಕ್ಷದಿಂದ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲಿರುವ ಮಾಜಿ ಸಂಸದ ಬಿ.ವಿ.ನಾಯಕ್ ಅವರು ಇಂದು ಸಂಜೆ ಮಹಾಶೈವ ಧರ್ಮಪೀಠಕ್ಕೆ ಭೇಟಿ ನೀಡಿ ಶ್ರೀಕ್ಷೇತ್ರ ಕೈಲಾಸದ ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿಯರ ಹಾಗೂ ಮಹಾಕಾಳಿ ದೇವಿಯರ ದರ್ಶನ ಪಡೆದರು.ಮಹಾಶೈವ ಧರ್ಮಪೀಠದಲ್ಲಿ ತನ್ನನ್ನು ನಂಬಿ ಬರುವ ಭಕ್ತರಿಗೆ ನಿಶ್ಚಿತ ವಿಜಯವನ್ನು ಕರುಣಿಸುತ್ತ ‘ ವಿಜಯದುರ್ಗೆ’ ಎಂದು ಬಿರುದುಗೊಂಡಿರುವ ವಿಶ್ವೇಶ್ವರಿ ದುರ್ಗಾದೇವಿಯ ಸನ್ನಿಧಿಯಲ್ಲಿ ರಾಜಕೀಯ ಯಶಸ್ಸಿಗಾಗಿ ಪ್ರಾರ್ಥಿಸಿದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಬಿ.ವಿ.ನಾಯಕ್ ಅವರಿಗೆ ವಿಜಯದುರ್ಗಾದೇವಿಯ ‘ ವಿಜಯಾಭಯ’ ಕರುಣಿಸಿ,ರಾಯಚೂರು ಸಂಸದರಾಗಿ ಆಯ್ಕೆ ಯಾಗಿ ಮತ್ತೆ ತಾಯಿಯ ದರ್ಶನಕ್ಕೆ ಬನ್ನಿ ಎಂದು ವಿಜಯಹಾರೈಸಿ ಬಿ.ವಿ.ನಾಯಕ್ ಅವರನ್ನು ವಿಶ್ವೇಶ್ವರಿ ದುರ್ಗಾದೇವಿಯ ಸನ್ನಿಧಿಯಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ, ಮಲ್ಲಿಕಾರ್ಜುನ ಜಕ್ಕಲದಿನ್ನಿ,ಹನ್ಮಂತಪ್ಪ ಹಟ್ಟಿ,ಗೋಪಾಲಮಸೀದಪುರ,ಬಾಬುಗೌಡ ಯಾದವ ಸುಲ್ತಾನಪುರ,ಪತ್ರಕರ್ತ ರಮೇಶ ಖಾನಾಪುರ,ವೀರೇಶ ಯಾದವ,ಯಲ್ಲಪ್ಪ ಕರಿಗಾರ,ರಂಗನಾಥ ಮಸೀದಪುರ,ವೆಂಕಟೇಶ,ಗ್ರಾಪಂ ಸದಸ್ಯ ನಾಗಪ್ಪ ಅಮನಳ್ಳಿ,ಬೂದೆಪ್ಪ ನಾಯಕ್,ಹನುಮೇಶ,ಬಸವರಾಜ ಜಿ,ಕರಿಗಾರ,ಬೂದೆಪ್ಪ ಬಳ್ಳಾರಿ ಮೊದಲಾದವರು ಉಪಸ್ಥಿತರಿದ್ದರು.