ನಾಳೆ ವಿಜಯನಗರ ಜಿಲ್ಲೆ ಹೋಸಪೇಟೆಯಲ್ಲಿ ಸಚಿವರಿಂದ ಬಸವಣ್ಣ, ಅಂಬೇಡ್ಕರ್ ರವರ ಗೀತೆಗಳ ಧ್ವನಿ ಸುರುಳಿ ಬಿಡುಗಡೆ

ಬಳ್ಳಾರಿ :ವಿಜಯನಗರ ಜಿಲ್ಲೆ ಹೋಸಪೇಟೆಯಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್ ತತ್ವದ ಅನುಯಾಯಿ, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ರಚಿಸಿ ಬರೆಯಿಸಿ ಹಾಡಿಸಿರುವ ಜಗಜ್ಯೋತಿ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾII ಬಿ ಅರ್ ಅಂಬೇಡ್ಕರ್ ಅವರ ಗೀತೆಗಳ ಧ್ವನಿ ಸುರುಳಿಯನ್ನು ಫೇ,27 ಮಂಗಳವಾರ ಸಂಜೆ 4 ಗಂಟೆಗೆ ವಿಜಯನಗರ ಜಿಲ್ಲೆಯ ಜಿಲ್ಲೆ ಹೋಸಪೇಟೆಯಲ್ಲಿ ಉಸ್ತುವಾರಿ ಸಚಿವರು ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಬಿಡುಗಡೆ ಮಾಡಲಿದ್ದಾರೆ ಎಂದು ಕೆಪಿಸಿಸಿ ರಾಜ್ಯ ವಕ್ತಾರರು, ಸಂತೋಷ ಲಾಡ್ ಆಪ್ತರಾದ ಬಿಎಮ್ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿಜಯನಗರದ ಪುನೀತ್ ರಾಜಕುಮಾರ್ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹಾಗೂ ಕಾರ್ಯಕ್ರಮಕ್ಕೆ ಬಳ್ಳಾರಿ ಜಿಲ್ಲೆಯ ಪ.ಜಾತಿ,ಪೈ.ಪಂಗಡ,ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಸೇರಿದಂತೆ ಎಲ್ಲಾ ಸಂಘಟನೆಗಳ ಮುಖಂಡರು, ಬಸವಣ್ಣನವರ ಅನುಯಾಯಿಗಳು, ಅಂಬೇಡ್ಕರ್ ಅನುಯಾಯಿಗಳು, ದಲಿತಪರ ಸಂಘಟನೆಗಳು, ಹಿಂದುಳಿದ ವರ್ಗಗಳ ಹೋರಾಟಗಾರರು, ಶೋಷಿತ ವರ್ಗಗಳ ಪರ ಹೋರಾಟಗಾರರು, ಹಾಗು ಸಂತೋಷ್ ಲಾಡ್ ಅಭಿಮಾನಿಗಳು, ವಿವಿದ ಸಂಘಟನೆಗಳ ಹೋರಾಟಗಾರರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪಾಟೀಲರು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *