15ನೇ ದಾಖಲೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ : ಬಡವರ ದೀನದಲಿತರ ಪರ ಬಜೆಟ್ : ಸಂಚಾರಿ ಕುರಿಗಾರರಿಗೆ ಭರಪೂರ ಕೊಡುಗೆ

ಶಹಾಪುರ : ಹಣಕಾಸು ಖಾತೆ ಹೊಂದಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆಯ 15ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ದೀನ ದಲಿತರ ಬಡವರ ಹಿಂದುಳಿದ ವರ್ಗದವರ ಪರ ಬಜೆಟ್ ಇದಾಗಿದ್ದು ಶೋಷಿತ ವರ್ಗದವರಿಗೆ ಅನುಕೂಲವಾಗುವಂತಹ ಅಂಶಗಳು ಬಜೆಟ್ ನಲ್ಲಿ ಘೋಷಿಸಲಾಗಿದೆ.56000 ಕೋಟಿ ರೂ ಗ್ಯಾರಂಟಿ ಯೋಜನೆಗಳನ್ನು ನೇರವಾಗಿ ಬಡ ಜನರಿಗೆ ಅನುಕೂಲವಾಗುವಂತಹ ಯೋಜನೆಗಳು ಒಳಗೊಂಡಿವೆ ಎಂದು ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ನಿರ್ದೇಶಕರಾದ  ಶಾಂತಗೌಡ ಪಾಟೀಲ್ ನಾಗನಟಗಿ ಸಂತಸ ವ್ಯಕ್ತಪಡಿಸಿದ್ದಾರೆ.

ಹಣಕಾಸು ತಜ್ಞರಾದ ಮುಖ್ಯಮಂತ್ರಿಗಳು ಎಲ್ಲಾ ಇಲಾಖೆಗಳಿಗೆ ಅನುದಾನ ನೀಡಿದ್ದು,ಗ್ರಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೆ ಪೂರಕವಾದ ಅನುದಾನವನ್ನು ನೀಡಿದ್ದಾರೆ ಎಂದು ಹೇಳಿದರು.

ಸಂಚಾರಿ ಕುರಿಗಾರರಿಗೆ ಭರಪೂರ ಕೊಡುಗೆ.

ಮುಖ್ಯಮಂತ್ರಿಗಳು ಸಂಚಾರಿ ಕುರಿಗಾರರನ್ನು ಗಮನದಲ್ಲಿಟ್ಟುಕೊಂಡು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವ ಸಂಚಾರಿ ಕುರಿಗಾರರಿಗೆ ಹಲವು ಅನುಕೂಲಕರ ಯೋಜನೆಗಳನ್ನು  ನೀಡಿದ್ದಾರೆ. ಸರಕಾರದ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಚಾರಿ ಕುರಿಗಾರರ ಮಕ್ಕಳಿಗೆ ವಿಶೇಷ ಮೀಸಲಾತಿಯನ್ನು ಕೊಡಲಾಗುವುದು. ಸಂಚಾರಿ ಕುರಿಗಾರರಿಗೆ ವಿದ್ಯಾರ್ಥಿ ವೇತನವನ್ನು ಒದಗಿಸಿ ಕೊಟ್ಟಿದ್ದಾರೆ. ಅವರಿಗೆ ಗುರುತಿನ ಚೀಟಿ ನೀಡಲಾಗುವುದು ಎಂದು ಪ್ರಸ್ತುತ ಬಜೆಟ್ ನಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದರು.

ಸಂಚಾರಿ ಕುರಿಗಾರರ ಮೇಲೆ ಪದೇ ಪದೇ ದೌರ್ಜನ್ಯವಾಗುತ್ತಿರುವುದನ್ನು ಅರಿತ ಮುಖ್ಯಮಂತ್ರಿಗಳು ಸಂಚಾರಿ ಕುರಿಗಾರರ ಮೇಲೆ ದೌರ್ಜನ್ಯವನ್ನು ತಡೆಯಲು ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.ಸಂಚಾರಿ ಕುರಿಗಾರರು ಇರುವ ಸ್ಥಳದಲ್ಲಿಯೇ ವೈದ್ಯರು ಬಂದು ಕುರಿಗಳಿಗೆ ಲಸಿಕೆ ಹಾಕುವ ವ್ಯವಸ್ಥೆಯನ್ನು ಒದಗಿಸಿ ಕೊಟ್ಟಿದ್ದಾರೆ. ಅಮೃತ್ ಸ್ವಾಭಿಮಾನಿ ಯೋಜನೆ ಅಡಿ 10,000 ಫಲಾನುಭವಿ ಕುರಿಗಾರರಿಗೆ ಸಹಾಯಧನ ನೀಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

About The Author