ಮಠಗಳು ಭಕ್ತರ ಕಾಣಿಕೆ ಸ್ವೀಕರಿಸುವ ಆಧ್ಯಾತ್ಮಿಕ ಕೇಂದ್ರಗಳಾಗಬಾರದು.ಸರ್ವ ಧರ್ಮಗಳಲ್ಲಿ ಸಾಮರಸ್ಯ ಸಾರುವ ಕಾರ್ಖಾನೆಗಳಾಗಬೇಕು:ಡಾ.ರುದ್ರಮುನಿ ಶಿವಾಚಾರ್ಯರು

ಶಹಾಪುರ:ಮಠಗಳು ಭಕ್ತರ ಕಾಣಿಕೆ ಸ್ವೀಕರಿಸುವ ಆಧ್ಯಾತ್ಮಿಕ ಕೇಂದ್ರಗಳಾಗಬಾರದು.ಸರ್ವ ಧರ್ಮಗಳಲ್ಲಿ ಸಾಮರಸ್ಯ ಸಾರುವ ಕಾರ್ಖಾನೆಗಳಾಗಬೇಕು ಎಂದು ಕಡಕೊಳ ಮಡಿವಾಳೇಶ್ವರ ಮಠದ ಷ.ಬ್ರ. ಶ್ರೀ ಡಾ:ರುದ್ರಮುನಿ ಶಿವಾಚಾರ್ಯರು ನುಡಿದರು. ತಾಲೂಕಿನ ಹೊತಪೇಠದ ಹಾಲಭಾವಿ ಕೈಲಾಶ ಆಶ್ರಮದ 20 ನೇ ಜಾತ್ರಾ ಮಹೋತ್ಸವದ ನಿಮಿತ್ತ ಸಮಾರೋಪ ಸಮಾರಂಭ ಸಾಮೂಹಿಕ ವಿವಾಹದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಸಂಸಾರದಲ್ಲಿ ಸದ್ಗತಿ ಕಂಡಾಗ ಮಾತ್ರ ಜೀವನ ಸಾರ್ಥಕ. ಮಠವು ಧಾರ್ಮಿಕ ಸಾಮಾಜಿಕ ಸೇವೆಯನ್ನು ನೀಡುತ್ತಾ ಬಂದಿದ್ದು, ಮಠದಲ್ಲಿ ವಿವಾಹವಾದವರು ಇಲ್ಲಿನ ಮಹಿಮೆಯಿಂದ ಶಾಂತಿ ಸೌಹರ್ದತೆ ಹಾಗೂ ಅನ್ಯೊನ್ಯವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು. ಮನುಕುಲ ಒಳಿತಿಗಾಗಿ ಶ್ರೀ ಮಠವು ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಜಾತಿ ಮತಗಳ ಜಂಜಾಟವಿಲ್ಲದೆ ಸಕಲರನ್ನು ಸಂಭೂತರೆಂದು ಕಾಣಲಾಗುತ್ತಿದೆ ಎಂದರು.

ಕರವೇ ತಾಲೂಕ ಅಧ್ಯಕ್ಷ ಭೀಮಣ್ಣ ಶಖಾಪುರ ಪ್ರಾಸ್ತವಿಕವಾಗಿ ಮಾತನಾಡುತ್ತಾ, ಮಠಗಳು ಆದರ್ಶಗಳನ್ನು ಬಿತ್ತರಿಸುವ ಕೇಂದ್ರಗಳಾಗಬೇಕು.ಸಾಂಸಾರಿಕ ಜೀವನಕ್ಕೆ ಅಡಿ ಇಡುತ್ತಿರುವ ನೂತನ ದಂಪತಿಗಳು ಕಷ್ಟ ಸುಖಗಳೆರಡರಲ್ಲೂ ಬದುಕು ನಡೆಸುವಂತೆ ಸಲಹೆ ನೀಡಿದರು. ಉಚಿತ ಸಾಮೂಹಿಕ ವಿವಾಹ ಉತ್ತಮ ಧರ್ಮಕಾರ್ಯ ಪ್ರೀತಿ ವಿಶ್ವಾಸ ಮತ್ತು ಗೌರವಾದರಗಳಿಂದ ಸಮ ಜೀವನ ನಡೆಸಿ ಎಂದರು.

ಸುಮಾರು 15 ಜೋಡಿಗಳು ಇಂದು ನವ ಜೀವನಕ್ಕೆ ಕಾಲಿರಿಸಿದರು. ಚಿಣಮಗೇರಿ ಷ.ಬ್ರ ಶ್ರೀ ವೀರಮಹಾಂತ ಶಿವಾಚಾರ್ಯರು,ಸಗರ ಷ.ಬ್ರ ಶ್ರೀ ಮರುಳ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು,ಕೆಲ್ಲೂರ ಅಮೋಘಸಿದ್ದೇಶ್ವರರು, ತರಳಗಿನಮಠದ ಪೂಜ್ಯ ಶ್ರೀ ದೊಡ್ಡಣ್ಣ ಒಡೆಯರು,ನಾಗನಟಗಿ ಶ್ರೀ ವೇ.ಮೂ ಸಿದ್ದರಾಮೇಶ್ವರ ಮಹಾಸ್ವಾಮಿಗಳು,ಸಾಧು ಮಹಾರಾಜರು ಸಾನಿಧ್ಯ ವಹಿಸಿ ಕೊಂಡಿದ್ದರು.

ಈ ಸಂದರ್ಭದಲ್ಲಿ ಧರ್ಮಣ್ಣ ಹೊತಪೇಠ, ಹೊನ್ನಪ್ಪಗೌಡ ಕೆ ಪಾಟೀಲ್, ಮಲ್ಲರೆಡ್ಡಿ ಪಾಟೀಲ್ ಹೊತಪೇಠ, ಸಿದ್ದಣ್ಣಗೌಡ ಪೋ.ಪಾಟೀಲ್, ಭೀಮರೆಡ್ಡಿಗೌಡ ಪೊಲೀಸ್ ಪಾಟೀಲ್, ಮಹಾದೇವಪ್ಪ ಸಾಲಿಮನಿ, ಸಂತೊಷ ಬೆಳಗಾವ್, ಶರಣು ದೊರೆ, ಸಿದ್ದಲಿಂಗಪ್ಪ ಸಾಹು ನೆಲ್ಲೆಗಿ, ಮಹಾದೇವಪ್ಪ ಪೂಜಾರಿ, ದೇವುಗೌಡ ಬಡಿಗೇರ, ಸುರೇಶ ಚೌದರಿ, ಸಿದ್ದಣ್ಣಗೌಡ ಹುರಸಗುಂಡಗಿ, ಭೀಮರಡ್ಡಿ ಹಾಲಭಾವಿ ಸೇರಿದಂತೆ ಭಕ್ತ ಸಮೂಹ ಪಾಲ್ಗೊಂಡಿತ್ತು.

  ನವ ದಂಪತಿಗಳು ಪ್ರೀತಿ ವಿಶ್ವಾಸದಿಂದ ನೆಮ್ಮದಿಯ ಜೀವನ ನಡೆಸಬೇಕು. ಮದುವೆ ಪಾವಿತ್ರ್ಯವನ್ನು ಅರ್ಥ ಮಾಡಿಕೊಂಡು ಸಾರ್ಥಕ ಜೀವನ ನಡೆಸಬೇಕು. ಬಡ ಭಕ್ತರ ಸೇವೆ ಸಲ್ಲಿಸುವುದೇ ಕಾಯಕವಾಗಿದೆ. ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು 7 ಲಕ್ಷ ಧೇಣಿಗೆ ನೀಡಿದ್ದಾರೆ. ಮತ್ತಷ್ಟು ಮಠದ ಅಭಿವೃದ್ಧಿ ಕಾರ್ಯ ಮಾಡುವುದಾಗಿ ಹೇಳಿದ್ದಾರೆ. ಶ್ರೀ ಮಠದಿಂದ ಇಲ್ಲಿಯವರೆಗೆ 560 ಜೋಡಿಗಳಿಗೆ ಸಾಮೂಹಿಕವಾಗಿ ಮದುವೆ ಮಾಡಲಾಗಿದ್ದು ಮುಂದೆಯೂ ನಿರಂತರವಾಗಿ ಭಕ್ತರ ಸೇವೆ ನಡೆಯಲಿದೆ.

ಪೂಜ್ಯ ಶ್ರೀ ಶಿವಲಿಂಗ ಮಹಾಸ್ವಾಮಿಗಳು
ಕೈಲಾಶ ಆಶ್ರಮ ಹೊತಪೇಠ ಹಾಲಭಾವಿ.

ಶಹಾಪುರ ಕ್ಷೇತ್ರದ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರ ನಿರ್ದೇಶನದಂತೆ ಮಠಕ್ಕೆ ಸಹಾಯ ಮಾಡುತ್ತಿದ್ದೇವೆ. ಈಗಾಗಲೇ ಮಠದ ಅಭಿವೃದ್ಧಿಗೆ 10 ಲಕ್ಷ ರೂ ದೇಣಿಗೆ( ಧರ್ಮ ಕಾರ್ಯಕ್ಕಾಗಿ)ನೀಡಲಾಗಿದ್ದು, ಇಲ್ಲಿ ಕಲ್ಯಾಣ ಮಂಟಪದ ಅವಶ್ಯಕತೆ ಇದ್ದು ಅದನ್ನು ನಿರ್ಮಿಸಿಕೊಟ್ಟು ಮುಂದೆ ಶಾಸಕ ದರ್ಶನಾಪುರ ಮತ್ತು ನಾನು ಉದ್ಘಾಟಿಸುತ್ತೇವೆ. ಈ ಕ್ಷೇತ್ರದಲ್ಲಿ ಸರ್ವ ಧರ್ಮಿಯವಾಗಿ ನಿರಂತರವಾಗಿ ಧಾರ್ಮಿಕ ಕೆಲಸ ನಡೆಯಲಿ.ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ.

ತಿಪ್ಪಣ್ಣಪ್ಪ ಕಮಕನೂರ
ಮಾಜಿ ವಿಧಾನ ಪರಿಷತ್ ಸದಸ್ಯರು ಕಲಬುರಗಿ

About The Author