ಜನರ ದಿಕ್ಕು ತಪ್ಪಿಸಲು ಆಜಾನ್ ವಿಷಯ ಪ್ರಸ್ತಾಪಿಸುತ್ತಿರುವ ಬಿ.ಜೆ.ಪಿ ಸರ್ಕಾರ ಕೆ.ನೀಲಾ ಆರೋಪ

ಶಹಾಪುರ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷ ಕಳೆದರೂ ಸಾಮಾನ್ಯ ಜನರ, ರೈತರ, ಬಡವರ ಬದುಕು ಹಸನಾಗಲಿಲ್ಲ.ದಿನದಿಂದ ದಿನಕ್ಕೆ ಪ್ರೆಟ್ರೋಲ್, ಡಿಸೇಲ್, ಗ್ಯಾಸ್, ಜೀವನಾವಶ್ಯಕ ವಸ್ತುಗಳಾದ ಎಣ್ಣೆ , ಆಹಾರ, ಧಾನ್ಯ , ಔಷಧ, ರಸಗೊಬ್ಬರ ಬೆಲೆ ಗಗನಕ್ಕೇರಿವೆ.ಇವುಗಳ ಬಗ್ಗೆ ಯೋಚಿಸದ ಸರಕಾರ ಜನತೆಯ ದಿಕ್ಕು ತಪ್ಪಿಸಲು ಆಜಾನ್ ವಿಷಯ ಎತ್ತುತ್ತಿದ್ದಾರೆ ಎಂದು ಬಾರತ ಕಮ್ಯೂನಿಷ್ಠ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ನೀಲಾ.ಕೆ ಆಕ್ರೋಶ ವ್ಯಕ್ತಪಡಿಸಿದರು. ನಗರದ ಬಸವೇಶ್ವರ ವೃತ್ತದಲ್ಲಿ ಬಾರತ ಕಮ್ಯೂನಿಷ್ಠ ಪಕ್ಷದ ಜಿಲ್ಲಾ ಸಂಘಟನೆವತಿಯಿಂದ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು.

ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಮಾಡಿದ್ದಾರೆ. ದೇಶಕ್ಕೆ ಉಳಿದಿರುವುದು ಹೋರಾಟದ ಮಾರ್ಗ. ಹೋರಾಟ ಬಿಟ್ಟರೆ ಜೀವನ ಸಂಪೂರ್ಣ ನರಕ ಮಾಡುವ ನೀತಿ ಬಿಜೆಪಿ ಸರ್ಕಾರದ್ದು. ಮೋದಿಯವರು ಆಡಳಿತಕ್ಕೆ ಬಂದ ನಂತರ 100 ಪಟ್ಟು ಹಣ ವಸೂಲಿ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ರಾಷ್ಟ್ರೀಯ ಉದಾರೀಕರಣ, ಜಾಗತೀಕರಣದ ಬೀಜ ಬಿತ್ತಿದ್ದು ಕಾಂಗ್ರೇಸ್ .ಅದರ ಬೆಳೆ ತೆಗೆದು ಫಸಲು ಮಾಡುತ್ತಿರುವುದು ಬಿ.ಜೆ.ಪಿ. ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಹಿಂದು ಮುಸ್ಲಿಮರ ನಡುವೆ ಜಗಳ ಹೊತ್ತಿಸುತ್ತಿದ್ದಾರೆ. ಬಿಜೆಪಿ ನಾಚಿಕೆಗೆಟ್ಟ ಸರ್ಕಾರವಾಗಿದ್ದು,400 ರೂ. ಇದ್ದ ಗ್ಯಾಸ್ ಬೆಲೆಯನ್ನು 1150 ರೂ ಗೆ ಏರಿಸಿದೆ. ಬಡವರಿಗೆ ಬಡವರನ್ನಾಗಿ,ದೊಡ್ಡ ಕಂಪನಿಗಳಾದ ಅಂಬಾನಿ, ಅದಾನಿ ಯಂತವರಿಗೆ ತೆರಿಗೆ ಮನ್ನಾ ಮಾಡಿ ಕೋಟಿಗಟ್ಟಲೆ ಹಣ ಲೂಟಿ ಮಾಡಲು ಅವಕಾಶ ನೀಡುತ್ತಿದೆ ಎಂದು ಕಿಡಿ ಕಾರಿದರು.

ಮುಖಂಡರಾದ ಚೆನ್ನಪ್ಪ ಆನೆಗುಂದಿ ಮಾತನಾಡಿ ಜಿಲ್ಲೆಯಾದ್ಯಂತ ನಕಲಿ ಬೀಜ ಮಾರಾಟ ಮಾಡುತ್ತಿದ್ದು ರೈತರಿಗೆ ವಂಚಿಸುತ್ತಿದ್ದಾರೆ. ಕೃಷಿ ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದರು.

ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ದಾವಲಸಾಬ್ ನದಾಫ್, ಎಸ್.ಎಂ ಸಾಗರ್, ಜೈಲಾಲ್ ತೋಟದಮನಿ, ಗುಲಾಮ್ ಸಾಬ್, ವಿಜಯ ರಾಠೋಡ್, ಭೀಮಣ್ಣ ಬಾಣತಿಹಾಳ, ಅಂಬಲಯ್ಯ ಬಾಣತಿಹಾಳ್, ಸುನಂದಾ ಹಿರೇಮಠ, ಹಣಮಂತಿ ಮೌರ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author